Advertisement
* ಪ್ರೇಮ್ ದಳಪತಿಯಲ್ಲಿ ಸಂಪೂರ್ಣ ಬದಲಾಗಿದ್ದಾರಂತೆ?ಹಾಗೇನೂ ಇಲ್ಲ. ಆದರೆ, ಎಂದಿನ ಚಿತ್ರಗಳಿಗಿಂತ ಕೊಂಚ ಹೊಸ ಬದಲಾವಣೆ ಇಲ್ಲಿದೆ. ಸಿನಿಮಾ ನೋಡಿದವರಿಗೆ ಪಕ್ಕಾ ಬದಲಾವಣೆ ಏನೆಂಬುದಂತೂ ಗೊತ್ತಾಗಲಿದೆ.
ನಾನು ಇದುವರೆಗೆ ಹಲವು ಚಿತ್ರಗಳಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೆ. ಆದರೆ, ಇಲ್ಲಿ “ಲವ್ ಲೀಡರ್’ ಆಗಿ ಕಾಣಿಸಿಕೊಂಡಿದ್ದೇನೆ. ಅದೇ ಆ ಬದಲಾವಣೆಯ ವಿಶೇಷ. ಲವ್ ಲೀಡರ್ ಯಾಕಾಗುತ್ತಾನೆ ಎಂಬುದೇ ಚಿತ್ರದ ಹೈಲೆಟ್. *ಹಾಗಾದರೆ ಲವ್ ಲೀಡರ್ ಇಲ್ಲಿ ಪ್ರೀತಿಗಾಗಿ ಹೊಡೆದಾಡುತ್ತಾನೆ ಅಂದಗಾಯ್ತು?
ಪ್ರೀತಿಸುವ ಪ್ರತಿಯೊಬ್ಬರಿಗೂ ಆ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅಲ್ಲೊಂದು ಭಯ ಇದ್ದೇ ಇರುತ್ತೆ. ಪ್ರೀತಿ ಮಾಡುವ ಶ್ರೀಮಂತನೇ ಇರಲಿ, ಬಡವನೇ ಇರಲಿ, ಆ ಪ್ರೀತಿಯನ್ನು ಪಡೆದುಕೊಳ್ಳಲು ಹರಸಾಹಸ ಪಡೆಯಲೇಬೇಕು. ಅಂಥವರಿಗೊಂದು ಸಂದೇಶ ಇಲ್ಲಿದೆ. ಅಂತಹ ಸಮಸ್ಯೆಯನ್ನು ಹೇಗೆ ದಾಟಿ ಹೊರಬರಬೇಕು ಎಂಬುದನ್ನು ಆ ಲವ್‌ಲೀಡರ್ ಇಲ್ಲಿ ವಿಶೇಷವಾಗಿ ಹೇಳಿದ್ದಾನೆ. ಅದೇ “ದಳಪತಿ’ಯ ಸ್ಪೆಷಲ್ಲು.
Related Articles
ಇಲ್ಲಿ ಓಹೋ ಎನ್ನುವಂತಹ ಆ್ಯಕ್ಷನ್‌ಗಳಿಲ್ಲ. ಬಾಂಬ್ ಸಿಡಿಯುವಂತಹ ಸನ್ನಿವೇಶಗಳಿಲ್ಲ. ಟಾಟಾ ಸುಮೋ ಎಗರುವುದೂ ಇಲ್ಲ. ಆದರೆ, ಕಮರ್ಷಿಯಲ್ ಲವ್‌ಸ್ಟೋರಿಯಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಮಾಸ್ ಮತ್ತು ಕ್ಲಾಸ್ ಅಂಶಗಳಿಗೇನೂ ಬರವಿಲ್ಲ. ಒಂದು ಕಂಪ್ಲೀಟ್ ಮಾಸ್ ಮತ್ತು ಕ್ಲಾಸ್ ಫೀಲ್ ಇರುವಂತಹ ಪಕ್ಕಾ ಲವ್‌ಸ್ಟೋರಿ ಚಿತ್ರವಿದು. ಪ್ರೀತಿಸೋರಿಗೆ, ಪ್ರೀತಿಸಬೇಕೆಂದಿರುವವರಿಗೆ ಸ್ಪೆಷಲ್ ಸಿನಿಮಾ ಅನ್ನಲ್ಲಡ್ಡಿಯಿಲ್ಲ.
Advertisement
* “ದಳಪತಿ’ ತುಂಬಾನೇ ತಡವಾಯಿತಲ್ವಾ?ನಿಜ ಹೇಳಬೇಕೆಂದರೆ, “ದಳಪತಿ’ ವೇಳೆಯಲ್ಲಿ ನಾನು “ಚೌಕ’ದಲ್ಲಿದ್ದೆ. ನಿರ್ದೇಶಕ ಪ್ರಶಾಂತ್‌ರಾಜ್ “ಜೂಮ್’ ಮೂಡ್‌ನಲ್ಲಿದ್ದರು. ಅತ್ತ, ಕೃತಿ ಕರಬಂದ ಕೂಡ ತೆಲುಗು, ಹಿಂದಿ ಚಿತ್ರಗಳಲ್ಲಿ ಬಿಜಿಯಾಗಿದ್ದರು. ಎಲ್ಲರೂ ಆ ಜವಾಬ್ದಾರಿಗಳನ್ನು ಮುಗಿಸಿಕೊಂಡು ಬರಲೇಬೇಕಿತ್ತು. ಆ ಬಳಿಕ “ದಳಪತಿ’ ಶುರುವಾಯ್ತು. ಸ್ವಲ್ಪ ತಡವಾಗಿದೆ. ಆದರೂ ಲವ್ ಲೀಡರ್‌ನನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. * “ದಳಪತಿ’ಯಲ್ಲಿ ಪ್ರೇಮ್ ಪಾತ್ರವೇನು?
ಈಗಲೇ ಎಲ್ಲವನ್ನೂ ಹೇಳುವುದು ಕಷ್ಟ. ಅದನ್ನು ಸಿನಿಮಾದಲ್ಲೇ ನೋಡಬೇಕು. ಎರಡು ಶೇಡ್ ಪಾತ್ರವಿದೆ. ಮೊದಲು ಕ್ಲಾಸ್, ಆಮೇಲೆ ಮಾಸ್. ಹೊಸತರಹ ಫೀಲ್ ಕೊಡುವಂತಹ ಪಾತ್ರ ಸಿಕ್ಕಿದೆ. ನನ್ನ ಪ್ರಕಾರ, ನನ್ನ ಕೆರಿಯರ್‌ನಲ್ಲಿ “ದಳಪತಿ’ ವಿಶೇಷ ಕಥೆವುಳ್ಳ ಚಿತ್ರ. * “ದಳಪತಿ’ ಬಗ್ಗೆ ಒನ್‌ಲೈನ್ ಹೇಳುವುದಾದರೆ?
ಪ್ರೀತಿಸುವವರಿಗೆ ಮತ್ತು ಸಂಬಂಧಗಳಿಗೆ ಯಾವುದೇ ಅಡ್ಡಿ ಆತಂಕ ಬಂದರೂ, “ದಳಪತಿ’ಯಾಗಿ ಅವೆಲ್ಲದರ ಸಮಸ್ಯೆ ಬಗೆಹರಿಸಲು ಸಿದ್ಧರಾಗಿರಬೇಕು ಎಂಬ ಕಥೆ ಇಲ್ಲಿದೆ. ಉಳಿದಂತೆ ಚಿತ್ರದಲ್ಲಿ ಚಿತ್ರಕಥೆ ಹೊಸದಾಗಿದೆ. ಚರಣ್ ಹಾಡುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಹಾಡು ಇಲ್ಲಿದೆ. ಅದರಲ್ಲೂ, ನಾನು ಟೈಟಲ್ ಸಾಂಗ್‌ನಲ್ಲಿ ಹುಡುಗಿಯರನ್ನು ಬೈಯುವ ಹಾಡೊಂದನ್ನು ಹಾಡಿದ್ದೇನೆ. ಅದೊಂಥರಾ ಮಜವಿದೆ. ಹುಡುಗರಿಗೆ ಖಂಡಿತ ಇಷ್ಟವಾಗುತ್ತೆ ಅದು.
* ಮುಂದಿನ ಚಿತ್ರಗಳು?
“ಲೈಫ್ ಜೊತೆ ಒಂದು ಸೆಲ್ಫಿ’ ನನ್ನ 24 ನೇ ಚಿತ್ರ. ಈಗಾಗಲೇ ಅದು ಮಗಿದಿದ್ದು, ಇನ್ನಷ್ಟು ಹೊಸ ಚಿತ್ರಗಳ ಮಾತುಕತೆ ನಡೆದಿದೆ. ಕಥೆಗಳನ್ನು ಕೇಳುತ್ತಿದ್ದೇನೆ. “ದಳಪತಿ’ ಬಿಡುಗಡೆ ಬಳಿಕ ಹೊಸ ಪ್ರಾಜೆಕ್ಟ್ ಬಗ್ಗೆ ಗಮನ. 25 ನೇ ಚಿತ್ರ ಯಾವುದಾಗುತ್ತೋ ಗೊತ್ತಿಲ್ಲ. ಸದ್ಯದಲ್ಲೇ ಅನೌನ್ಸ್ ಮಾಡ್ತೀನಿ.