Advertisement

ರೌಡಿ ಫೆಲೋ ಜೊತೆ ಪ್ರೇಮ್‌

02:16 PM Sep 23, 2020 | Suhan S |

ಆರ್‌ಜೆ ರೋಹಿತ್‌ “ರೌಡಿ ಫೆಲೋ’ ಎಂಬ ಸಿನಿಮಾವನ್ನು ನಿರ್ದೇಶಿಸಿ, ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದೆ. ಅದು ಪ್ರೇಮ್‌. ಹೌದು, “ನೆನಪಿರಲಿ’ ಪ್ರೇಮ್‌ “ರೌಡಿ ಫೆಲೋ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದು,ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರವಂತೆ.

Advertisement

ಅಂದಹಾಗೆ, ರೋಹಿತ್‌ ನಿರ್ದೇಶನದ ಈ ಚಿತ್ರದ ಹಿಂದೆ “ಕೆಜಿಎಫ್’ ಖ್ಯಾತಿಯ ಪ್ರಶಾಂತ್‌ ನೀಲ್‌ ಇದ್ದಾರೆ. ಇಡೀ ಸಿನಿಮಾದ ಸ್ಕ್ರಿಪ್ಟ್ ಕೆಲಸ ಪ್ರಶಾಂತ್‌ ನೀಲ್‌ ಅವರ ಸಮ್ಮುಖದಲ್ಲೇ ಆಗಿದೆ. ಅವರ ಮಾರ್ಗದರ್ಶನದಲ್ಲೇ, ಸ್ಕ್ರಿಪ್ಟ್ ರೆಡಿಯಾಗಿದ್ದು, ಇದೀಗ “ರೌಡಿ ಫೆಲೋ’ ಮೂಲಕ ನಿರ್ದೇಶನದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ರೋಹಿತ್‌.

ಈ ಹಿಂದೆ “ಕರ್ವ’ ಸಿನಿಮಾ ಮೂಲಕ ಸುದ್ದಿಯಾಗಿದ್ದ ರೋಹಿತ್‌ ಆ ಬಳಿಕ ಅವರು”ಬಕಾಸುರ’ ಚಿತ್ರದಲ್ಲಿ ನಟಿಸಿದ್ದರು. ರವಿಚಂದ್ರನ್‌ ಜೊತೆ ಮಾಡಿದ ಎರಡನೇ ಸಿನಿಮಾ ಅದಾಗಿತ್ತು.ರೋಹಿತ್‌ಗೆ ಈ ಚಿತ್ರದಲ್ಲಿ ವಿದ್ಯಾ ಪ್ರದೀಪ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರ ಪದ್ಮಾವತಿ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಲವಿತ್‌ ಕುಮಾರ್‌ ಛಾಯಾಗ್ರಹಣವಿದೆ. ನಕುಲ್‌ ಅಭಯಂಕರ್‌ ಅವರ ಸಂಗೀತವಿದೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ರೋಹಿತ್‌ ಅವರು ಆ್ಯಂಗ್ರಿ ಯಂಗ್‌ ಮ್ಯಾನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.­

Advertisement

Udayavani is now on Telegram. Click here to join our channel and stay updated with the latest news.

Next