ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದ ಏಕಾಏಕಿ ನೀರು ಮುಲ್ಲಾಮಾರಿ ನದಿಗೆ ಹರಿದುಬಿಟ್ಟ ಪರಿಣಾಮ ನದಿ ಪಾತ್ರದ ಗ್ರಾಮಗಳ ರೈತರು ಬೆಳೆದಿರುವ ತೊಗರಿ, ಹೆಸರು, ಉದ್ದು ಬೆಳೆ ಹಾನಿ ಆಗಿದೆ. ನಿರಂತರ ಮಳೆಯಿಂದಾಗಿ ತಾಲೂಕಿನ ಒಟ್ಟು 11,305 ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆಹಾನಿಯಾಗಿದ್ದು, ಒಟ್ಟು 51.92 ಲಕ್ಷ ರೂ. ಬೆಳೆಹಾನಿ ಆಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಜನೇವರಿ-ಆಗಸ್ಟ್ ತಿಂಗಳಲ್ಲಿಒಟ್ಟು ಸರಾಸರಿ ವಾಡಿಕೆ ಮಳೆ 613 ಮಿ.ಮೀ. ಇದ್ದು, 628 ಮಿ.ಮೀ. ಮಳೆಯಾಗಿದೆ. ಮಾನಸೂನದಲ್ಲಿ ಒಟ್ಟು 545 ಮಿ.ಮೀ. ಮಳೆ ಪೈಕಿ 630 ಮಿ.ಮೀ. ಮಳೆ ಸುರಿದಿದೆ. ರೈತರು ಬೆಳೆದ ಬೆಳ ಸಮೀಕ್ಷೆಯನ್ನು ಶೇ.50 ಪೂರ್ಣಗೊಂಡಿದೆ. ಸಮೀಕ್ಷೆ ಕುರಿತು ಪ್ರಾಥಮಿಕ ವರದಿಯನ್ನು ಜಿಲ್ಲಾಧಿ ಕಾರಿಗೆ ಸಲ್ಲಿಸಲಾಗಿದೆ ಎಂದರು.ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಅಜೀಮುದ್ದೀನ್ ಮಾತನಾಡಿ, ರಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದರಿಂದ ಒಟ್ಟು 61ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತರಕಾರಿ ಹಣ್ಣು-ಹಂಪಲು ಇತರೆ ಬೆಳೆಗಳು ಹಾನಿಯಾಗಿವೆ. 8.80 ಲಕ್ಷ ರೂ. ಹಾನಿಯಾಗಿರುವ ಕುರಿತು ಪ್ರಾಥಮಿಕ ವರದಿಯನ್ನು ಮೇಲಧಿ ಕಾರಿಗಳಿಗೆಸಲ್ಲಿಸಲಾಗಿದೆ ಎಂದರು.
ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಪಶು ವೈದ್ಯಾಧಿ ಕಾರಿ ಡಾ| ಧನರಾಜ ಬೊಮ್ಮ ಮಾತನಾಡಿ, ದೇಶದಲ್ಲಿ ಕೋವಿಡ್ ವೈರಸ್ ಹರಡುತ್ತಿರುವಂತೆ ತಾಲೂಕಿನಲ್ಲಿ ಇದೀಗ ಜಾನುವಾರುಗಳಿಗೂ ಲಂಪಿ ಸ್ಕಿನ್ ಡಿಸೀಸ ಹೊಲುವ ರೋಗ ಹರಡುತ್ತಿದೆ. ಈ ರೋಗದಿಂದ ಗಡಿಭಾಗದ ಹಲಕೋಡ ಗ್ರಾಮದಲ್ಲಿಒಟ್ಟು 3 ದನಗಳು ಮೃತಪಟ್ಟಿವೆ. 3,500 ಜಾನುವಾರುಗಳು ರೋಗದಿಂದ ಬಳಲುತ್ತಿವೆ. ರೋಗ ಕಾಣಿಸಿಕೊಂಡ ಎತ್ತುಗಳನ್ನು ಪ್ರತ್ಯೇಕವಾಗಿ ಕಟ್ಟಬೇಕೆಂದು ರೈತರಿಗೆ ಜಾಗೃತಿ ಮೂಡಿಸಲಾಗಿದೆ. ಪಶುಭಾಗ್ಯ ಮತ್ತು ಎಸ್‌ಸಿಪಿ ಯೋಜನೆ ಸರಕಾರ ರದ್ದು ಪಡಿಸಿದೆ ಎಂದು ತಿಳಿಸಿದರು.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.84.4 ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ಚಿಂಚೋಳಿ 2ನೇ ಸ್ಥಾನ ಪಡೆದುಕೊಂಡಿದೆ ಎಂದು ಬಿಇಒ ದತ್ತಪ್ಪ ತಳವಾರ ಹೇಳಿದರು. ಸಭೆಯಲ್ಲಿ ಎಇಇ ಮಹ್ಮದ ಅಹೆಮದ ಹುಸೇನ್, ಎಇಇ ಗುರುರಾಜ ಜೋಶಿ, ಎಇಇ ಹಣಮಂತರಾವ ಪೂಜಾರಿ, ಎಇಇ ರಾಮಚಂದ್ರ ರಾಠೊಡ, ಸಮಾಜ ಕಲ್ಯಾಣಾ ಧಿಕಾರಿ ಪ್ರಭುಲಿಂಗ ಬುಳ್ಳ, ಬಿಸಿಎಂ ಅ ಧಿಕಾರಿ ಶರಣಬಸಪ್ಪ ಪಾಟೀಲ, ವಲಯ ಅರಣ್ಯಾಧಿ ಕಾರಿ ಮಹ್ಮದ ಮುನೀರ ಅಹೆಮದ, ಹಿಂದುಳಿದ ವರ್ಗ ಅಧಿ ಕಾರಿ ಶಾಂತವೀರಯ್ಯ ಮಠಪತಿ, ಎಇಇಶಿವಶರಣಪ್ಪ ಕೇಶ್ವರ ಇದ್ದರು. ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಇಒ ಅನಿಲಕುಮಾರ ರಾಠೊಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಿರಂಜೀವಿ ಶಿವರಾಮಪುರ ಇದ್ದರು.