Advertisement

ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ಸಿಗೆ ಪೂರ್ವಭಾವಿ ಸಭೆ

01:27 PM Dec 21, 2021 | Team Udayavani |

ಕಲಬುರಗಿ: ಬರುವ ಜನವರಿ 3 ಹಾಗೂ 4ರಂದು ಕಲಬುರಗಿಯಲ್ಲಿ ನಡೆಯಲಿರುವ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದ ಯಶಸ್ವಿಗೆ ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸಮ್ಮೇಳನ ಉಪ ಸಮಿತಿಗಳ ಸಭೆ ನಡೆದು ವಿವರವಾಗಿ ಚರ್ಚಿಸಲಾಯಿತು.

Advertisement

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಸಿ ಲೋಕೇಶ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ಪೂರ್ವಸಿದ್ಧತೆ ಹಾಗೂ ಆಗಬೇಕಾದ ಕಾರ್ಯಗಳ ಕುರಿತು ಚರ್ಚಿಸಲಾಗಿ, ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡಲಾಯಿತು.

ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ತಾಲೂಕಿನ ಅಧ್ಯಕ್ಷರುಪದಾಧಿಕಾರಿಗಳು ಹಾಗೂ ಸಮ್ಮೇಳನದ ಉಪ ಸಮಿತಿಯ ಸದಸ್ಯರುಗಳ ಸಭೆ ನಡೆದು ಪರಾಮರ್ಶಿಸಲಾಯಿತು.

ಹಲವರು ಅಮೂಲ್ಯವಾದ ಸಲಹೆ ಸೂಚನೆನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಹಗಲಿರಳು ಶ್ರಮಿಸುವುದಾಗಿ ಪುನರುಚ್ಚರಿಸಿದರು. ಸಮ್ಮೇಳನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಎಲ್ಲ ಕೆಲಸಗಳು ಯುದ್ಧೋಪಾದಿಯಲ್ಲಿ ನಡೆಯಬೇಕಾಗಿದೆ ಎಂದು ಜಿ.ಸಿ. ಲೋಕೇಶ ಹೇಳಿದರು.

ವೇದಿಕೆ ಮೇಲೆ ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ, ಸಹ ಕಾರ್ಯದರ್ಶಿ ರಮೇಶ ಖಮಿತಕರ್‌, ಗ್ರಾಮೀಣ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ನಗರ ಉಪಾಧ್ಯಕ್ಷ ಶ್ಯಾಮ ಶಿಂಧೆ, ಖಜಾಂಚಿ ರಾಜು ದೇಶಮುಖ, ಬೆಂಗಳೂರಿನನಗರ ಪ್ರಧಾನ ಕಾರ್ಯದರ್ಶಿ ದೇವರಾಜ,ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕಸಾದ ಮಾಜಿ ಅಧ್ಯಕ್ಷರು, ಹಿರಿಯ ಪತ್ರಕರ್ತರಾದಮಹಿಪಾಲರೆಡ್ಡಿ ಮುನ್ನೂರ, ವಿಶ್ವನಾಥ ಸ್ವಾಮಿ ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರುಭಾಗವಹಿಸಿದ್ದರು. ಹಿರಿಯ ಪತ್ರಕರ್ತರೂ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನುನೀಡಿದರು. ಕಲಬುರಗಿ ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪಅವಂಟಿ ನಿರೂಪಿಸಿದರು. ಗೋಪಿ ಕುಲಕರ್ಣಿ ಪ್ರಾರ್ಥಿಸಿದರು. ಸ್ವಾಗತ, ಸಾರಿಗೆ, ವಸತಿ, ಆಹಾರ, ಲೆಕ್ಕ ಪತ್ರ, ಮುದ್ರಣ, ಸ್ಮರಣ ಸಂಚಿಕೆ,ಪ್ರಚಾರ, ಸಾಂಸ್ಕೃತಿಕ ನಿರ್ವಹಣೆ, ಅತಿಥಿ ಸತ್ಕಾರ, ಮಹಿಳಾ, ಛಾಯಾಚಿತ್ರ ಮತ್ತು ವಸ್ತುಪ್ರದರ್ಶನ, ಸ್ವಯಂ ಸೇವಕರ ಸಮಿತಿ, ವೇದಿಕೆ ಅಲಂಕಾರ ಸಮಿತಿ, ಪ್ರತಿನಿ ಧಿಗಳ ನೋಂದಣಿ ಸೇರಿದಂತೆ 20 ಕ್ಕೂ ಹೆಚ್ಚು ಸಮಿತಿಗಳ ಸಭೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next