Advertisement

ರಸ್ತೆ ಸಂಪರ್ಕದ ಕೊರತೆ: ಗರ್ಭಿಣಿಯನ್ನು 5 ಕಿ.ಮೀ ಹೊತ್ತು ಸಾಗಿದ ಗ್ರಾಮಸ್ಥರು

10:06 AM Feb 29, 2020 | Mithun PG |

ಛತ್ತೀಸ್ ಘಡ್: ಗ್ರಾಮಕ್ಕೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದೆ ಕಾರಣ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚ್ಚರ್ ಮೂಲಕ 5 ಕಿ,ಮೀ ಹೊತ್ತು ಸಾಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಬಲ್ರಾಂಪುರ್ ಜಿಲ್ಲೆಯ ಜರ್ ವಾಹಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

Advertisement

ಜರ್ ವಾಹಿ ಗ್ರಾಮಕ್ಕೆ ರಸ್ತೆಯೇ ಇಲ್ಲ. ಇರುವ ಒಂದು ರಸ್ತೆಯು ನಡೆಯಲಾಗದಷ್ಟು ಹಾನಿಯಾಗಿದೆ. ಹೆರಿಗೆ ಸಮಯದಲ್ಲಿ ಮಹಿಳೆಯರು ತುಂಬಾ ಕಷ್ಟಪಡಬೇಕಾಗಿ ಬರುವುದು. ಸ್ಥಳೀಯ ಅಡಳಿತ ಇತ್ತ ಗಮನವೇ ನೀಡುತ್ತಿಲ್ಲ  ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಸಂಪರ್ಕವಿಲ್ಲದ ಕಾರಣ ಗರ್ಭಿಣಿ ಮಹಿಳೆಯನ್ನು ಬೈಕ್ ಮೂಲಕವೇ ಸಾಗಿಸುವ ಅನಿವಾರ್ಯತೆಯಿದೆ. ಕೆಲವು ಬಾರಿ ಗರ್ಭಿಣಿ ಮತ್ತು ಮಗು ಸಾವನ್ನಪ್ಪಿದ ಉದಾಹರಣೆಗಳು ಇವೆ ಎಂದು ಗ್ರಾಮಸ್ಥೆ ಪ್ರಭಾ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಆಡಳಿತ, ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಹಾನಿಯಾದ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next