Advertisement
ಜಿಲ್ಲಾಸ್ಪತ್ರೆ 250ಹಾಸಿಗೆ ಸಾಮರ್ಥ್ಯ ಹೊಂದಿದ್ದು ಇತ್ತೀಚೆಗೆ ಹೊಸದಾಗಿ ಆರಂಭವಾಗಿರುವ ಮಕ್ಕಳು ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಆಸ್ಪತ್ರೆ ಬಾಗಿಲಿಗೆ ‘ಸ್ಕ್ಯಾನಿಂಗ್ ವೈದ್ಯರಿಲ್ಲ’ ಎಂಬ ಬರಹ ಅಂಟಿಸಲಾಗಿದೆ. ಚುನಾವಣೆಗೂ ಮುನ್ನವೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಡಿಯಾಲಜಿಸ್ಟ್ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದು, ಬಡವರು ಪರದಾಡುವಂತಾಗಿದೆ.
Related Articles
Advertisement
ಖಾಸಗಿ ಲಾಬಿ ಶಂಕೆ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೈದ್ಯರು ಇಲ್ಲದೇ ಇರುವುದನ್ನು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಬಾರಿ ದರದಲ್ಲಿ ಸ್ಕ್ಯಾನಿಂಗ್ ಮಾಡುತ್ತಿವೆ. ಖಾಸಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಹೋದರೆ 500ಕ್ಕೂ ಹೆಚ್ಚು ರೂ. ನೀಡಬೇಕಾಗಿದ್ದು, ಬಡ ರೋಗಿಗಳು ಖಾಸಗಿ ಕೇಂದ್ರಗಳಿಗೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ.
ಜಿಲ್ಲಾಸ್ಪತ್ರೆ ರೇಡಿಯಾಲಜಿಸ್ಟ್ ಹುದ್ದೆಗೆ ಖಾಸಗಿ ವೈದ್ಯರೂ ಸಿಗದಿರುವುದರ ಹಿಂದೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ಮಸಲತ್ತು ಅಡಗಿದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಇಲ್ಲದಿದ್ದರೆ ಸುತ್ತಮುತ್ತ ಇರುವ ನಾಲ್ಕಾರು ಸ್ಕ್ಯಾನಿಂಗ್ ಕೇಂದ್ರಗಳು ಬ್ಯುಸಿಯಾಗಿರುತ್ತವೆ. ದಿನಕ್ಕೆ ಒಂದು ಕೇಂದ್ರದಲ್ಲಿ 50ಕ್ಕೂ ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಇದರಿಂದ ಭಾರಿ ಲಾಭ ಗಳಿಸುತ್ತಿವೆ. ಅದಕ್ಕಾಗಿ ಜಿಲ್ಲಾಸ್ಪತ್ರೆಗೆ ಯಾವುದೇ ರೇಡಿಯಾಲಜಿಸ್ಟ್ ಹೋಗದಂತೆ ಖಾಸಗಿ ಲಾಬಿ ತಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಇಲ್ಲದೇ ಬಡವರು ಖಾಸಗಿ ಕೇಂದ್ರಗಳಿಗೆ ಹೋಗಿ ದುಬಾರಿ ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಶೀಘ್ರದಲ್ಲಿ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.