ಬಳ್ಳಾರಿ: ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತ ಇಬ್ಬರು ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೂ ಎಂಟು ಜನ ಗರ್ಭಿಣಿ ಸೊಂಕಿತ ಮಹಿಳೆಯರಿದ್ದು, ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ.
ಬಳ್ಳಾರಿ ನೆಹರು ಕಾಲೋನಿಯ 29 ವಯಸ್ಸಿನ ಪಿ-6416 ಮಹಿಳೆಗೆ ಗುರುವಾರ ಬೆಳಗ್ಗೆ 5ಕ್ಕೆ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಮಹಿಳೆಯ ಆರೋಗ್ಯವಾಗಿದೆ. ಗಂಡು ಮಗು ಹುಟ್ಟಿದ್ದು 2.8ಕೆಜಿ ತೂಕವಿದ್ದು ಆರೋಗ್ಯವಾಗಿದೆ.
ಇವರ ಪತಿ ಎರಡು ದಿನಗಳ ಹಿಂದೆಯೇ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು. ಈ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಈ ಮಹಿಳೆಗೆ ಇದು ಮೂರನೇ ಮಗು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿದ್ದ ರಾಯದುರ್ಗದ 28 ವಯಸ್ಸಿನ ಪಿ-7094 ಗರ್ಭಿಣಿ ಮಹಿಳೆಗೆ ಸಾಮಾನ್ಯ ಹೆರಿಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ಗಂಡು ಮಗು ಹುಟ್ಟಿದ್ದು, 3.2ಕೆಜಿ ತೂಕವಿದೆ. ಈ ಮಹಿಳೆಯಲ್ಲಿ ಕೋವಿಡ್-19 ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಈ ಮಹಿಳೆಗೂ ಸಹ ಇದು ಮೂರನೇ ಮಗು ಎಂದು ವೈದ್ಯರು ತಿಳಸಿದ್ದಾರೆ.
ಇವರ ಪತಿಯಿಂದ ಈ ಮಹಿಳೆಗೆ ಸೋಂಕು ಹರಡಿದ ಹಿನ್ನೆಲೆಯಿದ್ದು, ಅವರು ಸಹ ಕೆಲದಿನಗಳ ಹಿಂದೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿ ನಿರ್ಣಯದ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಇನ್ನೂ ಎಂಟು ಗರ್ಭಿಣಿ ಸೋಂಕಿತ ಮಹಿಳೆಯರಿದ್ದು,ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ.
ನುರಿತ ತಜ್ಞ ವೈದ್ಯರಾದ ಡಾ.ಸುಯಗ್ನ ಜೋಶಿ, ಡಾ.ವಿಜಯಲಕ್ಷ್ಮೀ, ಡಾ.ಸರಸ್ವತಿ, ಡಾ.ರಾಜೇಶ್ವರಿ, ಡಾ.ಮಲ್ಲಣ್ಣ, ಡಾ.ಸತೀಶ್, ಡಾ.ಭಾಸ್ಕರ್, ಡಾ.ನಿತೀಶ್, ಡಾ.ವೀರಶಂಕರ್, ಡಾ.ಸುನೀಲ್, ಡಾ.ಜಯಲಕ್ಷ್ಮಿ , ಡಾ.ಸಂಪತ್ ಹಾಗೂ ಒಟಿ ವಿಭಾಗದ ಸಿಬ್ಬಂದಿಗಳು ಈ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.