ಪಾಟ್ನಾ: ಬಿಹಾರದ ಧರ್ಭಾಂಗ ಜಿಲ್ಲೆಯು ಮಳೆಯ ಅಬ್ಬರಕ್ಕೆ ತತ್ತರಿಸಿಹೋಗಿದ್ದು ಪ್ರವಾಸ ಪರಿಸ್ಥಿತಿ ಎದುರಾಗಿದೆ. ಏತನನ್ಮಧ್ಯೆ ತುಂಬು ಗರ್ಭಿಣಿಯನ್ನು ಟ್ಯೂಬ್ ದೋಣಿ ಮೂಲಕ ಆಸ್ಪತ್ರೆಗೆ ಸಾಗಿಸಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.
ಬಿಹಾರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅದಗಾಲೇ ಗರ್ಭಿಣಿಯೊಬ್ಬರಿಗೆ ಪ್ರಸವ ಬೇನೆ ಆರಂಭವಾಗಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲೇ ಬೇಕಾದ ಅನಿವಾರ್ಯತೆ ಇತ್ತು. ಆದರೆ ಮನೆಯ ಸುತ್ತಮುತ್ತಲೂ ಪ್ರವಾಹ ನೀರು ಹರಿಯುತ್ತಿದ್ದರಿಂದ ವಾಹನದ ವ್ಯವಸ್ಥೆ ಕೂಡ ಅಸಾಧ್ಯವಾಗಿತ್ತು. ತಕ್ಷಣಕ್ಕೆ ಯಾವುದೇ ಬೋಟ್ ಕೂಡ ದೊರೆಯಲಿಲ್ಲ.
ಆಗಲೇ ಕೆಲ ಗ್ರಾಮಸ್ಥರು ಮತ್ತು ಕುಟುಂಬಸ್ಥರು ನಾಲ್ಕು ಟ್ಯೂಬ್ ಗಳನ್ನು ಜೋಡಿಸಿ, ದೋಣಿಯೊಂದನ್ನು ಸಿದ್ದಪಡಿಸಿದರು. ಮಾತ್ರವಲ್ಲದೆ ಎದೆಮಟ್ಟದವರೆಗೂ ನೀರಿದ್ದರೂ ದೋಣಿ ಮೇಲೆ ಗರ್ಭಿಣಿ ಮಹಿಳೆಯನ್ನು ಕುಳ್ಳಿರಿಸಿ ಸುರಕ್ಷತೆಯಿಂದ ಆಸ್ಪತ್ರೆಗೆ ತಲುಪಿಸಿದ್ದಾರೆ.
ಈ ವಿಡಿಯೋವನ್ನು ಸಾರ್ವಜನಿಕರೊಬ್ಬರು ಚಿತ್ರಿಸಿದ್ದು ವ್ಯಾಪಕ ವೈರಲ್ ಆಗಿದೆ. ಪ್ರವಾಹ ಪೀಡಿತ ಪ್ರದೆಶದಲ್ಲಿ ಜನರ ಸಂಕಷ್ಟಗಳನ್ನು ಪರಿಹರಿಹರಿಸಲು ಸರ್ಕಾರ ಸಮರ್ಪಕ ಕ್ರಮ ಕೈಗೊಲ್ಳಬೇಕೆಂಬ ಆಗ್ರಹಗಳೂ ಕೇಳಿ ಬಂದಿದೆ.