ಛತ್ತಿಸ್ ಗಢ: ಸಮರ್ಪಕ ರಸ್ತೆ ಸಂಪರ್ಕದ ಕೊರತೆಯಿಂದ ಆ್ಯಂಬುಲೆನ್ಸ್ ಗ್ರಾಮವನ್ನು ತಲುಪಲು ಸಾಧ್ಯವಾಗದೇ ಗರ್ಭಿಣಿ ಮಹಿಳೆಯನ್ನು ನದಿಯ ಮೂಲಕ ಬುಟ್ಟಿಯಲ್ಲಿ ಹೊತ್ತುಕೊಂಡು ಸಾಗಿದ ಘಟನೆ ಸುರ್ಗುಜಾದ ಕಡ್ನಾಯಿ ಗ್ರಾಮದಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ನದಿಗಳು ತುಂಬಿ ಹರಿಯುತ್ತಿದೆ. ಇದರ ಮಧ್ಯೆಯೇ ನಾಲ್ವರು ಪುರುಷರು ತುಂಬು ಗರ್ಭಿಣಿ ಮಹಿಳೆಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ಎತ್ತಿಕೊಂಡು ಸಾಗಿದ್ದಾರೆ. ಮಾತ್ರವಲ್ಲದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು ಹಲವರು ಸ್ಥಳೀಯಾಡಳಿತ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಮಾತ್ರವಲ್ಲದೆ ಕುಗ್ರಾಮಗಳಿಗೆ ಮೌಲಸೌಕರ್ಯ ಒದಗಿಸಲು ಆಗ್ರಹಿಸಿದ್ದಾರೆ.
Related Articles
ಕುಗ್ರಾಮದ ಜನರು ಮಳೆಗಾಲದ ಸಂದರ್ಭದಲ್ಲಿ ಇಂತಹ ಸಂಕಷ್ಟಗಳನ್ನು ಎದುರಿಸುತ್ತಾರೆ. ಆದರೇ ಜಿಲ್ಲೆಯಲ್ಲಿ ಸಮರ್ಪಕ ಆರೋಗ್ಯ ಮೂಲ ಸೌಕರ್ಯಗಳು ಇವೆ. ಜನತೆಯನ್ನು ಈ ಸಮಸ್ಯೆಗಳಿಂದ ದೂರ ಮಾಡಲು ಸಣ್ಣ ಸಣ್ಣ ಕಾರುಗಳನ್ನು ನಿಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಮಾತ್ರವಲ್ಲದೆ ಅಗತ್ಯ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಝಾ ತಿಳಿಸಿದ್ದಾರೆ.