Advertisement

ಗರ್ಭಿಣಿ ಸಾವು: ವೈದ್ಯರ ವಿರುದ್ಧ ಆಕ್ರೋಶ

02:47 PM Dec 02, 2019 | Team Udayavani |

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ರವಿವಾರ ನಡೆದಿದೆ.

Advertisement

ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಕೋಗಳಿ ತಾಂಡಾದ, ಸದ್ಯ ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದಲ್ಲಿ ನೆಲೆಸಿರುವ ಜ್ಯೋತಿಬಾಯಿ ಕುಮಾರ್‌ ನಾಯಕ್‌ ಮೃತಟ್ಟಿದ್ದಾರೆ. ಜ್ಯೋತಿಬಾಯಿ ತುಂಬು ಗರ್ಭಿಣಿಯಾಗಿದ್ದರಿಂದ ರವಿವಾರಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆಕೊಡಿಸಲಾಗಿತ್ತು. ಆಸ್ಪತ್ರೆಗೆ ಒಳಗೆ ನಡೆದುಕೊಂಡೇ ಬಂದಿದ್ದ ಮಹಿಳೆ ಏಕಾಏಕಿಮೃತಪಡಲು ಹೇಗೆ ಸಾಧ್ಯವೆಂದು ಮಹಿಳೆ ಕಡೆಯ ಸಂಬಂಧಿಕರು  ವೈದ್ಯರೊಂದಿಗೆ ವಾಗ್ವಾದ ನಡೆಸಿದರು.

ವೈದ್ಯರು ಮಾತ್ರ ರಕ್ತದ ಕೊರತೆಯಿಂದ ಗರ್ಭಿಣಿ ಮೃತಪಟ್ಟಿದ್ದಾಳೆಂದು ಹೇಳಿದ್ದು, ದಾಖಲೆಯಲ್ಲಿ ಎಚ್‌ಬಿ ರಕ್ತದ ಪ್ರಮಾಣ 11.6 ಎಂದು ಮೊದಲು ನಮೂದು ಮಾಡಿದ್ದಾರೆ. ಗರ್ಭಿಣಿ ಮೃತಪಟ್ಟ ಬಳಿಕ ದಾಖಲೆಯಲ್ಲಿ ರಕ್ತದ ಪ್ರಮಾಣ 2.06ಎಂದು ತಿದ್ದುಪಡಿ ಮಾಡಿದ್ದಾರೆ. ವೈದ್ಯರು ತಮ್ಮ ತಪ್ಪು ಮುಚ್ಚಿಕೊಳ್ಳಲು ರಕ್ತದಕೊರತೆಯಿದೆ ಎಂದಿದ್ದು, ಇವರ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಮೃತಪಟ್ಟಿದ್ದಾಳೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲೆಲ್ಲ ರಕ್ತ ಪರೀಕ್ಷೆ ನಡೆಸಿದಾಗ ಎಚ್‌ಬಿ 11 ಪಾಯಿಂಟ್‌ನಷ್ಟು ಬರುತ್ತಿತ್ತು. ಈಗ ಏಕಾಏಕಿ 2.06 ಪಾಯಿಂಟ್‌ ಹಂತಕ್ಕೆಕಡಿಮೆಯಾಗಲು ಹೇಗೆ ಸಾಧ್ಯ? ಗರ್ಭಿಣಿಗೆ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿಲ್ಲ. ಸರಿಯಾಗಿ ಸ್ಪಂದಿಸಿಲ್ಲ. ಅವರ ನಿರ್ಲಕ್ಷ್ಯವೇ ಇದಕ್ಕೆಲ್ಲಕಾರಣ. ಇದನ್ನು ಮುಚ್ಚಿಕೊಳ್ಳಲು ರಕ್ತದ ಕೊರತೆಯಿಂದೆ ಎಂದು ಹೇಳಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆಂದು ಆಪಾದಿಸಿದರು.

ಆಸ್ಪತ್ರೆಯ ಮುಖ್ಯ ದ್ವಾರದ ಗೇಟ್‌ ಬಂದ್‌ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗೇಟ್‌ ತೆಗೆಸುವ ಮೂಲಕ ಪಾಲಕರಿಗೆ ಸಾಂತ್ವನ ಹೇಳುವ ಪ್ರಯತ್ನ ನಡೆಸಿದರು.

Advertisement

ಸ್ಥಳಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಎಸ್‌.ಬಿ. ದಾನರಡ್ಡಿ ಆಗಮಿಸಿ ಕುಟುಂಬಸ್ಥರೊಂದಿಗೆ ಮಾತನಾಡಿದರಲ್ಲದೇ, ಗರ್ಭಿಣಿಯ ಚಿಕಿತ್ಸೆ ವಿಧಾನ ಏನಾಗಿದೆ ಎನ್ನುವುದನ್ನು ಪರಿಶೀಲಿಸುವೆ. ನಮ್ಮವರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುವೆ ಎಂದರು.

ಆಸ್ಪತ್ರೆಯಲ್ಲಿ ಆಕ್ರಂದನ: ಆಸ್ಪತ್ರೆಯಲ್ಲಿ ಗರ್ಭಿಣಿ ಮೃತಪಟ್ಟಿರುವ ಸುದ್ದಿತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನಮುಗಿಲು ಮುಟ್ಟುವಂತಿತ್ತು. ಪಾಲಕರ ರೋದನ ಕರಳು ಕಿತ್ತು ಬರುವಂತಿತ್ತು. ಆಸ್ಪತ್ರೆಯಲ್ಲಿನ ಅವರ ನರಳಾಟನೋಡದಂತಹ ಸ್ಥಿತಿಯಿತ್ತು. ಆದರೂಇತರೆ ಬಂಧುಬಳಗದವರು ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next