Advertisement

ಐಸೋಲೇಷನ್‌ ವಾರ್ಡ್‌ ಕೊರತೆ ನೀಗಿಸಲು ಆದ್ಯತೆ: ಶಾಸಕ

10:33 AM Aug 08, 2020 | Suhan S |

ಹೊಸಕೋಟೆ: ತಾಲೂಕಿನಲ್ಲಿ ಹೆಚ್ಚುವರಿಯಾಗಿ ಕೋವಿಡ್  ಸೋಂಕಿತರ ಚಿಕಿತ್ಸೆಗಾಗಿ 60 ಐಸೋಲೇಷನ್‌ ವಾರ್ಡ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಕೊರತೆ ನೀಗಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

Advertisement

ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 46, ಅಲ್‌ಅಮೀನ್‌ ವಸತಿ ಶಾಲೆಯಲ್ಲಿ 100, ಎಂವಿಜೆ ಆಸ್ಪತ್ರೆಯಲ್ಲಿ 100, ಸರ್ಕಾರಿ ಆಸ್ಪತ್ರೆಯಲ್ಲಿ 20 ಐಸೋಲೇಷನ್‌ ವಾರ್ಡ್‌ ಗಳ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ದಂಡುಪಾಳ್ಯ ದಲ್ಲಿರುವ ವಸತಿ ಶಾಲೆಯಲ್ಲಿ 30, ನಗರದ ಮಿಷನ್‌ ಆಸ್ಪತ್ರೆಯಲ್ಲಿ 30 ವಾರ್ಡ್‌ಗಳನ್ನು ಮೀಸಲಾಗಿಡಲು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಕೋವಿಡ್ ಸೋಂಕು ಕಂಡುಬಂದಿದ್ದ 581ರಲ್ಲಿ 341 ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದ ವ್ಯಾಪ್ತಿಯಲ್ಲಿ 18, ಗ್ರಾಮೀಣ ಪ್ರದೇಶದಲ್ಲಿ 9 ಮರಣ ಸಂಭವಿಸಿದ್ದು, ಹೆಚ್ಚಿನವರು ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿರುವವರೇ ಹೆಚ್ಚಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್‌ ಆ್ಯಂಟಿಜನ್‌ ತಪಾಸಣೆಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ತಲಾ 500 ಕಿಟ್‌ ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್‌ ವಿ.ಗೀತಾ, ತಾಪಂ ಇಒ ಸಿ.ಎಸ್‌. ಶ್ರೀನಾಥ್‌ಗೌಡ, ತಾಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಉಮೇಶ್‌, ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಕನ್ನಯ್ಯ, ನಗರಸಭೆ ಪೌರಾಯುಕ್ತ ಪರಮೇಶಿ, ಕಾರ್ಯಪಡೆಯ ಸದಸ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next