Advertisement

ರೈತಪರ ಯೋಜನೆಗಳಿಗೆ ಆದ್ಯತೆ

09:54 AM Feb 04, 2019 | Team Udayavani |

ಹಗರಿಬೊಮ್ಮನಹಳ್ಳಿ: ತಾಲೂಕಿನ ಕೆರೆಗಳಿಗೆ ಶಾಶ್ವತ ನೀರು ಕಲ್ಪಿಸಲು 100 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.

Advertisement

ತಾಲೂಕಿನ ಮುಟುಗನಹಳ್ಳಿ ಗ್ರಾಮದ 35 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, 16.29 ಲಕ್ಷ ರೂ. ವೆಚ್ಚದ ತಂಬ್ರಹಳ್ಳಿ ಬಂಡೇ ರಂಗನಾಥ ದೇವಸ್ಥಾನದ ದ್ವಾರ ಬಾಗಿಲು ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರಕಾರದ ಬಜೆಟ್‌ನಲ್ಲಿ ತಾಲೂಕಿನ 10 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಸೇರ್ಪಡೆಯಾಗಲಿದೆ. ಈ ಕುರಿತಂತೆ ಸರಕಾರಕ್ಕೆ ವಿಸ್ತೃತವಾದ ಯೋಜನಾ ವರದಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು, ಬಜೆಟ್‌ನಲ್ಲಿ ಸೇರಿಸಲಾಗುವುದು ತಿಳಿಸಿದ್ದಾರೆ. ಬಜೆಟ್ ಸಿದ್ಧಪಡಿಸುವ ಪೂರ್ವದಲ್ಲಿಯೂ ಸಿಎಂ ಭೇಟಿ ಮಾಡಿ ಗಮನ ಸೆಳೆಯಲಾಗುವುದು ಎಂದರು.

ಈಗಾಗಲೇ ರಾಜವಾಳದಲ್ಲಿ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತುಂಬಿಸುವ ಜಾಕ್‌ವೆಲ್‌ ಕಾಮಗಾರಿ ಭರದಿಂದ ಸಾಗಿದೆ. ಸಂಪೂರ್ಣ ಅವಧಿಯಲ್ಲಿ ರೈತಪರ ಯೋಜನೆಗಳಿಗೆ ಹೆಚ್ಚುಒತ್ತು ನೀಡಲಾಗುವುದು. ಕೊಟ್ಟ ಮಾತಿನಂತೆ ಈಗಾಗಲೇ ಚಿಲವಾರು ಬಂಡಿ ಏತ ನೀರಾವರಿ ಕಾಮಗಾರಿ ಬರದಿಂದ ಸಾಗಿದ್ದು, ಮುಂದಿನ ವರ್ಷ ಆ ಭಾಗದ ರೈತರು ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.

ಕೆಲವರು ಚುನಾವಣೆ ಪೂರ್ವದಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ತಂತ್ರ ಮಾಡಿದ್ದರೂ ಫಲಿಸಲಿಲ್ಲ. ಟೀಕಕಾರರು ಮೊದಲು ಅಭಿವೃದ್ಧಿ ಪರ ಚಿಂತನೆ ಮೈಗೂಡಿಸಿಕೊಳ್ಳಬೇಕು. ಹಿಂದಿನ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ. ಇದರಿಂದಲೇ ಜನರು ಉತ್ತಮ ತೀರ್ಪನ್ನು ನೀಡಿದ್ದಾರೆ ಎಂದರು.

Advertisement

ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್‌, ಪಿಡಬ್ಲು ್ಯಡಿ ಎಇಇ ಪ್ರಭಾಕರ ಶೆಟ್ಟಿ, ತಾಪಂ ಇಒ ಮಲ್ಲನಾಯ್ಕ, ಕಾಂಗ್ರೆಸ್‌ ಬ್ಲಾಕ್‌ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ಬ್ಯಾಸಿಗಿದೇರಿ ಗ್ರಾಪಂ ಅಧ್ಯಕ್ಷೆ ಕವಿತಾ ನಾಗೇಂದ್ರಪ್ಪ, ಉಪಾಧ್ಯಕ್ಷ ಭರಮಪ್ಪ, ತಾಪಂ ಸದಸ್ಯರಾದ ಪಿ. ಕೊಟ್ರೇಶ್‌, ಪಾಂಡುನಾಯ್ಕ, ಮಾಜಿ ಉಪಾಧ್ಯಕ್ಷ ನೇತ್ರಾ ನಂದಪ್ಪ, ಗ್ರಾಪಂ ಸದಸ್ಯರಾದ ಗೌರಜ್ಜನವರ ಗಿರೀಶ್‌, ದೊಡ್ಡಬಸಪ್ಪ, ಶಿವಾನಂದಪ್ಪ, ಮಂಜುನಾಥ ಸ್ವಾಮಿ, ಶ್ರೀನಿವಾಸ, ದೇವಿಪ್ರಸಾದ, ಪಟ್ಟಣಶೆಟ್ಟಿ ಸುರೇಶ, ಅಜೀಜ್‌, ಎಸ್‌ಡಿಎಂಸಿ ಅಧ್ಯಕ್ಷ ಮೋರಿಗೇರಿ ದೊಡ್ಡಬಸಪ್ಪ, ರಫಿ, ಮುಖ್ಯಗುರು ಎಲ್‌. ರೆಡ್ಡಿನಾಯ್ಕ, ಶಾಹೀರಬಾನು ಇತರರು ಇದ್ದರು.

ಶಾಲಾ ಕೊಠಡಿ ಲೋಕಾರ್ಪಣೆ
ಬ್ಯಾಸಿಗೆದೇರಿ ಮತ್ತು ಹಗರಿಕ್ಯಾದಿಗಿಹಳ್ಳಿಯಲ್ಲ್ಲಿ ನೂತನವಾಗಿ ನಿರ್ಮಿಸಲಾದ 4 ಕೊಠಡಿ, ತಂಬ್ರಹಳ್ಳಿ ಉರ್ದು ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿದರು. ಶಿವಾನಂದನಗರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ, ಚಿಲಗೋಡು ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ, ಬನ್ನಿಗೋಳ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಶಾಸಕ ಭೀಮಾನಾಯ್ಕ ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next