Advertisement

ಎಚ್‌-1ಬಿ ವೀಸಾ ನೀಡಿಕೆಗೆ ಆದ್ಯತೆ

12:30 AM Feb 01, 2019 | |

ವಾಷಿಂಗ್ಟನ್‌: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿ ಪರಿಣಿತರಿಗಾಗಿ ಇರುವ ಎಚ್‌-1ಬಿ ವೀಸಾ ನಿಯಮಗಳಲ್ಲಿ ಅಮೆರಿಕ ಕೊಂಚ ಬದಲಾವಣೆ ಮಾಡಿದೆ. ಏ.1ರಿಂದ ಅನ್ವಯವಾಗುವಂತೆ ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದ ಉದ್ಯೋಗಿಗಳಿಗೆ ವೀಸಾ ನೀಡಲು ಆದ್ಯತೆ ನೀಡಲಾಗುತ್ತದೆ. ಜತೆಗೆ ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಅದಕ್ಕೆ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಈ ಬಗ್ಗೆ ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗ ಮಾಹಿತಿ ಪ್ರಕಟಿಸಿದೆ. ಜ.30ರಿಂದ ಅನ್ವಯವಾಗುವಂತೆ ಸದ್ಯ ಜಾರಿಯಲ್ಲಿರುವ ಲಾಟರಿ ಮೂಲಕ ಯಾರಿಗೆ ವೀಸಾ ನೀಡಬೇಕು ಎನ್ನುವುದನ್ನು ಆಯ್ಕೆ ಮಾಡಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಂಪನಿಗಳಲ್ಲಿ ಎಚ್‌-1ಬಿ ವೀಸಾ ಹೊಂದಿರುವ ಭಾರತ  ಇತರ ವಿದೇಶಿಯರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next