ಮಾನ್ವಿ: ಕರ್ನಾಟರ ರೈತ ಸಂಘ ರೈತರ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತದೆ ಎಂದು ಕರ್ನಾಟಕ ರೈತ ಸಂಘ ರಾಜ್ಯ ಸಮಿತಿ ಸದಸ್ಯ ಹಾಗೂ ರಾಯಚೂರು ಜಿಲ್ಲಾ ಮಾಜಿ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರೈತ ಸಂಘದ 3ನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ಆದ್ದರಿಂದ ಕೆಆರ್‌ಎಸ್‌ನಿಂದ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಮಹಾದಾಯಿ ನದಿ ನೀರಿನ ಹೋರಾಟಕ್ಕೆ ಬೆಂಬಲಿಸುವುದು, ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಗಬೇಕು, 40 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಿಸಬೇಕು. ತೊಗರಿ, ಭತ್ತ, ಕಡಲೆ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಸಾಲ ಮನ್ನಾ ಹಾಗೂ ದೇಶಾಂದ್ಯಂತ ಅಲ್ಲಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ವಿರೋಧಿಸುವುದು ಸೇರಿದಂತೆ ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದರು.
ಪದಾಧಿಕಾರಿಗಳ ನೇಮಕ: ನೂತನ ಜಿಲ್ಲಾ ಸಮಿತಿ ರಚಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಜಿ.ಶೇಖರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಪರಶುರಾಮ ಹಿರೇದಿನ್ನಿ, ಉಪಾಧ್ಯಕ್ಷರಾಗಿ ರಮೇಶ ಪಾಟೀಲ್, ಅಡಿವೆಪ್ಪ ರಾಯಚೂರು, ಸಂಘಟನಾ ಕಾರ್ಯದರ್ಶಿಯಾಗಿ ನಲ್ಲಾರೆಡ್ಡಿ ಯರಗೇರಾ, ಖಜಾಂಚಿಯಾಗಿ ಅಲಿಸಾಬ ಸಿರವಾರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿರೂಪಾಕ್ಷಿಗೌಡ ಮರಾಠ, ಅಮರೇಶ ಸೂರಿ ಸಿರವಾರ, ಸಂತೋಷ ಹಿರೇದಿನ್ನಿ, ಯಂಕೋಬ ದೇವದುರ್ಗ, ದುರುಗಣ್ಣ ಗಲಗ, ಗೌಸಸಾಬ್ ಗುಂತಗೋಳ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ನಾಯಕ, ಆದಪ್ಪ ಗೆಜ್ಜಲಗಟ್ಟಾ ಆಯ್ಕೆಯಾದರು.
ಕೆಆರ್‌ಎಎಸ್ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ, ಜಿಲ್ಲಾ ಕಾರ್ಯದರ್ಶಿ ಪರಶುರಾಮ ಹಿರೇದಿನ್ನಿ, ರಮೇಶ ಪಾಟೀಲ್, ಜಿ.ಶೇಖರಯ್ಯ, ಮಲ್ಲಯ್ಯ ಕಟ್ಟಿಮನಿ, ವಿರೂಪಾಕ್ಷಿ ಗೌಡ, ಸಂತೋಷ, ಯಂಕೋಬ ಸೇರಿದಂತೆ ವಿವಿಧ ತಾಲೂಕುಗಳ
ಪ್ರತಿನಿಧಿಗಳು ಭಾಗವಹಿಸಿದ್ದರು.