Advertisement

ವರ್ಗಾವಣೆಯಲ್ಲಿ ಆದ್ಯತೆ, ವಿನಾಯಿತಿ ಲೋಪ : ಉಪನ್ಯಾಸಕರ ಆಕ್ರೋಶ

11:57 PM Aug 05, 2022 | Team Udayavani |

ಉಡುಪಿ: ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ವರ್ಗಾವಣೆಯಲ್ಲಿ 50 ವರ್ಷ ಮೇಲ್ಪಟ್ಟ ಮಹಿಳೆ ಹಾಗೂ 55 ವರ್ಷ ಮೇಲ್ಪಟ್ಟ ಪುರುಷರಿಗೆ ನಿಯಮಾನುಸಾರ ವಿನಾಯಿತಿ ನೀಡದೇ ಇರುವುದಕ್ಕೆ ಹಿರಿಯ ಪ್ರಾಂಶುಪಾಲರು/ ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Advertisement

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020ರಂತೆ ಇತ್ತೀಚೆಗೆ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ವರ್ಗಾವಣೆ ವಿನಾಯತಿ ಮತ್ತು ಆದ್ಯತೆಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡಿದೆ. ಉಪನ್ಯಾಸಕರ ಸಮರ್ಪಕ ಮರು ಹಂಚಿಕೆ ವರ್ಗಾವಣೆ ಮತ್ತು ಆದ್ಯತೆಯ ಕೋರಿಕೆ ವರ್ಗಾವಣೆ ಅಡಿಯಲ್ಲಿ ವಿನಾಯಿತಿಗಳನ್ನು ನೀಡಲಾಗುತ್ತದೆ. ಗಂಭೀರ ಆರೋಗ್ಯದ ಸಮಸ್ಯೆ ಹೊಂದಿರುವವರಿಗೆ, ವಿಧವೆ ಅಥವಾ ವಿಧುರರಿಗೆ, ವಿಚ್ಛೇದನ ಪಡೆದ ಪ್ರಾಂಶುಪಾಲ ಅಥವಾ ಉಪನ್ಯಾಸಕರು ಅವಲಂಬಿತ ಮಕ್ಕಳು, ಸೈನಿಕರಾಗಿ ಶಾಶ್ವತ ಅಂಗವಿಕಲ ಹಾಗೂ ಮೃತ ಸಂಗಾತಿಗೆ ಹಾಗೂ ಕೇಂದ್ರ, ರಾಜ್ಯ ಅಥವಾ ಅನುದಾನಿತ ಸಂಸ್ಥೆಯ ಉದ್ಯೋಗಿ ಸಂಗಾತಿಗೆ, 50 ವರ್ಷ ಪೂರೈಸಿದ ಮಹಿಳೆ, 55 ವರ್ಷ ಮೇಲ್ಪಟ್ಟ ಪುರುಷ, ಗರ್ಭಿಣಿ ಅಥವಾ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವವರಿಗೆ ವರ್ಗಾವಣೆಯಲ್ಲಿ ವಿನಾಯಿತಿ/ ಆದ್ಯತೆ ನೀಡಬೇಕು ಎಂಬುದು ಸ್ಪಷ್ಟವಾಗಿದೆ.

ಆದರೆ 50 ವರ್ಷ ಮೇಲ್ಪಟ್ಟ ಮಹಿಳೆ ಮತ್ತು 55 ವರ್ಷ ಮೇಲ್ಪಟ್ಟ ಪುರುಷ ಅಭ್ಯರ್ಥಿಗಳಿಗೆ ವರ್ಗಾವಣೆ ಕರಡು ಪಟ್ಟಿಯಲ್ಲಿ ಈ ಆದ್ಯತೆ ಅಥವಾ ವಿನಾಯಿತಿ ನೀಡಿಲ್ಲ. ನಿಯಮಕ್ಕೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಲಾಖೆಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಅರ್ಹ ಹಿರಿಯ ಪ್ರಾಂಶುಪಾಲ, ಉಪನ್ಯಾಸಕರು ಆಗ್ರಹಿಸಿದ್ದಾರೆ.

ವಯಸ್ಸಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಇಲಾಖೆ ಸೂಚಿಸಿರುವಂತೆ ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಕೂಡ ಮಾಡಿದ್ದೇವೆ. ಹಾಗೆಯೇ ಕರಾವಳಿ ಭಾಗದ ಕೆಲವು ಕಾಲೇಜಿನ ಪ್ರಾಂಶುಪಾಲರು ಹಾಗೂ ಹಿರಿಯ ಉಪನ್ಯಾಸಕರು ಕೂಡ ಇಲಾಖೆಯ ನಿರ್ದೇಶಕರಿಗೆ ಈ ಸಂಬಂಧ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ನಿಯಮದಲ್ಲಿ ನೀಡಿ ವರ್ಗಾವಣೆ ಸಂದರ್ಭದಲ್ಲಿ ವಿನಾಯಿತಿ ನೀಡದೇ ಇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next