ಅಲ್ಲದೆ, ನಮಾಮಿ ಗಂಗಾ ಯೋಜನೆಯಡಿ ಮಾಡಲಾಗುತ್ತಿರುವ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನೂ ಪ್ರಧಾನಿ ಮೋದಿ ನಡೆಸಿದ್ದಾರೆ. ಗಂಗೆಯ ಪುನರುಜ್ಜೀವನವು ದೇಶಕ್ಕೆ ದೀರ್ಘಕಾಲಿಕ ಸವಾಲಾಗಿದ್ದು, 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಗಂಗೆಯು ಹರಿಯುವಂಥ 5 ರಾಜ್ಯಗಳಿಗೆ 2015ರಿಂದ 2020ರವರೆಗೂ 20 ಸಾವಿರ ಕೋಟಿ ರೂ. ಒದಗಿಸಲಾಗಿದೆ ಎಂದಿದ್ದಾರೆ.
140 ನಿಮಿಷ ಸಭೆ: ಆರಂಭದಲ್ಲಿ 100 ನಿಮಿಷಗಳ ಕಾಲ ಈ ಸಭೆ ನಡೆಸಲು ತೀರ್ಮಾನಿಸಲಾಗಿತ್ತಾದರೂ, ಮತ್ತೆ 40 ನಿಮಿಷಗಳ ಕಾಲ ಅದು ಮುಂದುವರಿಯಿತು. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಬಿಹಾರ ಡಿಸಿಎಂ ಸುಶೀಲ್ ಮೋದಿ, ಕೇಂದ್ರ ಸಚಿವರು, ನೀತಿ ಆಯೋಗದ ಉಪಾಧ್ಯಕ್ಷ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿಎಂಗಳು ಹಾಗೂ ಇತರೆ ಗಣ್ಯರೊಂದಿಗೆ ಪ್ರಧಾನಿ ಮೋದಿ ಅವರು ಗಂಗಾ ಬ್ಯಾರೇಜ್ ಸಮೀಪದ ಅಟಲ್ ಘಾಟ್‌ಗೂ ಭೇಟಿ ನೀಡಿ, ಅಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಜತೆಗೆ, ಅರ್ಧ ಗಂಟೆ ಕಾಲ ಸ್ಟೀಮರ್‌ನಲ್ಲೂ ಸಂಚರಿಸಿದರು.
ಯೋಧರೊಂದಿಗೆ ಸಂವಾದ: ಇದೇ ವೇಳೆ, ಕಾನ್ಪುರದಲ್ಲಿ ಭಾರತೀಯ ವಾಯುಪಡೆಯ ಯೋಧರೊಂದಿಗೂ ಮೋದಿ ಸ್ವಲ್ಪ ಹೊತ್ತು ಸಂವಾದ ನಡೆಸಿದರು. ನಿಮ್ಮ ಸೇವೆಯ ಬಗ್ಗೆ ಭಾರತ ಹೆಮ್ಮೆಪಡುತ್ತಿದೆ ಎಂದೂ ಹೇಳಿದರು.
Advertisement
ಎಡವಿಬಿದ್ದ ಮೋದಿ!ಡಬಲ್ ಡೆಕರ್ ಮೋಟಾರ್‌ಬೋಟ್‌ನಲ್ಲಿ ವಿಹಾರ ನಡೆಸಿ ವಾಪಸಾದ ಮೋದಿ ಅವರು ಮೆಟ್ಟಿಲುಗಳನ್ನು ಹತ್ತುವ ವೇಳೆ ಎಡವಿ ಬಿದ್ದ ಘಟನೆ ನಡೆದಿದೆ. ಕೂಡಲೇ ಅವರನ್ನು ಎಸ್‌ಪಿಜಿ ಭದ್ರತಾ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ.