Advertisement
ತಾಂತ್ರಿಕ ಕೋರ್ಸ್ ಮತ್ತು ವಿಜ್ಞಾನ ವಿಭಾಗದ ಪದವಿ ಕೋರ್ಸ್‌ಗಳಿಗೆ ಲ್ಯಾಬ್‌ನಲ್ಲಿ ಕಲಿಕೆ ಅತಿ ಮುಖ್ಯವಾಗಿದ್ದು, ವಾಣಿಜ್ಯ ವಿಭಾಗದ ಕೆಲವು ವಿಷಯಕ್ಕೂ ಪ್ರಯೋಗಾತ್ಮಕ ಬೋಧನೆ ಇರುತ್ತದೆ. ಅಲ್ಲದೆ, ಕಂಪ್ಯೂಟರ್ ಅಪ್ಲಿಕೇಷನ್ ವಿಷಯ ಪಡೆದ ಅಭ್ಯರ್ಥಿಗಳು ಕಂಪ್ಯೂಟರ್ ಲ್ಯಾಬ್ ಬಳಕೆ ಮಾಡಲೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾಲೇಜು ಆರಂಭದ ಬಳಿಕ ಪ್ರಾಯೋಗಿಕ ತರಗತಿಗಳಿಗೆ ಆದ್ಯತೆ ನೀಡಿ, 10 ಅಥವಾ 15 ವಿದ್ಯಾರ್ಥಿಗಳ ಸಣ್ಣ ಸಣ್ಣ ಗುಂಪುಗಳನ್ನು ಮಾಡಲು ನಿರ್ಧರಿಸಲಾಗಿದೆ.
Related Articles
ತರಗತಿಗಳನ್ನು ಪಾಳಿ ಪದ್ಧತಿಯಲ್ಲಿ ನಡೆಸಲು ಅನುಕೂಲ ಆಗುವಂತೆ ವಿದ್ಯಾರ್ಥಿಗಳ ಪ್ರತ್ಯೇಕ ಬ್ಯಾಚ್ ರಚನೆ ಮಾಡ ಲಾಗುತ್ತದೆ ಮತ್ತು ಇದಕ್ಕಾಗಿ ಕಾಲೇಜು ಹಂತದಲ್ಲೇ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಹಿಂದೆ ಒಂದು ತರಗತಿಯಲ್ಲಿ 100 ವಿದ್ಯಾರ್ಥಿಗಳವರೆಗೂ ಕುಳಿತುಕೊಳ್ಳಲು ಅವಕಾಶವಿತ್ತು. ಅಲ್ಲದೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣ ವಾಗಿ ತರಗತಿ ಕೊಠಡಿಯ ರಚನೆ ಮಾಡಲಾಗು ತಿತ್ತು. ಈಗ ಸಾಮಾಜಿಕ ಅಂತರ ಕಡ್ಡಾಯ ವಾಗಿರುವುದರಿಂದ ಒಂದು ತರಗತಿ ಕೊಠಡಿ ಯಲ್ಲಿ ಗರಿಷ್ಠ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಅದಕ್ಕಿಂತ ಜಾಸ್ತಿ ವಿದ್ಯಾರ್ಥಿಗಳಿದ್ದರೆ ಬೇರೆ ತರಗತಿ ಕೊಠಡಿ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
Advertisement
ಕಾಲೇಜು ಆರಂಭದಲ್ಲಿ ಲ್ಯಾಬ್‌ಗಳನ್ನು ತೆರೆಯುತ್ತೇವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನು ಮಾಡಿ, ಪ್ರಾಯೋಗಿಕ ಬೋಧನೆ ಇರಲಿದೆ. ದಿನಪೂರ್ತಿ ಲ್ಯಾಬ್ ಬೋಧನೆಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಈ ಹಿಂದೆ ವಾರಕ್ಕೆ ಎರಡು ಅಥವಾ ಮೂರು ದಿನ ಲ್ಯಾಬ್ ತರಗತಿ ಇರುತ್ತಿದ್ದವು. ಈಗ ದಿನಪೂರ್ತಿ ಲ್ಯಾಬ್ ಬಳಕೆಗೆ ಆದ್ಯತೆ ನೀಡಲಾಗುತ್ತದೆ.-ಪ್ರೊ.ಎಸ್.ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ