Advertisement

ಕಡಿಮೆ ವೆಚ್ಚದ ಕೀಟ ನಿರ್ವಹಣೆ ಸಂಶೋಧನೆಗೆ ಆದ್ಯತೆ

06:14 PM Mar 05, 2021 | Nagendra Trasi |

ವಿಜಯಪುರ: ರೈತರ ಬೆಳೆಗಳಿಗೆ ಕೀಟ ಬಾಧಿಸಿ, ಬೆಳೆ ಹಾನಿಯುಂಟು ಮಾಡುತ್ತವೆ. ಬೆಳೆ ಸಂರಕ್ಷಣೆಗಾಗಿ ಕೀಟ ಹತೋಟಿಗೆ ಕೀಟ ವಿಜ್ಞಾನಿಗಳು ಸುಲಭ
ಮಾರ್ಗೋಪಾಯ ಕಂಡು ಹಿಡಿಯಬೇಕು. ಇಂಥ ಸಂಶೋಧನೆಗಳು ರೈತರಿಗೆ ಸುಲಭವಾಗಿ ಕಡಿಮೆ ಬೆಲೆಯಲ್ಲಿ ಸಿಗುವಂತಿರಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಡೀನ್‌ ಡಾ| ಎಸ್‌.ಬಿ. ಕಲಘಟಗಿ ಹೇಳಿದರು.

Advertisement

ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಕೃಷಿ ಕೀಟಶಾಸ್ತ್ರ ವಿಭಾಗದ ವಾರ್ಷಿಕ ತಾಂತ್ರಿಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಕೀಟ ಶಾಸ್ತ್ರ ವಿಭಾಗ ಸಂಶೋಧಿಸಿರುವ ಕೀಟ ಉದ್ಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಸಂಶೋಧನೆ ರೈತರನ್ನು ತಲುಪಬೇಕು ಎಂದರು.

ಸಹ ಸಂಶೋಧನಾ ನಿರ್ದೇಶಕ ಡಾ| ಅಶೋಕ ಸಜ್ಜನ ಮಾತನಾಡಿ, ಸಭೆಯಲ್ಲಿ ರೈತರ ವಿವಿಧ ಬೆಳೆಗಳಿಗೆ ಬರುವ ಕೀಟಗಳ ನಿರ್ವಹಣೆ ಬಗ್ಗೆ ತಾಂತ್ರಿಕ ಹಾಗೂ ಪ್ರಾಯೋಗಿಕ ಫಲಿತಾಂಶ ಮಂಡಿಸಬೇಕು. ಉತ್ತರ ಒಣಬೇಸಾಯ ವಲಯಕ್ಕೆ ಸಂಬಂಧ ಪಟ್ಟಂತೆ ರೈತರಿಗೆ ಅನುಕೂಲವಾಗುವ
ಸುಲಭ ಮಾರ್ಗೋಪಾಯಗಳ ಬಗ್ಗೆ ಚಿಂತನ ಮಂಥನ ನಡೆಸಬೇಕು ಎಂದು ಸಲಹೆ ನೀಡಿದರು.

ಸಹ ವಿಸ್ತರಣಾ ನಿರ್ದೇಶಕ ಡಾ| ಆರ್‌.ಬಿ. ಬೆಳ್ಳಿ ಮಾತನಾಡಿ, ಮೂರನೇ ವಲಯ ವ್ಯಾಪ್ತಿಯಲ್ಲಿ ಬರುವ ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಬೆಳೆಗಳಿಗೆ ಬರುವ ಕೀಟಗಳ ನಿರ್ವಹಣೆ ಕುರಿತು ತಜ್ಞರು ವಿಚಾರ ವಿನಿಮಯ ಮಾಡಬೇಕು. ರೈತರು ಈಚಿನ ದಿನಗಳಲ್ಲಿ ಸಾವಯವ ಕೃಷಿಯತ್ತ ಹೆಚ್ಚಿನ ಪ್ರಮಾಣದಲ್ಲಿ ವಾಲುತ್ತಿದ್ದಾರೆ. ರಾಸಾಯನಿಕ ಕೀಟನಾಶಕ ಬದಲಿಗೆ ನೈಸರ್ಗಿಕ-ಪರಿಸರ ಸ್ನೇಹಿ, ಜೈವಿಕ ಕೀಟನಾಶಕ, ಸಸ್ಯಜನ್ಯ ಕೀಟನಾಶಕ ಬಳಕೆ ಬಗ್ಗೆ ಹೆಚ್ಚಿನ ಚರ್ಚೆ ಮಾಡಿ ತಜ್ಞರು ಮಾಹಿತಿ ಒದಗಿಸಬೇಕು ಎಂದರು.

ಈ ವೇಳೆ ಧಾರವಾಡ ಸಹ ವಿಸ್ತರಣಾ ನಿರ್ದೇಶಕ ಡಾ| ಪಿ.ಎಸ್‌. ಹೂಗಾರ, ರಾಯಚೂರು ಡೀನ್‌ ಡಾ| ಭೀಮಪ್ಪ, ಡಾ| ಎ.ಪಿ. ಬಿರಾದಾರ, ಡಾ| ಎನ್‌ .ಡಿ. ಸವಿತಾ, ಡಾ| ರೂಪಾ ಪಾಟೀಲ, ಡಾ| ಎಸ್‌.ಬಿ. ಪಾಟೀಲ, ಡಾ| ಸಿ.ಪಿ. ಮಲ್ಲಾಪುರ, ಡಾ| ಸಿ.ಎಂ. ರಫೀ, ಡಾ| ಎ.ಎಚ್‌. ಬಿರಾದಾರ, ಡಾ| ಶ್ರೀಕಾಂತ ಚವ್ಹಾಣ ಸೇರಿದಂತೆ 37 ಕೀಟಶಾಸ್ತ್ರ ವಿಭಾಗದ ತಜ್ಞರು ಇದ್ದರು. ಡಾ| ಎ.ಪಿ. ಬಿರಾದಾರ ಸ್ವಾಗತಿಸಿದರು. ಡಾ| ಪಿ.ಎಸ್‌. ಹೂಗಾರ ನಿರೂಪಿಸಿದರು.
ಡಾ| ಸಿ.ಪಿ. ಮಲ್ಲಾಪುರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next