ಚಿಕ್ಕೋಡಿ: ನಾಗರಮುನ್ನೋಳ್ಳಿ ಹೋಬಳಿ ವ್ಯಾಪ್ತಿಯ ಕರಗಾಂವ ಹಾಗೂ ಹನುಮಾನಏತ ನೀರಾವರಿ ಯೋಜನೆಯ ಸರ್ವೇಕಾರ್ಯ ಆರಂಭವಾಗಿದ್ದು, ಸಚಿವ ರಮೇಶ ಜಾರಕಿಹೊಳಿ ಹಾಗೂ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಶೀಘ್ರದಲ್ಲಿಯೋಜನೆ ಅನುಷ್ಠಾನವಾಗಲಿದೆ ಎಂದುಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಶುಕ್ರವಾರ ತಾಲೂಕಿನ ನಾಗರಮುನ್ನೊಳ್ಳಿ ಹಾಗೂ ಕುಂಗಟೋಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕರಗಾಂವ ಏತ ನೀರಾವರಿ ಹಾಗೂ ಹನುಮಾನ ಏತ ನೀರಾವರಿ ಯೋಜನೆ ಅನುಷ್ಠಾನವಾದರೆ ಚಿಕ್ಕೋಡಿ ತಾಲೂಕಿನ ಮಡ್ಡಿ ಭಾಗದ ರೈತರ ಸಮಸ್ಯೆ ದೂರವಾಗಲಿದೆ. ಹೀಗಾಗಿ ರೈತರಿಗೆ ನೀರು ಕೊಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಇಟ್ನಾಳ – ನಾಗರಮುನ್ನೋಳ್ಳಿಯ ರಾಯಬಾಗ ಕೂಡು ರಸ್ತೆಯ ಅಭಿವೃದ್ಧಿಗೆ 50 ಲಕ್ಷ ರೂ, ಬೃಹತ್ ನೀರಾವರಿಇಲಾಖೆಯಿಂದ ನಾಗರಮುನ್ನೊಳ್ಳಿ ಮತ್ತು ಮಾಕನಕೋಡಿ ರಸ್ತೆ ನಿರ್ಮಾಣಕ್ಕೆ 50ಲಕ್ಷ ರೂ. ಹಾಗೂ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ಕುಂಗಟ್ಟೋಳ್ಳಿಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ 25 ಲಕ್ಷ ರೂ. ಮಂಜೂರಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗುಣಮಟ್ಟದ ಕೆಲಸಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನಲ್ಲಿ ಅನೇಕ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಬೇಕಿದೆ. ಬಜೆಟ್ ಮಂಡನೆ ಬಳಿಕ ವಿಶೇಷ ಅನುದಾನ ತಂದು ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗುವುದು ಎಂದರು.
ಜಿಪಂ ಸದಸ್ಯ ಪವನ ಕತ್ತಿ, ಸುರೇಶಬೆಲ್ಲದ, ಮಹೇಶ ಭಾತೆ, ವಿಜಯಕೊಠಿವಾಲೆ, ವಿರೂಪಾಕ್ಷಿ ಈಟಿ, ಗುಲಾಬಜಮಾದಾರ, ದಾನಪ್ಪ ಕೊಟಬಾಗಿ,ಶಿವರಾಯ ಕಮತೆ, ಸಂತೋಷ ಕಮತೆ,ಮಲ್ಲಪ್ಪ ಟೊನಫೆ, ಎಂ.ಎಸ್.ಈಟಿ, ಎಂ.ಬಿ.ಆಲೂರೆ ಮುಂತಾದವರು ಇದ್ದರು.