ಮಾಲೂರು: ಕೋವಿಡ್ ಲಾಕ್‌ಡೌನ್‌ನಿಂದ ಉಂಟಾಗಿದ್ದ ಆಹಾರ ಕೊರತೆ ಮತ್ತು ಜಿಡಿಪಿಯ ಸ್ಥಿರತೆ ಕಾಯುವಲ್ಲಿ ಆಹಾರ, ತರಕಾರಿಗಳ ಸಂಸ್ಕರಣೆ ಪ್ರಾಧಾನ್ಯತೆ ಅರಿತ ಪ್ರಧಾನಿ ಮೋದಿ ಆಹಾರ ಭದ್ರತೆಗಾಗಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ತಾಲೂಕಿನ ಕೈಗಾರಿಕಾ ಪ್ರಾಂಗಣದಲ್ಲಿರುವ ಇನೋವಾ ಬಯೋಟೆಕ್ ಆಹಾರ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಮಾತನಾಡಿ, ದೇಶದಲ್ಲಿ ಲಾಕ್‌ಡೌನ್ ನಿಂದ ಉಂಟಾದ ಆಹಾರ ಭದ್ರತೆಗೆ ಹೆಚ್ಚು ಒತ್ತು ನೀಡಬೇಕೆಂದು ಆಹಾರ ಮತ್ತು ತರಕಾರಿ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಪ್ರಧಾನಿ 10 ಸಾವಿರ ಕೋಟಿ ರೂ. ಮೀಸಲು ಇಡುವ ಮೂಲಕ ರೈತರು ಬೆಳೆದ ಬೆಳೆಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ರಾಜಧಾನಿಯಲ್ಲಿ ಸಭೆ ನಡೆಸಿದ್ದು, ರಾಜ್ಯದಲ್ಲಿ 4 ಆಹಾರ ಸಂಸ್ಕರಣಾ ಘಟಕಗಳು ಇದ್ದು,ಅದರಲ್ಲಿ 2 ಮೆಗಾ ಘಟಕಗಳಿವೆ. ಮಾಲೂರು ತಾಲೂಕಿನಲ್ಲಿರುವ ಇನೋವ ಬಯೋಟೆಕ್ ಫುಡ್ ಪಾರ್ಕ್ ಘಟಕ ಉತ್ತಮ ಕೆಲಸ ಮಾಡುವ ಮೂಲಕ ಪ್ರಗತಿಯಲ್ಲಿದೆ. ಅದರಂತೆ ನಾನೂ ಭೇಟಿ ನೀಡಿ ಘಟಕದ ಆಹಾರ ಭದ್ರತೆಯ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಉಳಿದ ಆಹಾರ ಸಂಸ್ಕರಣಾ ಘಟಕಗಳು ಉತ್ತಮ ನಿರ್ವಹಣೆಗೆ ಸೂಚಿಸುವುದಾಗಿ ತಿಳಿಸಿದರು.
ಲಾಕ್‌ಡೌನ್‌ನಿಂದ ಕೋಲ್ಡ್ ಸ್ಟೋರ್‌ನ ಬೆಲೆ ಗೊತ್ತಾಗಿದ್ದು, ಅದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಇನೋವ ಬಯೋಟೆಕ್ ಪಾರ್ಕ್ ನಿರ್ದೇಶಕ ರವಿಕುಮಾರ್ ಅವರು, ಘಟಕದಲ್ಲಿ ತರಕಾರಿ ಮತ್ತು ಹಣ್ಣಗಳ ಸಂಸ್ಕರಣೆ, ವಿದೇಶಗಳಿಗೆ ರಫ್ತು ಮಾಡು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಚಿವರಿಗೆ ಪ್ರೊಜೆಕ್ಟರ್ ಮೂಲಕ ಮಾಹಿತಿ ನೀಡಿದರು.
ಸಂಸದ ಎಸ್.ಮುನಿ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ತಹಶೀಲ್ದಾರ್ ಮಂಜುನಾಥ್, ಇಒ ಕೃಷ್ಣಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ, ಮಾಜಿ ಶಾಸಕ ಎ.ನಾಗರಾಜ್, ಮುಖಂಡರಾದ ಎಟ್ಟಕೋಡಿ ಕೃಷ್ಣಾರೆಡ್ಡಿ, ಆರ್.ಪ್ರಭಾಕರ್, ಪುರನಾರಾಯಣಸ್ವಾಮಿ ಇತರರಿದ್ದರು.