Advertisement

‘ಮೂಲಸೌಕರ್ಯಗಳಲ್ಲಿ ಕುಡಿಯುವ ನೀರಿಗೆ ಹೆಚ್ಚು ಆದ್ಯತೆ’

12:55 PM May 03, 2022 | Team Udayavani |

ಕಾರ್ಕಳ: ಫಿಶರೀಸ್‌ ಕಾಲನಿಯಲ್ಲಿ ಸಾರ್ವಜನಿಕ ಬಾವಿ ಉದ್ಘಾಟನೆ ಕಾರ್ಕಳ, ಮೇ 3: ಸಾರ್ವಜನಿಕರ ಮೂಲ ಸೌಕರ್ಯಗಳ ಈಡೇರಿಕೆಗೆ ತಕ್ಕಂತೆ ಸಾಕಷ್ಟು ಕೊರತೆಗಳನ್ನು ನಿವಾರಿಸುತ್ತ ಬರಲಾಗಿದೆ. ಬಹುಮುಖ್ಯವಾಗಿ ರಸ್ತೆ, ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಗಮನ ಹರಿಲಾಗಿದೆ ಎಂದು ಸಚಿವ ವಿ. ಸುನಿಲ್‌ಕುಮಾರ್‌ ಹೇಳಿದರು.

Advertisement

ಕಾರ್ಕಳ ಪುರಸಭೆ ವ್ಯಾಪ್ತಿಯ 13 ವಾರ್ಡ್‌ ನಲ್ಲಿ ಪುರಸಭೆ ನಿಧಿಯಿಂದ ಫಿಶರೀಸ್‌ ಕಾಲನಿಯಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಬಾವಿ ಉದ್ಘಾಟಿಸಿ, ಅವರು ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಪ್ರಕಾಶ್‌ ರಾವ್‌ ಪ್ರಸ್ತಾವನೆಗೈದು, ಸಾರ್ವಜನಿಕ ಬಾವಿ ಬಹುಕಾಲದ ಬೇಡಿಕೆಯಾಗಿತ್ತು. ಈ ಹಿಂದೆ ಅಲ್ಪ ಮೊತ್ತ ಇರಿಸಿದ್ದರೂ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಸಚಿವರ, ಪುರಸಭೆಯ ಸಹಕಾರದಿಂದ ಇದೀಗ ಸಾರ್ವಜನಿಕರ ಬಳಕೆಗೆ ದೊರಕಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಸುಮಾಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಪುರಸಭೆ ಸದಸ್ಯರ ಪ್ರದೀಪ್‌ ರಾಣೆ, ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್‌, ಉದ್ಯಮಿ ಮಹಾವೀರ ಹೆಗ್ಡೆ, ನಿರಂಜನ್‌, ಪುರಸಭೆ ನಾಮನಿರ್ದೇಶಿತ ಸದಸ್ಯ ಸಂತೋಷ್‌ ರಾವ್‌, ಅನಂತಕೃಷ್ಣ ಶೆಣೈ ರೆಂಜಾಳ, ಪುರಸಭೆಯ ಎಂಜಿನಿಯರ್‌, ಮ್ಯಾನೇಜರ್‌ ಸಿಬಂದಿ, ಫಿಶರೀಸ್‌ ಅಧಿಕಾರಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next