Advertisement
ಕೋವಿಡ್-19 ಸಾಂಕ್ರಾಮಿಕ ರೋಗವು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿದೆ. ಈ ಸವಾಲುಗಳನ್ನು ಶಿಕ್ಷಣ ವ್ಯವಸ್ಥೆ, ನೀತಿ ರೂಪಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಅರ್ಥ ಮಾಡಿಕೊಂಡು ಅವುಗಳನ್ನು ಪರಿಹರಿಸುವುದು ಅತೀಮುಖ್ಯವಾಗಿದೆ.“ಉತ್ತಮ ನಾಗರಿಕನಾಗಲು ಅಥವಾ ಯಶಸ್ವಿ ಜೀವನ ಸಾಗಿಸಲು ಗುರು ಇರಬೇಕು ಇಲ್ಲವೇ ಗುರಿಯಿರಬೇಕು’ ಎಂಬ ಮಾತು ಬಹಳ ಅರ್ಥಪೂರ್ಣವಾದುದು. ಆದರೆ ಕೋವಿಡ್-19ರ ಸಂದರ್ಭದಲ್ಲಿ ದೂರದಲ್ಲಿರುವ ಗುರುವ ನೆನೆದು ಆರಾಧಿಸಿ ಗುರಿ ಸಾಧಿಸುವ ಏಕಲವ್ಯರ ಸಂಖ್ಯೆ ಕೇವಲ ಬೆರಳೆ ಣಿಕೆಯಷ್ಟಿತ್ತು. “ಗುರುವಿನ ಗುಲಾ ಮನಾಗುವ ತನಕ ದೊರೆಯ ದಯ್ಯ ಮುಕುತಿ’ ಎಂಬ ಕವಿ ವಾಣಿಯಂತೆ ಗುರುವಿನ ಸನಿಹ ವಿದ್ದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು, ಜೀವನದ ಗುರಿ ಸಾಧಿಸಲು ಸಾಧ್ಯ.
ಮಾರು ಎರಡು ವರ್ಷಗಳ ಬಳಿಕ ಶಾಲೆಗಳು ಪುನರಾ ರಂಭಗೊಂಡಿವೆ. ಈ ಸಂದರ್ಭದಲ್ಲಿ ಶಾಲಾಧಾರಿತ ಕಲಿಕೆಗೆ ಸುರಕ್ಷಿತ ಮತ್ತು ಉತ್ತಮ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿ ರುವ ಈ ಪರಿಸ್ಥಿತಿಯಲ್ಲಿ ಶಿಕ್ಷಕರ ಮುಂದೆ ಹಲವಾರು ಸವಾಲುಗಳ ಸರಮಾಲೆಯೇ ಸೃಷ್ಟಿಯಾಗಿದೆ. ಇವುಗಳಲ್ಲಿ ಪ್ರಮುಖವಾಗಿ
1 ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಅಂತರ ಸರಿದೂಗಿಸುವುದು.
2 ವಿದ್ಯಾರ್ಥಿಗಳು, ಶಾಲೆ ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಸಡಿಲಗೊಂಡಿರುವುದು.
3 ಮಕ್ಕಳನ್ನು ಮಾನಸಿಕವಾಗಿ ಭೌತಿಕ ತರಗತಿಗಳಿಗೆ ತಯಾರು ಮಾಡುವುದು.
4 ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಭ್ಯಾಸವನ್ನು ಪುನಶ್ಚೇತನಗೊಳಿಸುವುದು.
5 ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಂಡುಕೊಳ್ಳುವುದು.
6 ಮಕ್ಕಳಲ್ಲಿ ಸಾಮಾಜಿಕ ವಿಕಾಸ ಕುಂಠಿತವಾಗದಂತೆ ನೋಡಿಕೊಳ್ಳುವುದು.
7 ಹಿಂದಿನ ಮತ್ತು ಪ್ರಸಕ್ತ ಶೈಕ್ಷಣಿಕ ಸಾಲಿನ 1ನೇ ತರಗತಿಯ ಮಕ್ಕಳ ಭಾಷೆಯ ಬೆಳವಣಿಗೆಗೆ ಒತ್ತು ನೀಡುವುದು ಮತ್ತು ಕಲಿಕಾ ತಳಹದಿಯನ್ನು ಬಲಪಡಿಸುವುದು.
8 ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್(ಅಂತರ್ಜಾಲ) ಬಳಕೆಯಿಂದ ಸಂಪಾದಿಸಿರುವ ಅಗತ್ಯ ಮತ್ತು ಅನಗತ್ಯ ಜ್ಞಾನದ ಒಳಿತು-ಕೆಡಕುಗಳ ಅರಿವು ಮೂಡಿಸುವುದರೊಂದಿಗೆ ಅವರಲ್ಲಾಗಿರುವ ನೈತಿಕ ಮೌಲ್ಯಗಳ ಕೊರತೆಯನ್ನು ಸರಿದೂಗಿಸುವುದು.
9 ಬಾಲ ಕಾರ್ಮಿಕರಾಗಿ ದುಡಿಮೆಗೆ ಒಗ್ಗಿಕೊಂಡಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವುದು.
10 ಬಾಲ್ಯವಿವಾಹ, ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವುದು.
11 ಫ್ರೀ ಫೈಯರ್, ಪಬ್ಜಿà ಮುಂತಾದ ಆನ್‌ಲೈನ್ ಆಟಗ ಳಿಗೆ ದಾಸರಾಗಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲಾ ಚಟುವಟಿಕೆಗಳಿಗೆ ಒಗ್ಗಿಕೊಳ್ಳುವಂತೆ ಮಾಡುವುದು.
12 ವಲಸೆ ಕಾರ್ಮಿಕರ ಮಕ್ಕಳನ್ನು ಹುಡುಕಿ ಶಾಲೆಗೆ ಮರಳಿ ಸೇರುವಂತೆ ಕ್ರಮ ಕೈಗೊಳ್ಳುವುದು.
Related Articles
Advertisement
ಶಿಕ್ಷಕರು ತಮ್ಮ ಮುಂದಿರುವ ಈ ಸವಾಲುಗಳನ್ನು ಎದುರಿಸಲು ತಮ್ಮದೇ ಆದ ಯೋಚನಾ ಕ್ರಮಗಳ ಮೂಲಕ ವಿದ್ಯಾರ್ಥಿಗಳು ಪುನಃ ಭೌತಿಕ ತರಗತಿಗಳಿಗೆ ಒಗ್ಗಿಕೊಳ್ಳುವಂತೆ ಮಾಡಲು ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.
1 ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ಕಡೆ ಗಮನ ನೀಡುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕೋವಿಡ್-19 ರ ನಿಯಮಗಳನ್ನು ಪಾಲಿಸುವುದು.2 ಈ ಎರಡು ಶೈಕ್ಷಣಿಕ ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ನಷ್ಟ, ಕಲಿಕಾ ಅಂತರ ಸರಿದೂಗಿಸುವಲ್ಲಿ ಕಳೆದು ಹೋದ ಕಲಿಕೆಯನ್ನು ಪುನಃ ಹಿಂಪಡೆಯುವಲ್ಲಿ ಕಲಿಕಾ ವಿನ್ಯಾಸ ಮತ್ತು ಅನುಷ್ಠಾನ ರೂಪಿಸುವ ನೀಲನಕ್ಷೆಯನ್ನು ತಯಾರಿಸುವುದು.
ಐಐಐ ವಿದ್ಯಾರ್ಥಿಗಳಲ್ಲಿನ ಕಲಿಕಾ ನಷ್ಟವನ್ನು ಗುರುತಿಸಿ ಕಲಿಕಾ ಅಗತ್ಯತೆಯ ಮೌಲ್ಯಮಾಪನ ಮಾಡಿ ಪರಿಹಾರಾತ್ಮಕ ಬೋಧನೆಗೆ ಒತ್ತು ನೀಡುವುದರೊಂದಿಗೆ ಕಲಿಕೆಯ ಸ್ಥಿರತೆ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು.
3 ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವ ಮೂಲಕ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬಲಪಡಿಸುವುದು.
4 ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ನೋಡಲ್ ಶಿಕ್ಷಕರನ್ನು ನೇಮಿಸಿ ಜವಾಬ್ದಾರಿ ನೀಡುವುದು.
5 ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್(ಅಂತರ್ಜಾಲ) ಬಳಕೆಯಿಂದ ಸಂಪಾದಿಸಿರುವ ಅಗತ್ಯ ಮತ್ತು ಅನಗತ್ಯ ಜ್ಞಾನದ ಒಳಿತು-ಕೆಡಕುಗಳ ಅರಿವು ಮೂಡಿಸಲು ತಜ್ಞ ಮಾರ್ಗದರ್ಶಕ (ಸೈಬರ್ ಕ್ರೈಂ)ರಿಂದ ಉಪನ್ಯಾಸ ಏರ್ಪಡಿಸುವುದು.
6 ವಲಸೆ ಕಾರ್ಮಿಕರ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರಲು ಟ್ರ್ಯಾಕಿಂಗ್ ಮಾಡುವುದು.
7 ಸಾಮಾಜಿಕ ಪಿಡುಗುಗಳಿಗೆ, ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗಾಗಿ ವಿಶೇಷ ಆಪ್ತ ಸಮಾಲೋಚನ ಸಭೆಯನ್ನು ಏರ್ಪಡಿಸುವುದು.
8 ಶಿಕ್ಷಕರ ಮುಂದಿರುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಶಿಕ್ಷಕರಿಗೆ ಪಠ್ಯಕ್ರಮ, ಪಾಠಯೋಜನೆ ಮತ್ತು ಸಮಯದ ಹಂಚಿಕೆಗೆ ಸಂಬಂಧಿಸಿದಂತೆ ಸ್ವಾಯತ್ತತೆಯ ಅಗತ್ಯವಿದೆ. ಅಂತಿಮವಾಗಿ ಹೇಳುವುದಾದರೆ ಹಲವಾರು ಸಮಸ್ಯೆ, ಸವಾಲುಗಳಿ¨ªಾಗ್ಯೂ ಸೃಜನಾತ್ಮಕ, ಆಸಕ್ತಿ ದಾಯಕ ಬೋಧನ ವಿಧಾನಗಳ ಮೂಲಕ ಮಕ್ಕ ಳಲ್ಲಿ ಕಲಿಕೆಯ ಅಭಿರುಚಿ, ಅಭಿಮಾನ ಹಾಗೂ ಅಭಿ ಪ್ರೇರಣೆ ಮೂಡಿಸುವ ಮೂಲಕ ಅವರಲ್ಲಿ ಕಂಡು ಬರುವ ಆತಂಕಗಳನ್ನು ದೂರಮಾಡಿ ಧನಾತ್ಮಕ ಮನೋಭಾವ ಬೆಳೆಸುವುದರೊಂದಿಗೆ ಮುಗ್ಧ ಮತ್ತು ಯುವ ಮನಸ್ಸುಗಳು ಕಲಿಕೆ ಹಾಗೂ ಭೌತಿಕ ತರಗತಿಗಳಿಗೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಲು ಸಮಸ್ತ ಶಿಕ್ಷಕ ಸಮು ದಾಯ ಸನ್ನದ್ಧವಾಗಿದೆ ಎಂದರೆ ಅತಿಶ ಯೋಕ್ತಿಯಾಗದು. – ದಾಕ್ಷಾಯಿಣಿ ವೀರೇಶ್
ಶಿಕ್ಷಕಿ, ಮಂಗಳೂರು