Advertisement
ನಗರದ ಶಾರದಾ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ತೇರದಾಳ ನೂತನ ತಾಲೂಕು ಘಟಕ ಉದ್ಘಾಟನೆ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಾಹಿತ್ಯ ಬೇರೆಯಲ್ಲ, ಸಂಸ್ಕಾರ ಬೇರೆಯಲ್ಲ. ಸಾಹಿತ್ಯ ಪಾಲಕರಿಂದ ದೂರವಾಗದೇ, ಮಕ್ಕಳಿಗೂ ಅದು ತಲುಪಲಿ. ಮಕ್ಕಳ ಸಾಹಿತ್ಯ ಅತ್ಯಂತ ಸರಳವಾಗಿ, ಅರ್ಥವಾಗುವಂತಿದ್ದರೆ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ರಾಷ್ಟ್ರಾಭ್ಯುದಯ ಬಯಸುವ ಸತ್ಪ್ರಜೆಗಳಾಗುತ್ತಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಮಕ್ಕಳಿಗೂ ತಿಳಿಯುವಂತೆ ಹೇಳಿದ ಬಸವಣ್ಣ ಮೊದಲ ಮಕ್ಕಳ ಸಾಹಿತಿ ಎನ್ನಬಹುದಾಗಿದೆ. ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಚಟುವಟಿಕೆಗಳು ನಡೆಯಲಿ. ಘಟಕ ರಾಜ್ಯಮಟ್ಟದಲ್ಲಿ ಹೆಸರು ಮಾಡಲಿ ಎಂದರು.
Advertisement
ಮಕ್ಕಳ ಸಾಹಿತ್ಯಕ್ಕೂ ಇರಲಿ ಆದ್ಯತೆ: ಪತ್ತಾರ
12:02 PM Nov 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.