ನೀಡಿದರು.
Advertisement
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ “ಫೆಡರೇಷನ್ ಆಫ್ ಹೆಲ್ತ್‌ಕೇರ್ ಅಸೋಸಿಯೇಷನ್- ಕರ್ನಾಟಕ’ (ಎಫ್ಎಚ್‌ಎ) ಸಂಸ್ಥೆ ಉದ್ಘಾಟಿಸುವ ಜತೆಗೆ “ಆರೋಗ್ಯ ಸೇವೆಯಲ್ಲಿ ನೈತಿಕ ಮೌಲ್ಯ ಹಾಗೂ ಆಡಳಿತ’ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಸೇವೆ ಒದಗಿಸುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ದೊಡ್ಡದಿದೆ.
Related Articles
Advertisement
ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, “ಆರೋಗ್ಯ ಸೇವೆ ಒದಗಿಸುವಲ್ಲಿ ಖಾಸಗಿ ಸಂಸ್ಥೆಗಳು ಪ್ರಮುಖ ಸ್ಥಾನ ಪಡೆದಿವೆ. ಸರ್ಕಾರಿ ಆಸ್ಪತ್ರೆಗಳಿಗಿಂತಲೂ ಖಾಸಗಿ ಸಂಸ್ಥೆಗಳು ಹೆಚ್ಚು ಜನರಿಗೆ ಆರೋಗ್ಯ ಸೇವೆ ನೀಡುತ್ತಿವೆ. ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಮೂಲ ಸೌಕರ್ಯ, ಆರೋಗ್ಯ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ ನೀಡುತ್ತಿರುವುದರಿಂದ ರಾಜ್ಯದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿರುವ ಜತೆಗೆ ಗುಣಮಟ್ಟದ ಆರೋಗ್ಯ ಸೇವೆಯೂ ಸಿಗುತ್ತಿದೆ ಎಂದು ಹೇಳಿದರು.
ಕಾರ್ಪೋರೇಟ್ ಆಸ್ಪತ್ರೆಗಳು ಕಡಿಮೆ ಎಂದರೆ ಸುಮಾರು ಶೇ.10ರಷ್ಟಿರಬಹುದು. ಆದರೆ ಸಣ್ಣಪುಟ್ಟ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ತಾಲೂಕು, ಜಿಲ್ಲೆ, ನಗರ ಪ್ರದೇಶಗಳಲ್ಲಿ ಉತ್ತಮ ಸೇವೆ ನೀಡುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳು ಕುಸಿಯುತ್ತಿದ್ದು, ಇದಕ್ಕೆ ವೈದ್ಯಕೀಯ ಕ್ಷೇತ್ರವೂ ಹೊರತಲ್ಲ. ಹಾಗಾಗಿ ನೈತಿಕ ಮೌಲ್ಯ ಆಧರಿಸಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸವಲತ್ತುಗಳ ಜತೆಗೆ ತಜ್ಞ ವೈದ್ಯರೂ ಇದ್ದಾರೆ. ಆದರೆ ಆಡಳಿತ ನಿರ್ವಹಣೆಯು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ವೃತ್ತಿಯ ಜತೆಗೆ ಆಡಳಿತ ಜವಾಬ್ದಾರಿ ನಿರ್ವಹಿಸುವುದನ್ನು ಆರಂಭದಿಂದಲೇ ರೂಢಿಸಿಕೊಳ್ಳುವುದು ಒಳಿತು. ಸರ್ಕಾರಿ ಆಸ್ಪತ್ರೆಗಳಿಗೆ ಆರ್ಥಿಕ ಮುಗ್ಗಟ್ಟಿಲ್ಲ. ಆದರೆ ಉತ್ತಮವಾಗಿ ಆಡಳಿತ ನಡೆಸುವವರ ಕೊರತೆಯಿದೆ. ಪ್ರಾಮಾಣಿಕತೆಯಿಂದ ಸಾಮಾನ್ಯ ಜನರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವುದಕ್ಕೆ ಆದ್ಯತೆ ನೀಡಬೇಕೆಂದು ತಿಳಿಸಿದರು.
ಎಫ್ಎಚ್‌ಎ ಮುಖ್ಯ ಪ್ರಧಾನ ಸಂಚಾಲಕ ನಾಗೇಂದ್ರ ಸ್ವಾಮಿ, ಸಮಾಜ, ಸರ್ಕಾರ, ಆರೋಗ್ಯ ಸೇವಾಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಒಕ್ಕೂಟ ಕಾರ್ಯ ನಿರ್ವಹಿಸಲಿದೆ. ಪರಸ್ಪರ ಸಮನ್ವಯದಿಂದ ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆ ತಲುಪುವಂತೆ ಮಾಡುವುದು ಒಕ್ಕೂಟದ ಆಶಯ ಎಂದು ಹೇಳಿದರು.
ಸಮ್ಮೇಳನ ಸಮಿತಿ ಸಂಚಾಲಕ ಜಯಣ್ಣ, ಭಾರತೀಯ ವೈದ್ಯ ಸಂಸ್ಥೆಯ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ರಾಜಶೇಖರ ಬಳ್ಳಾರಿ ಉಪಸ್ಥಿತರಿದ್ದರು.