ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿಅಫಜಲಪುರ: ರೈತರು ಸಮೃದ್ಧವಾಗಿ ಬೆಳೆ ಬೆಳೆಯಲು ಆಗ್ರೊಗಳಲ್ಲಿ ಸಿಗುವ ಗುಣಮಟ್ಟದ ಬೀಜಗಳನ್ನು ಖರೀದಿಸಿ ಮಿಶ್ರ ಬೇಸಾಯದಲ್ಲಿ ತೊಡಗಬೇಕು ಎಂದು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿದರು.
ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್ ಹತ್ತಿರದ ಹಿರೇಮಠ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಖಂಡೋಬಾ ಆಗ್ರೋ ಏಜೆನ್ಸಿಯ 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಶ್ರೀಗಳು ಮಾತನಾಡಿದರು.
ತಾಲೂಕಿನಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆ ಬೆಳೆಯುವ ಮೂಲಕ ರೈತರು ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೂ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಗೆ ಮುಂದಾಗಬೇಕು. ಕಡಿಮೆ ಜಮೀನು ಇದ್ದರೂ ರೈತರು ಮಿಶ್ರ ಬೆಳೆಗಳು ಬೆಳೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಸವಲತ್ತು ಸಿಗುವಂತಾಗಬೇಕು. ಕೃಷಿ ಕುರಿತು ಅವರಿಗೆ ತರಬೇತಿ ದೊರಕಬೇಕು ಎಂದರು.
ಶ್ರೀ ಖಂಡೋಬಾ ಆಗ್ರೋ ಏಜೆನ್ಸಿ ಮಾಲೀಕ ಚಿದಾನಂದ ಬಂಡಗರ, ರೈತ ಮುಖಂಡರಾದ ಪಾಂಡುರಂಗ ಬಡಗರ, ಸಂಜು ಹಿರೇಮಠ, ಬೀರಣ್ಣ ಕನಕಟೇಲರ್, ಸಾತಪ್ಪ ನಂದಿ, ಬಸವರಾಜ ಹಿಪ್ಪರಗಿ, ದಿಗಂಬರ ಮರಾಠಾ, ಚಂದ್ರಕಾಂತ ಸಿಂಗೆ, ಸದ್ದಾಂ ಹುಸೇನ್ ನಾಕೇದಾರ, ಕಲ್ಯಾಣಿ ಜಿರೋಳಿ, ಮಾಜಿ ಸೈನಿಕ ಸಿದ್ಧಪ್ಪ, ಸಿದ್ಧು ಪೂಜಾರಿ, ರೇವಣಸಿದ್ಧ ಅಮ್ಮಣಿ, ಮಹಾಂತಯ್ಯ ಮಠ, ರಾಜಕುಮಾರ ಬಿರಾದಾರ, ಶರಣು ಪೂಜಾರಿ, ಪೀರಣ್ಣ ಪಾಟೀಲ, ಹಣಮಂತ ಪೂಜಾರಿ, ಗುರುರಾಜ ಹೂಗಾರ, ಡಿ.ಎಸ್. ಪೂಜಾರಿ, ಬಿ.ಜಿ.ಯಾಳಗಿ. ಸಾಯಿಬಣ್ಣ ಜಮಾದಾರ ಮತ್ತಿತರರು ಇದ್ದರು.