Advertisement
ಕಾರ್ಮಿಕ ಸಂಘಗಳ ವತಿಯಿಂದ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಂದಿಗೂ 20 ಕೋಟಿಯಷ್ಟು ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ, ಹಸಿವಿನ ರಾಜಕಾರಣಕ್ಕೆ ಬದಲಾಗಿ, ಹಸುವಿನ ರಾಜಕಾರಣಕ್ಕೆ ಹೆಚ್ಚು ಮಹತ್ವ ದೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಆದರೆ, ಕೆಂಪು ದೀಪ ಇಲ್ಲದೆ ಹೋಗುವ ಅನೇಕ ವಿವಿಐಪಿಗಳಿಗೆ ಸಂಚಾರ ಮುಕ್ತ ಗೊಳಿಸುವುದಕ್ಕೆ ಯಾವುದೇ ಧಕ್ಕೆ ಆಗಿಲ್ಲ. ಇದರಿಂದ ಸಾರ್ವಜನಿಕರು ಹತ್ತಾರು ನಿಮಿಷಗಳು ರಸ್ತೆಯಲ್ಲಿ ನಿಲ್ಲಬೇಕಾಗುತ್ತದೆ. ಕೆಂಪು ದೀಪ ತೆಗೆದ ಕೂಡಲೇ ದೊಡ್ಡ ಬದಲಾವಣೆ ಎಂಬಂತೆ ವಿಜೃಂಭಿಸುವ ಭ್ರಮೆ ಮೂಡಿಸಲಾಗುತ್ತಿದ್ದು, ಇದೊಂದು ಕೇವಲ ಸಾಂಕೇತಿಕ ಕ್ರಮವಷ್ಟೇ. ಸಾಂಕೇ ತಗಳನ್ನು ಸಂಭ್ರಮಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.
ಆದರೂ ಇಂತಹುಗಳಿಂದ ಭ್ರಮೆ ಬಿತ್ತುವ ಕೆಲಸ ವಾಗುತ್ತಿದೆ ಎಂದು ಟೀಕಿಸಿದರು. ಸಮಿತಿಯ ಸಂಚಾಲಕ ಗಂಗಣ್ಣ ಮಾತನಾಡಿ, ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ಕಾರ್ಪೋರೇಟ್‌ನವರು ಪ್ರಚಾರಕ್ಕಾಗಿ ಸುಮಾರು 45 ಸಾವಿರ ಕೋಟಿಯಷ್ಟು ಹಣ ನೀಡಿದ್ದರು. ಇದಕ್ಕೆ ಪ್ರತಿಫಲವಾಗಿ ಕೇಂದ್ರ ಸರ್ಕಾರ ಕಾರ್ಪೋ ರೇಟ್ ಕಂಪೆನಿಯವರಿಗೆ ಶೇ.5 ರಷ್ಟು ತೆರಿಗೆ ವಿನಾಯಿತಿ ನೀಡುವ ಮೂಲಕ 40 – 50 ಸಾವಿರ ಕೋಟಿ ರೂಪಾಯಿ ಲಾಭ ಮಾಡಿಕೊಟ್ಟಿದೆ.
ಇದರೊಂದಿಗೆ ದೇಶದಲ್ಲಿನ ಕಾರ್ಮಿಕರ ಕಾನೂನುಗಳನ್ನು ಸಡಿಲಿಕೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲೇಖಕಿ ಬಿ.ಟಿ. ಲಲಿತಾ ನಾಯಕ್, ಸಮಿತಿ ಅಧ್ಯಕ್ಷ ಡಿ.ಎಸ್. ಅನಂತರಾಮ್, ಸಂಚಾಲಕ ಕೆ.ಎ.ಗಂಗಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು.