Advertisement
ನಗರದಲ್ಲಿ ಸೋಮವಾರ ವಿವಿಧ ವಾರ್ಡಗಳಲ್ಲಿ 1 ಕೋಟಿ ವೆಚ್ಚದ 6 ನೂತನ ಕುಡಿಯುವ ಶುದ್ಧ ನೀರು ಘಟಕಗಳ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದೆ. ನದಿಯಲ್ಲಿ ಸರಿಯಾಗಿ ನೀರಿಲ್ಲ. ಇರುವಷ್ಟು ನೀರನ್ನು ನಗರಸಭೆಯವರು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಜನತೆ ನೀರಿಗಾಗಿ ತತ್ತರಿಸುತ್ತಿದ್ದಾರೆ. ಜನರ ತಾಳ್ಮೆ ಪರೀಕ್ಷಿಸ ಬೇಡಿ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಇಂಜಿನಿಯರ್ ಹಣಮಂತಪ್ಪ ಅಂಬ್ಲಿ ಅವರಿಗೆ ಕಡಕ್ಕಾಗಿ ಎಚ್ಚರಿಕೆ ನೀಡಿದರು.
ಇಲಾಖೆ ಎಇಇ ಹಣಮಂತಪ್ಪ ಅಂಬಲಿ ಮಾತನಾಡಿ, ಮುಂಜುಮದಾರಗಲ್ಲಿ ಕುಂಬಾರ ಪೇಟ. ಕೆಂಗೂರಿ ವೃತ್ತ, ತರಕಾರಿ ಮಾರುಕಟ್ಟೆ, ತಿಮ್ಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ರಂಗಂಪೇಟ ತರಕಾರಿ ಮಾರುಕಟ್ಟೆ 6 ಕಡೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ನಗರಸಭೆ ಪೌರಾಯುಕ್ತ ಏಜಾಜ್ ಹುಸೇನ್, ತಾಪಂ ಅಧ್ಯಕ್ಷೆ ಅನುಸೂಬಾಯಿ ತಿರುಪತಿ ಚವ್ಹಾಣ, ಯಲ್ಲಪ್ಪ ಕುರುಕುಂದಿ, ಹನುಮಪ್ಪ ನಾಯಕ ತಾತಾ, ವೇಣುಮಾಧವ ನಾಯಕ ಮರಿಲಿಂಗಪ್ಪ ನಾಯಕ ಕರ್ನಾಳ, ಗ್ಯಾನಚಂದ ಜೈನ್, ಎಚ್.ಸಿ. ಪಾಟೀಲ, ದುರ್ಗಪ್ಪ ಗೋಗಿಕೇರಾ, ವಿಷ್ಣು ಗುತ್ತೇದಾರ್, ನರಸಿಂಹಕಾಂತ ಪಂಚಮಗಿರಿ, ಶಿವಕುಮಾರ ಕಟ್ಟಿಮನಿ, ಅಯ್ಯಣ್ಣ ಪೂಜಾರಿ, ಶಂಕರ ನಾಯಕ, ವಿರೂಪಾಕ್ಷಿ ಕರ್ನಾಳ, ಈಶ್ವರ ನಾಯಕ, ಶ್ರೀನಿವಾಸ ದರಬಾರಿ, ಬಸವರಾಜ ಕೊಡೇಕಲ್, ಮಲ್ಲೇಶಿ ಪಾಟೀಲ ನಾಗರಾಳ, ಭೀಮಾಶಂಕರ ಬಿಲ್ಲವ್ ಇದ್ದರು.