ಮಡಿಕೇರಿ :ಕ್ಷಯ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿ.ಪಂ.ಸಿಇಒ ಕೆ.ಲಕ್ಷಿ¾ಪ್ರಿಯಾ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ನಗರದ ಬಾಲಭವನದ ಆವರಣದಲ್ಲಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ರಾಷ್ಟ್ರದಲ್ಲಿ ಕೇರಳ ರಾಜ್ಯದ ವೈನಾಡು ಜಿಲ್ಲೆಯನ್ನು ಈಗಾಗಲೇ ಕ್ಷಯರೋಗ ಮುಕ್ತವನ್ನಾಗಿ ಘೋಷಿಸಿದ್ದು, ಅದೇ ರೀತಿ ಕೊಡಗು ಜಿಲ್ಲೆಯನ್ನು ಕ್ಷಯ ರೋಗ ಪ್ರಕರಣಗಳು ಇಲ್ಲದಂತೆ ಮಾಡಬೇಕಿದೆ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಮಾತನಾಡಿ 1882 ರಲ್ಲಿ ಕ್ಷಯ ರೋಗವನ್ನು ಪತ್ತೆಹಚ್ಚಲಾಯಿತು. ಈ ಕಾಯಿಲೆಯು ವಿಶ್ವ ವ್ಯಾಪಿ ಇದ್ದು, ಇದನ್ನು ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ತೋರಿಸಬೇಕಿದೆ. ಕ್ಷಯರೋಗವನ್ನು ಸಂಪೂರ್ಣ ಗುಣ ಮಾಡಲು ಮಾತ್ರೆ ಇದ್ದು, ಇದನ್ನು ವೈದ್ಯರ ಸಲಹೆಯಂತೆ ತಪ್ಪದೇ ಕಾಲಕಾಲಕ್ಕೆ ಮಾತ್ರೆ ತೆಗೆದುಕೊಳ್ಳಬೇಕಿದೆ ಎಂದರು.
ರಾಷ್ಟ್ರದಲ್ಲಿ 6 ಸಾವಿರ ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 600 ಮಂದಿ ಸಾಯುತ್ತಿದ್ದಾರೆ. ಈ ಕಾಯಿಲೆಯು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ರೋಗವಾಗಿದೆ. ಆದ್ದರಿಂದ ಕ್ಷಯರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಅವರು ಸಲಹೆ ಮಾಡಿದರು ಬಾಲಮಂದಿರದಿಂದ ಜಾಥ ಹೊರಟು ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಸ್ಪತ್ರೆಯ ಸಭಾಂಗಣದವರೆಗೆ ಜಾಥಾ ನಡೆಯಿತು. ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಆನಂದ, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಕುಲಕರ್ಣಿ, ಉಪಸ್ಥಿತರಿದ್ದರು.
ಎರಡು ರೀತಿಯ ಕ್ಷಯ
ಕ್ಷಯರೋಗದಲ್ಲಿ ಎರಡು ರೀತಿ ಇದೆ ಶ್ವಾಸಕೋಶದ ಕ್ಷಯರೋಗ, ಶ್ವಾಸಕೋಶೇತರ ಕ್ಷಯರೋಗ. ಸತತ ಕೆಮ್ಮು, ಸಂಜೆ ವೇಳೆ ಜಠರ ಕಫದಲ್ಲಿ ರಕ್ತ ಮತ್ತು ಎದೆ ನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳಾಚಿ ಗಿವೆ ಎಂದು ಡಾ.ಶಿವಕುಮಾರ್ ಅವರು ಮಾಹಿತಿ ನೀಡಿದರು. ಕ್ಷಯರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಫದಲ್ಲಿ ಕ್ರಿಮಿನಾಶಕಗಳು ಕಂಡು ಬರುತ್ತದೆ. ಕ್ಷ ಕಿರಣ ಪರೀಕ್ಷೆಯ ಮೂಲಕ ರೋಗ ಕಂಡು ಹಿಡಿಯಬಹುದು. ಎಂದರು. ಗೊತ್ತಾದ ಕೂಡಲೇ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದರು.