Advertisement

ಕಾಸರಗೋಡು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ; 109 ಮಂದಿ ಮೇಲೆ ನಿಗಾ

01:40 AM Mar 10, 2020 | Sriram |

ಕಾಸರಗೋಡು: ಕೇರಳದಲ್ಲಿ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅತೀವ ಜಾಗರೂಕತೆ ವಹಿಸಿದೆ. ಸೋಂಕು ಬಾಧಿತ ದೇಶಗಳಿಂದ ಬಂದಿರುವವರು ಜಿಲ್ಲಾ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ 109 ಮಂದಿ ಮೇಲೆ ನಿಗಾ ಇಡಲಾಗಿದೆ. ಈ ಪೈಕಿ ಇಬ್ಬರನ್ನು ಆಸ್ಪತ್ರೆಯಲ್ಲೂ, 107 ಮಂದಿ ಯನ್ನು ಅವರವರ ಮನೆಗಳಲ್ಲಿಯೇ ನಿಗಾದಲ್ಲಿ ಇರಿಸಲಾಗಿದೆ.

ರೋಗ ಲಕ್ಷಣಗಳಿರುವವರು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಕುಟುಂಬ ಸದಸ್ಯ ರೊಂದಿಗೂ ನಿಕಟವಾಗಿರಕೂಡದು. ಶುಚಿತ್ವ ಪಾಲಿಸಬೇಕು. ಯಾವುದೇ ರೋಗಿ ಯೊಂದಿಗೆ ಮಾತನಾಡುವಾಗ ಕನಿಷ್ಠ 1 ಮೀಟರ್‌ ದೂರದಲ್ಲಿ ನಿಂತಿರಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರು ತಿಳಿಸಿದ್ದಾರೆ.

ಅಗತ್ಯ ಸಿದ್ಧತೆ
ಕಾಸರಗೋಡು ಆಸ್ಪತ್ರೆಯ ಪೇ ವಾರ್ಡನ್ನು ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಮಾತ್ರವೇ ಸಿದ್ಧಪಡಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿಲ್ಲ; ಆದರೂ ಮುಂಜಾಗ್ರತಾ ಕ್ರಮವಾಗಿ ಇಂತಹ ಸಿದ್ಧತೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇರಳ ರಾಜ್ಯಾದ್ಯಂತ ಕಟ್ಟೆಚ್ಚರ
ಕೇರಳದಲ್ಲಿ ಮತ್ತೆ ಕೆಲವು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ತಿಳಿಸಲಾಗಿದೆ. ಪಟ್ಟಣಂತಿಟ್ಟ ಪರಿಸರದಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ರವಿವಾರ ರೋಗ ಪತ್ತೆಯಾಗಿರುವ ನಾಲ್ವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next