Advertisement

ವಯಸ್ಕರನ್ನು ಕಾಡುವ ಸಂಧಿವಾತ ಇರಲಿ ಮುನ್ನೆಚ್ಚರಿಕೆ

09:24 PM Jun 03, 2019 | mahesh |

ವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಲ್ಲಿ ಸಂಧಿವಾತವೂ ಒಂದು. ಕೀಲುಗಳಲ್ಲಿ ಊತದೊಂದಿಗೆ ನೋವಿನಿಂದ ಕೂಡಿರುವ ಸ್ಥಿತಿಯೇ ಸಂಧಿವಾತ. ಮೊಣಕಾಲು, ಸೊಂಟ, ಭುಜ, ಕೈ ಸಣ್ಣ ಕೀಲುಗಳಲ್ಲಿ ಇದರ ಪ್ರಭಾವ ಹೆಚ್ಚು. ಸಂಧಿವಾತದಲ್ಲಿ ಹಲವು ವಿಧಗಳಿವೆ. ಕೆಲವರಿಗೆ ಬೆಳಗ್ಗೆ ಏಳುವ ಸಂದರ್ಭ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಅಲ್ಪಕಾಲಿಕ. ಅಂದರೆ ಈ ಸಂದರ್ಭ ಕೀಲುಗಳ ನೋವು ಅರ್ಧ ಅಥವಾ ಒಂದು ಗಂಟೆಯವರೆಗೆ ಇರಬಹುದಷ್ಟೆ. ಇದರ ಹೊರತಾಗಿ ದೀರ್ಘ‌ಕಾಲಿಕ ಕೀಲುಗಳು ಮತ್ತು ಚರ್ಮದ ಉರಿ ಊತವು ಹಲವು ವಯಸ್ಕರಲ್ಲಿ ಕಾಣಸಿಗುತ್ತದೆ. ಇದಕ್ಕೆ ಸೊರಿಯಾಟಿಕ್‌ ಸಂಧಿವಾತ ಎಂದು ಹೆಸರು. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

Advertisement

ಅರಿಶಿನ ಸೇವಿಸಿ
ಅರಿಶಿನ ಹಲವು ರೋಗಗಳಿಗೆ ರಾಮಬಾಣ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್‌ ಮತ್ತು ಆ್ಯಂಟಿ ಇನ್‌ಫ್ಲಾಮೇಟರಿ ಅಂಶಗಳು ಹೆಚ್ಚಿರುವುದರಿಂದ ಇದು ಸಂಧಿವಾತವನ್ನು ನಿಯಂತ್ರಿಸಬಲ್ಲದು. ಆದುದರಿಂದ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಅರಿಶಿನದ ಬಳಕೆಯಿರಲಿ.

ಒಮೇಗಾ -3 ಫ್ಯಾಟಿ ಆಸಿಡ್‌
ಒಮೇಗಾ -3 ಕೊಬ್ಬಿನಾಮ್ಲಗಳು ಸಂಧಿವಾತಕ್ಕೆ ಉತ್ತಮ ಪರಿಹಾರವಾಗಿವೆ. ಮೀನಿನೆಣ್ಣೆಗಳಲ್ಲಿ ಈ ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಸಾಲ್ಮನ್‌, ಟೂರನ, ಹೆರಿಂಗ್‌ ಮತ್ತು ಕಾಡ್‌ ಮೀನುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವು ಕೀಲುಗಳ ಉರಿಯೂತ ನಿವಾರಣೆಗೆ ಸಹಕರಿ.

ತೂಕ ಇಳಿಕೆ
ದೇಹದ ತೂಕ ಕೀಲುಗಳ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತದೆ. ಆದುದರಿಂದ ಈ ರೋಗದಿಂದ ಬಳಲುತ್ತಿರುವವರು ಮೊದಲು ದೇಹದ ತೂಕ ಇಳಿಸುವತ್ತ ಗಮನ ನೀಡಬೇಕು. ಸಮತೋಲಿತ ಆಹಾರ ಸೇವನೆ ಮತ್ತು ವ್ಯಾಯಾಮಗಳಿಂದ ದೇಹದ ತೂಕವನ್ನು ಇಳಿಸಬಹುದು.

ಧೂಮಪಾನ ಬೇಡ
ಸಿಗರೇಟ್‌ನಲ್ಲಿರುವ ನಿಕೋಟಿನ್‌ ಅಂಶ ರಕ್ತದ ಹರಿವನ್ನು ಕಡಿಮೆಮಾಡುತ್ತದೆ. ಆದುದರಿಂದ ಸಿಗರೇಟ್‌ ಹೊಗೆಯಿಂದ ದೂರವಿರಿ ಮತ್ತು ಸಿಗರೇಟ್‌ ಸೇದುವ ಅಭ್ಯಾಸವಿದ್ದರೆ ಬಿಟ್ಟುಬಿಡಿ.

Advertisement

ವ್ಯಾಯಾಮ ಮಾಡಿ
ನಿಯಮಿತವಾಗಿ ವ್ಯಾಯಾಮಗಳನ್ನು ಮಾಡುವುದರಿಂದ ಜಾಯಿಂಟ್‌ ಫ್ಲೆಕ್ಸಿಬ್ಲಿಟಿ ಹೆಚ್ಚುತ್ತದೆ. ವ್ಯಾಯಾಮ ಕೀಲುಗಳ ಸುತ್ತ ಇರುವ ಕಾರ್ಟಿಲೆಜ್‌ ಮತ್ತು ಸ್ನಾಯುಗಳನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಕೀಲುಗಳಿಗೆ ಆಮ್ಲಜನಕ ರವಾನಿಸಿ ರಕ್ತ ಪರಿಚಲನೆ ಹೆಚ್ಚಿಸಿ ಮೂಳೆಗಳು ಮತ್ತಷ್ಟು ಹಾನಿಗೊಳಗಾಗುವುದನ್ನು ವ್ಯಾಯಾಮಗಳು ತಪ್ಪಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next