Advertisement

ನೀರಿನ ಕೊರತೆ ನೀಗಿಸಲು ಮುನ್ನೆಚ್ಚರಿಕೆ

04:32 PM May 03, 2017 | Team Udayavani |

ಆಳಂದ: ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ನೀರಿನ ಬಾಕಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಜಿಪಂ ಖಜೂರಿ ಕ್ಷೇತ್ರದ ಸದಸ್ಯ ಹರ್ಷಾನಂದ ಗುತ್ತೇದಾರ ಅಧಿಕಾರಿಗಳಿಗೆ ಸೂಚಿಸಿದರು. 

Advertisement

ತಾಲೂಕು ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಖಜೂರಿ ಗ್ರಾಮಕ್ಕೆ ಸಾಲೇಗಾಂವ ಗ್ರಾಮದಿಂದ ಪೂರೈಕೆ ಆಗುತ್ತಿರುವ ನೀರು ಕಲ್ಮಷದಿಂದ ಕೂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಖಜೂರಿಯಲ್ಲಿ ನೀರು ಶುದ್ಧೀಕರಣ ಘಟಕ ಅಗತ್ಯವಾಗಿದ್ದು, ಈ ಕಾಮಗಾರಿ ಕ್ರಿಯಾ ಯೋಜನೆ ರೂಪಿಸಿ ಜಿಪಂಗೆ ಕಳುಹಿಸಿಕೊಟ್ಟರೆ ಅಧ್ಯಕ್ಷರ ಮೂಲಕ ಅನುಮೋದನೆ ದೊರಕಿಸಿಕೊಡುವುದಾಗಿ ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಅಬ್ದುಲ್‌ ಸಲಾಂ ಅವರಿಗೆ ಸಲಹೆ ನೀಡಿದರು. 

ಪ್ರತಿವರ್ಷ ನೀರಿಗಾಗಿ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಬೇಸಿಗೆ ಬಂದರೆ ಅದೇ ಸಮಸ್ಯೆ ಎಂದರೆ ಹೀಗೆ ನೀರಿನ ಕೊರತೆ ಆಗದಂತೆ ಶಾಶ್ವತ ಕೆಲಸ ಕೈಗೊಳ್ಳಬೇಕು ಎಂದು ಹೇಳಿದರು. ಕಿಣ್ಣಿಸುಲ್ತಾನ ಗ್ರಾಮದ ನೀರಿನ ಮೂಲಗಳಿಗೆ ಮೋಟಾರ್‌ ಅಳವಡಿಸಿ ನೀರು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ ಅಧಿಕಾರಿಗಳಿಗೆ ಆದೇಶಿಸಿದರು. 

ಆರೋಗ್ಯ ಇಲಾಖೆ ಮೂಲಕ ಆರೋಗ್ಯ ಕಲ್ಯಾಣ ಶಿಬಿರ ನಡೆಸುತ್ತಿರುವುದು ಒಳ್ಳೆಯ ಕೆಲಸ. ಆದರೆ ಜಿಪಂ ಸದಸ್ಯರು, ಅಧ್ಯಕ್ಷರನ್ನು ಏಕೆ ಆಮಂತ್ರಿಸಿಲ್ಲ ಎಂದು ಆರೋಗ್ಯಾಧಿಕಾರಿ ಡಾ| ಅಭಯಕುಮಾರ ಅವರನ್ನು ಸದಸ್ಯ ಹರ್ಷಾನಂದ ಪ್ರಶ್ನಿಸಿದರು. ಗೋಳಾ, ಮಾಡಿಯಾಳ ಆಸ್ಪತ್ರೆಗೆ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಜಿಪಂ ಸದಸ್ಯೆ ವಿಜಯಲಕ್ಷ್ಮೀ ರಾಗಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ ಒತ್ತಾಯಿಸಿದರು. 

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ತುಳಸಾಬಾಯಿ ಮಾನು ವರದಿ ಮಂಡಿಸಿದರು. ಒಂದು ವರ್ಷದಿಂದ ಅಂಗನವಾಡಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಆಗಿರುವ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ರೇವಣಸಿದ್ಧ ತಾವರಖೇಡ ಮಾತನಾಡಿ, 1.25ಲಕ್ಷ ಸಸಿಗಳನ್ನು ಹಂಗಾಮಿನಲ್ಲಿ ನೆಡುವ ಗುರಿ ಹೊಂದಲಾಗಿದೆ.

ಎಲ್ಲ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದ ವರದಿ ಮಂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣಾ ಗುಂಡಗುರತಿ ಅವರು ಎಸ್‌ ಡಿಎಂಸಿ ರಚನೆಗೆ, ಅನುದಾನಿತ ಶಾಲೆಗೆ ಶಿಕ್ಷಕರ ವೇತನ ಪಾವತಿಗೆ ವಿಳಂಬ ನೀತಿ ಅನುಸರಿಬಾರದು. ಶೈಕ್ಷಣಿಕ ವರ್ಷ ಆರಂಭದ ಮೊದಲೆ ಶಿಕ್ಷಕರ ನೇಮಕಾತಿ, ನಿಯೋಜನೆ ಪೂರ್ಣಗೊಳಿಸಬೇಕು ಎಂದು ಹರ್ಷಾನಂದ ಆಗ್ರಹಿಸಿದರು. 

ಮಾದನಹಿಪ್ಪರಗಾ ಸದಸ್ಯ ಗುರುಶಾಂತ ಪಾಟೀಲ, ಸರಸಂಬಾ ಜಿಪಂ ಸದಸ್ಯೆ ಕಲಾವತಿ ಎಂ. ನಾಗೂರೆ, ತಾಪಂ ಅಧ್ಯಕ್ಷೆ ನಾಗಮ್ಮ ಗುತ್ತೇದಾರ, ಉಪಾಧ್ಯಕ್ಷ ಗುರುನಾಥ ಪಾಟೀಲ ಹಾಜರಿದ್ದರು. ತಾಪಂ ಇಒ ಡಾ| ಸಂಜಯ ರೆಡ್ಡಿ, ಜಿಪಂ ಎಇಇ ತಾನಾಜಿ ವಾಡೇಕರ್‌, ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ, 

ರೇಷ್ಮೆ ಅಧಿಕಾರಿ ನಯಿಮ್‌ ಚೌಧರಿ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಫುಲಾರ, ತೋಟಗಾರಿಕೆ ಅಧಿಕಾರಿ ರಾಘವೇಂದ್ರ ಉಕ್ಕನಾಳ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಠಾಕೂರ್‌ ಚವ್ಹಾಣ, ಕೈಗಾರಿಕೆ ಅಧಿಕಾರಿ ಜಾಫರ್‌ ಅನ್ಸಾರಿ, ಬಿಸಿಎಂ ಹಾಗೂ ಇನ್ನಿತರ ಅಧಿಕಾರಿಗಳು ಇಲಾಖೆಯ ಪ್ರಗತಿ ವರದಿ ಮಂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next