Advertisement

ಕೋವಿಡ್ ಹತೋಟಿಗೆ ಮುನ್ನೆಚ್ಚರಿಕೆ ಅಗತ್ಯ

04:34 PM May 16, 2020 | Suhan S |

ಗಂಗಾವತಿ: ಕೋವಿಡ್ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಖಂಡಿತ. ಆದ್ದರಿಂದ ಎಲ್ಲರೂ ಮಾಸ್ಕ್ ಧರಿಸಿ, ಸ್ವಚ್ಛತೆ ಕಾಪಾಡುವ ಜತೆಗೆ ಭೌತಿಕ ಅಂತರ ಕಾಪಾಡಿಕೊಳ್ಳಬೇಕೆಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಲಕ್ಷ್ಮೀ ಕ್ಯಾಂಪಿನಲ್ಲಿ 700 ಜನರಿಗೆ ಆಹಾರದ ಕಿಟ್‌ ವಿತರಿಸಿ ಮಾತನಾಡಿದರು. ಲಾಕ್‌ ಡೌನ್‌ನಿಂದಾಗಿ ಜನರ ಜೀವನ ಕಷ್ಟವಾಗಿದೆ. ಸರಕಾರದ ಜತೆ ಉಳ್ಳವರು ಕೈ ಜೋಡಿಸಿ ಬಡ ಜನತೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ನಗರಸಭೆ ಸದಸ್ಯ ನವೀನಕುಮಾರ ಪಾಟೀಲ್‌, ಬಿಜೆಪಿ ಮುಖಂಡರಾದ ಚನ್ನಪ್ಪ ಮಳಗಿ, ಡಾ| ಅಮರೇಶ ಪಾಟೀಲ್‌, ಕಾಶಿನಾಥ ಚಿತ್ರಗಾರ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next