Advertisement

ಆನ್‌ಲೈನ್‌ನಲ್ಲಿ ಬೋಧಿಸಿ; ಶುಲ್ಕ ಪಡೆಯುವಂತಿಲ್ಲ

10:21 PM Apr 18, 2020 | Sriram |

ಬೆಂಗಳೂರು : ಖಾಸಗಿ ಶಾಲೆಗಳು ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ, ಪಾಠ ಪ್ರವಚನ ನಡೆಸಲು ಸರಕಾರದ ಯಾವುದೇ ಅಭ್ಯಂತರವಿಲ್ಲ. ಆದರೆ, ಇದೇ ನೆಪವೊಡ್ಡಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ನಡೆಸುವುದಕ್ಕೆ ಸರಕಾರದಿಂದ ಯಾವುದೇ ಆಕ್ಷೇಪ ಇಲ್ಲ. ಆದರೆ, ಇದೇ ನೆಪದಲ್ಲಿ ವಿದ್ಯಾರ್ಥಿಗಳಿಂದ ಅಥವಾ ಪಾಲಕ, ಪೋಷಕರಿಂದ ಶುಲ್ಕ ವನ್ನು ಪಡೆಯದಂತೆ ನಿರ್ದೇಶಿಸಿದೆ.

ಆನ್‌ಲೈನ್‌ ಬೋಧನಾ ಶುಲ್ಕ ಸೇರಿದಂತೆ ದಾಖಲಾತಿ ಶುಲ್ಕ, ಶಾಲಾ ಶುಲ್ಕ ಮತ್ತು ಬೇರೆ ಯಾವುದೇ ಶುಲ್ಕವನ್ನು ಸರಕಾರದ ಮುಂದಿನ ಆದೇಶದವರೆಗೂ ಪಡೆಯುವಂತಿಲ್ಲ ಹಾಗೂ ಪಾಲಕ, ಪೋಷಕರ ಮೇಲೂ ಈ ಕುರಿತು ಒತ್ತಡ ಹೇರುವಂತಿಲ್ಲ ಎಂದು ಎಲ್ಲ ಖಾಸಗಿ ಆಡಳಿತ ಮಂಡಳಿಗಳಿಗೆ ಸೂಚಿಸಿದೆ.

ಶಾಲಾಡಳಿತ ಮಂಡಳಿ ಮೇಲ್ಕಂಡ ಸೂಚನೆಗಳನ್ನು ಪಾಲಿಸದೆ ಕಾನೂನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ, ಸಾಂಕ್ರಾಮಿಕ ರೋಗಗಳ ಅಧಿನಿಯಮ 1890ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅಧಿ ಕಾರಿಗಳಿಗೆ ನಿರ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next