Advertisement
ಕೆಲ ವರ್ಷಗಳ ಹಿಂದೆ ಮದುವೆಯ ಸಂಭ್ರಮ ಅಂದರೆ, ನಿಶ್ಚಿತಾರ್ಥ, ಮೆಹಂದಿ, ಮದುವೆ, ರಿಸೆಪ್ಷನ್ ಅಷ್ಟೇ ಆಗಿತ್ತು. ಆದರೆ, ಈಗ ಆ ಸಾಲಿಗೆ ಪ್ರಿ ವೆಡ್ಡಿಂಗ್ ಫೋಟೋಶೂಟ್ ಸಹ ಸೇರಿಕೊಂಡಿದೆ. ಜೀವನದ ಅತಿ ಪ್ರಮುಖ ಘಟ್ಟದ, ಸುಮಧುರ ಕ್ಷಣಗಳನ್ನು ಜೀವನ ಪೂರ್ತಿ ನೆನಪಿನಲ್ಲಿರುವಂತೆ ಸೆರೆ ಹಿಡಿಯಲಾಗುತ್ತಿದೆ.
Related Articles
ಹೌದು, ಅವರಿಬ್ಬರಿಗೂ ತಿನ್ನೋದು ಅಂದರೆ ತುಂಬಾ ಇಷ್ಟ. ಮುಂಬೈನ ಬಹುತೇಕ ಎಲ್ಲ ಹೋಟೆಲ್, ಡಾಬಾ, ರೆಸ್ಟೋರೆಂಟ್, ಚಾಟ್ ಸ್ಟ್ರೀಟ್‌ನ ರುಚಿ ನೋಡಿರೋ ಇವರು ತಮ್ಮ ಪ್ರಿ ವೆಡ್ ಶೂಟ್‌ನ ಥೀಮ್ ಆಗಿ ಆರಿಸಿಕೊಂಡಿದ್ದು “ಫುಡ್’ ಅನ್ನೇ. ನಾವಿಬ್ಬರೂ ಬದುಕೋದಕ್ಕಾಗಿ ತಿನ್ನೋದಲ್ಲ, ತಿನ್ನೋದಕ್ಕಾಗೇ ಬದುಕಿದ್ದೇವೆ ಅನ್ನೋ ಇವರು, ತಮಗಿಷ್ಟದ ತಿನಿಸು ಸಿಗುವ ಎಲ್ಲ ತಾಣಗಳಲ್ಲೂ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
Advertisement
ಮದುವೆಗೂ ಸ್ವಲ್ಪ ದಿನಗಳ ಮುನ್ನ ಸೌಂದರ್ಯ, ಫಿಟೆ°ಸ್ ಕಾಪಾಡಿಕೊಳ್ಳೋದು ತುಂಬಾ ಮುಖ್ಯ. ಹಾಗಾಗಿ ಊಟ- ತಿಂಡಿ ಬಗ್ಗೆ ಗಮನ ಹರಿಸಬೇಕು ಅನ್ನುವವರ ಮಧ್ಯೆ ವಿಶಾಖ- ವಿನೀತ್ ಭಿನ್ನವಾಗಿ ಕಾಣಿಸುತ್ತಾರೆ. ತಾವು ಮೊದಲು ಭೇಟಿಯಾದ ರೆಸ್ಟೋರೆಂಟ್, ಆಗಾಗ ಹೋಗುವ ಹೋಟೆಲ್, ಪಾನ್ ಶಾಪ್, ಕಾಫಿ ಶಾಪ್, ಬೀದಿ ಬದಿಯ ಚಾಟ್ಸ್… ಹೀಗೆ ಎಲ್ಲ ಕಡೆಗೂ ಹೋಗಿ ತಿಂದು, ತಿನ್ನಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆಹಾರವೇ ಜೀವನ, ಜೀವನವೇ ಪ್ರೀತಿ ಅನ್ನುವ ಹಾಗೆ ಇವರ ಫೋಟೊಗಳಲ್ಲಿ “ಆಹಾರ ಪ್ರೀತಿ’ ಎದ್ದು ಕಾಣುತ್ತಿದೆ.
ರೋಸ್ ಅಲ್ಲ ಫ್ರೈಸ್ಗುಲಾಬಿ ಹೂವು ಅಥವಾ ಚಿನ್ನದುಂಗುರ ಹಿಡಿದು, ಮಂಡಿಯೂರಿ ಕುಳಿತು ಪ್ರಪೋಸ್ ಮಾಡೋದು ಗೊತ್ತೇ ಇದೆ. ವಿನೀತ್ ಸಹ ಮಂಡಿಯೂರಿ ಕುಳಿತು ವಿಶಾಖಾಗೆ ಪ್ರಪೋಸ್ ಮಾಡಿದ್ದೇನೋ ನಿಜ. ಆದ್ರೆ, ಕೈಯಲ್ಲಿ ಇದ್ದದ್ದು ರೋಸ್ ಅಲ್ಲ, ಬದಲಿಗೆ ಆಕೆಯ “ಹಾಟ್’ ಫೇವರಿಟ್ ಫ್ರೆಂಚ್ ಫ್ರೈಸ್! ಫುಡ್ ಗೈಡ್
ಇವರ ಫೋಟೋಶೂಟ್ ನೋಡಿದರೆ, ಮುಂಬೈಗೆ ಹೋದರೆ ಏನನ್ನೆಲ್ಲಾ ತಪ್ಪದೇ ತಿನ್ನಬೇಕು ಅನ್ನೋದು ಗೊತ್ತಾಗುತ್ತೆ. ಯಾಕಂದ್ರೆ, ಇವರು ತೆಗೆಸಿಕೊಂಡ ಫೋಟೋಗಳು ಫುಡ್‌ಗೆçಡ್ ಇದ್ದ ಹಾಗೇ ಇವೆ. ಯಾವ ಹೋಟೆಲ್‌ನಲ್ಲಿ ಏನು ಸ್ಪೆಷೆಲ್ ಅಂತ ಈ ಜೋಡಿಗೆ ಚೆನ್ನಾಗಿ ಗೊತ್ತು. ಫೇಸ್‌ಬುಕ್‌ನಲ್ಲಿ “ಸಂಸಾರ ಫೋಟೊಗ್ರಫಿ’ ಪೇಜ್‌ನಲ್ಲಿ ಇವರ ಪ್ರಿ ವೆಡ್ಡಿಂಗ್ ಫೋಟೋಗಳನ್ನು ನೋಡಬಹುದು. ಈ ಜೋಡಿಯ ವಿವಾಹ ಮಹೋತ್ಸವ ಜ.21ರಂದು ಗೋವಾದಲ್ಲಿ ನಡೆಯಲಿದೆ. ಈ ಫುಡ್ಡಿಗಳ ಮದುವೆಯ ಊಟದ ಮೆನುವಿನಲ್ಲಿ ಏನೇನೆಲ್ಲಾ ಇರಬಹುದು, ಅಲ್ವಾ?