Advertisement

ಕೊಂಡೆವೂರಿನ “ವಿಶ್ವಜಿತ್‌ ಅತಿರಾತ್ರ ಸೋಮಯಾಗ’ದ ಪೂರ್ವ ಸಿದ್ಧತಾ ಸಭೆ

05:29 PM Jan 25, 2019 | Team Udayavani |

ಮುಂಬಯಿ: ಜನರಿಗೆ ಭಾರತೀಯ ಸಂಸ್ಕೃತಿಯನ್ನು  ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ಸನಾತನ ಧರ್ಮದ ಉಳಿವಿಗೆ ಪ್ರೇರಕವಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ  ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ  ಎಂದು ಕೇಂದ್ರ ಸಚಿವ ಹಾಗೂ ಸೋಮಯಾಗ ಕೇಂದ್ರ ಸಮಿತಿಯ ಗೌರವಾಧ್ಯಕ್ಷ  ಶ್ರೀಪಾದ್‌ ಎಸೊÕà ನಾಯಕ್‌ ತಿಳಿಸಿದರು.

Advertisement

ಜ. 20 ರಂದು ಸಂಜೆ ಮುಲುಂಡ್‌ನ‌ ನವೋದಯ ವಿದ್ಯಾಲಯದ ಸಭಾಗೃಹದಲ್ಲಿ ಫೆ. 18  ರಿಂದ ಸಪ್ತಾಹವಾಗಿ ಕೊಂಡೆವೂರುನಲ್ಲಿ ಜರಗುವ “ವಿಶ್ವಜಿತ್‌ ಅತಿರಾತ್ರ ಸೋಮಯಾಗ’ ನಿಮಿತ್ತ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿ ಆಯೋಜಿಸಿ ದ್ದ ಪೂರ್ವಸಿದ್ಧತಾ ಸಭೆಯಲ್ಲಿ ಪ್ರಧಾನ ಅಭ್ಯಾಗ ತರಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದು, ಶ್ರೀಧಾಮ ಮಾಣಿಲ ಮುರುವ ಶ್ರೀ ಮಹಾಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಫೆ. 18 ರಿಂದ 24 ರವರೆಗೆ  ಕಾಸರಗೋಡು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಆಯೋಜಿಸಲಾದ “ವಿಶ್ವಜಿತ್‌ ಅತಿರಾತ್ರ ಸೋಮಯಾಗ’ದ ಅವಶ್ಯಕತೆ ಹಾಗೂ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಸೋಮಯಾಗ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ಭವಾನಿ ಫೌಂಡೇಶನ್‌ ನವಿಮುಂಬಯಿ ಇದರ ಸಂಸ್ಥಾಪಕ ದಡªಂಗಡಿ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಥಾಣೆ ಮುನ್ಸಿಪಾಲ್‌ ಕಾರ್ಪೊರೇಶನ್‌ನ ಮೇಯರ್‌ ಮೀನಾಕ್ಷಿ ಆರ್‌. ಶಿಂಧೆ, ಗಣೇಶ್‌ ಪುರಿ ಟ್ರಸ್ಟಿ ನ್ಯಾಯವಾದಿ  ಸಂದ್ಯಾ ಜಾಧವ್‌ ಹಾಗೂ ಸೋಮಯಾಗ ಸಮಿತಿ ಮುಂಬಯಿ  ಅಧ್ಯಕ್ಷ ಧರ್ಮಪಾಲ್‌ ಯು. ದೇವಾಡಿಗ, ಕಾರ್ಯಾಧ್ಯಕ್ಷ ಕೃಷ್ಣ ಎನ್‌. ಉಚ್ಚಿಲ್‌, ಗೌರವ ಕಾರ್ಯದರ್ಶಿ ಸದಾಶಿವ ಶೆಟ್ಟಿ ಕುಳೂರು, ಕಾರ್ಯಾಧ್ಯಕ್ಷರಾದ ಸಂಜೀವ ಶೆಟ್ಟಿ ಸಿಬಿಡಿ ಮತ್ತು ಭಾಸ್ಕರ್‌ ಶೆಟ್ಟಿ ಪುಣೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್‌, ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್‌ ರೈ ಪುತ್ತಿಗೆ, ನವೊದಯ ಕನ್ನಡ ಶಾಲೆಯ ಅಧ್ಯಕ್ಷ ಜಯ ಕೆ. ಶೆಟ್ಟಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿನನ್‌ ನಗರ ಜಯರಾಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದ‌ರು.

ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ  ಸಮಿತಿ ಕಾರ್ಯಾಧ್ಯಕ್ಷರಾದ ರಮೇಶ್‌ ಕೋಟ್ಯಾನ್‌ ಮತ್ತು ಯಶೋಧಾ ಬಟ್ಟಂಪಾಡಿ, ಕೋಶಾಧಿಕಾರಿ ಅಶೋಕ್‌ ಎಂ. ಕೋಟ್ಯಾನ್‌ ಥಾಣೆ ಕೋಶಾಧಿಕಾರಿ ಆಶಾಲತಾ ಕೆ. ಉಳ್ಳಾಲ್‌, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್‌ ಕೆ. ಚೇವಾರ್‌ ಮತ್ತು ಉಷಾ ಶೆಟ್ಟಿ ಸಹಕರಿಸಿದರು. ಮೋನಪ್ಪ ಎಂ. ಭಂಡಾರಿ, ಯಶೋದಾ ಭಟ್ಟಂಪಾಡಿ, ಜಯರಾಮ ಪೂಜಾರಿ, ವಿಶ್ವನಾಥ್‌ ಯು. ಮಾಡಾ, ತೋನ್ಸೆ ಸಂಜೀವ ಪೂಜಾ ರಿ, ಜಯಪ್ರಕಾಶ್‌ ಶೆಟ್ಟಿ, ಸ್ನೇಹ ಜಾಧವ್‌ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವಾಗಿ ಸಾಮೂಹಿಕ ಶ್ರೀ ವಿಷ್ಣುಸ ಹಸ್ರನಾಮ ಅಭಿಯಾನ, ಭಜನೆ ನಡೆಸಲ್ಪಟ್ಟಿತು.

ಧರ್ಮಪಾಲ್‌ ಯು. ದೇವಾಡಿಗ ಸ್ವಾಗತಿಸಿ ದರು. ನ್ಯಾಯವಾದಿ  ಸಂಧ್ಯಾ ಜಾಧವ್‌ ಗಣೇಶ್‌ ಪುರಿಯ ಸ್ವಾಮೀಜಿಯವರ ನ್ನೊಳಗೊಂಡು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಸೋಮಯಾಗ ಸಮಿತಿ ಮುಂಬಯಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Advertisement

 ನನ್ನ ಶಿಷ್ಯರ ಬಗ್ಗೆ ನನಗೆ ತುಂಬಾ ಅಭಿಮಾನ‌ವಿದೆ. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಂಬಾ ಉತ್ತಮ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿಯನ್ನು ಮಾಡಿದ್ದಾರೆ. “ವಿಶ್ವಜಿತ್‌ ಅತಿರಾತ್ರ ಸೋಮಯಾಗ’ ಕಾರ್ಯಕ್ರಮವು ತುಂಬಾ ಒಳ್ಳೆಯ ಕಾರ್ಯಕ್ರಮ. ಮುಂದಿನ ಅನೇಕ ಯೋಜನೆಗಳು ಪರಿಪೂರ್ಣಗೊಳ್ಳಲಿ. 
– ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರ

 ವಿಶ್ವಜಿತ್‌ ಅತಿರಾತ್ರ ಸೋಮಯಾಗವು ಜಗತ್ತಿನ ಹಿತಕ್ಕಾಗಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಮ್ಮಿಕೊಂಡಿದ್ದೇವೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ಮುಂಬಯಿ ಸಮಿತಿಯಿಂದ ನಮಗೆ ತುಂಬಾ ಸಹಕಾರ ಮತ್ತು ಪ್ರೋತ್ಸಾಹ ದೊರಕಿದ್ದು, ಮುಂದೆಯೂ ನಿಮ್ಮ ಸಹಕಾರವನ್ನು ಬಯಸುತ್ತೇನೆ.
  – ಶ್ರೀ ಯೋಗಾನಂದ ಸ್ವಾಮೀಜಿ,   ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ

 ಸೋಮಯಾಗ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನ ಪಡೆದಿರುವುದು ನನ್ನ ಭಾಗ್ಯ. ಶ್ರೀಧಾಮ ಮಾಣಿಲ ಕ್ಷೇತ್ರ ನನ್ನ ಊರಿನಲ್ಲಿದ್ದು, ಮುಂಬಯಿಯ ಹಲವರಿಗೆ ಸಹಕರಿಸಿ ಆರ್ಶಿವಾದಿಸಿದ ಕ್ಷೇತ್ರಕ್ಕೆ ಚಿರಋಣಿ ಯಾಗಿದ್ದೇನೆ. ಮುಂಬಯಿಯಲ್ಲಿನ ಅನೇಕ ಗಣ್ಯ ವ್ಯಕ್ತಿಗಳು ಸೋಮಯಾಗ  ಕಾರ್ಯಕ್ರಮ ದಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ.
– ಕೆ.ಡಿ.ಶೆಟ್ಟಿ, ಸಂಸ್ಥಾಪಾಧ್ಯಕ್ಷರು, ಭವಾನಿ ಫೌಂಡೇಷನ್‌ ಮುಂಬಯಿ

ಚಿತ್ರ-ವರದಿ : ರೊನಿಡಾ,ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next