Advertisement

ಗ್ರಾಮೀಣ ಭಾಗದಲ್ಲಿ ಮಳೆಗಾಲಕ್ಕೆ ಬಿರುಸು ಪಡೆದ ಪೂರ್ವ ತಯಾರಿ

04:02 AM Apr 26, 2019 | mahesh |

ಆಲಂಕಾರು: ಬೇಸಗೆಯ ದಿನಗಳು ಅಂತ್ಯವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದ ಪೂರ್ವ ತಯಾರಿ ಬಿರುಸಿನಿಂದ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯದ ಆಧುನಿಕತೆ ಎಷ್ಟೇ ಸುಧಾರಿಸಿದರೂ ಅನಾದಿ ಕಾಲದಿಂದಲೂ ಮಳೆಗಾಲಕ್ಕಾಗಿ ಜನತೆ ನಡೆಸಿಕೊಂಡು ಬರುತ್ತಿದ್ದ ಪೂರ್ವ ತಯಾರಿಯು ಇನ್ನೂ ಜೀವಂತವಾಗಿಯೆ ಉಳಿದಿದೆ.

Advertisement

ಮುಖ್ಯವಾಗಿ ಮಳೆಗಾಲದ ಸಮಯ ದಲ್ಲಿ ಅಡುಗೆ ಉಪಯೋಗಕ್ಕಾಗಿ ಬೇಕಾಗುವ ತರಕಾರಿ, ಆಹಾರ ಪದಾರ್ಥ ಸೇರಿದಂತೆ ಕಟ್ಟಿಗೆ ತಯಾರಿಕೆ ಕೆಲಸ ಕಾರ್ಯ ಗಳು ಕಾರ್ಮಿಕರ ಕೊರತೆಯ ನಡುವೆ ಬಹಳಷ್ಟು ಬಿರುಸಿ ನಿಂದ ನಡೆಯುತ್ತಿದೆ. ಪುರುಷರು ಕಟ್ಟಿಗೆ ತಯಾರಿಯಂತಹ ಕಠಿಣ ಕೆಲಸ ಕಾರ್ಯಗಳಲ್ಲಿ ಮಗ್ನರಾದರೆ ಮಹಿಳೆ ಯರು ಹಟ್ಟಿ ಗೊಬ್ಬರಕ್ಕೆ ಬೇಕಾದ ಒಣ ತರೆಗೆಲೆಗಳ ಸಂಗ್ರಹದಲ್ಲಿ ಮತ್ತು ಮಳೆಗಾಲದ ಆಹಾರ ಪದಾರ್ಥಗಳನ್ನು ಸಂಗ್ರಹಿಸುತ್ತಿದ್ದಾರೆ.

ಚಳಿಗೆ ವಿಶೇಷ ತಿನಸುಗಳು
ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿ ಸಿಗುವ ಹುಣಸೆ ಬೀಜವನ್ನು ಸಂಗ್ರಹಿಡು ತ್ತಾರೆ. ಇದರ ಜತೆಗೆ ಹಲಸಿನ ಹಪ್ಪಳ, ಸಿಹಿಗೆಣಸಿನ ಹಪ್ಪಳ, ಮರಗೆಣಸಿನ ಹಪ್ಪಳವನ್ನು ವಿಶಿಷ್ಟ ರೀತಿಯಲ್ಲಿ ಸಂಗ್ರಹಿಸಿಟ್ಟು ಮಳೆಗಾಲದಲ್ಲಿ ಉಪ ಯೋಗಿಸಲಾಗುತ್ತಿದೆ. ಜತೆಗೆ ಅಲ ಸಂಡೆ, ಹಾಗಲಕಾಯಿ ಮುಂತಾದ ತರಕಾರಿ ಗಳನ್ನು ಉಪ್ಪು ನೀರು ಹಾಕಿ ಒಣಗಿಸಿಟ್ಟು ಮಳೆಗಾಲದಲ್ಲಿ ಉಪಯೋಗಿಸುವುದು. ಅಕ್ಕಿ ಇನ್ನಿತರ ಆಹಾರ ಪದಾರ್ಥಗಳಿಂದ ತಯಾರಿಸಿದ ತಿಂಡಿ ತಿನಿಸುಗಳನ್ನು ಶೇಖರಿ ಸಿಡುವುದು ಇಂದಿಗೂ ವಾಡಿಕೆಯಲ್ಲಿದೆ.

ಕಟ್ಟಿಗೆ, ತರೆಗೆಲೆ, ಬೈಹುಲ್ಲು ಸಂಗ್ರಹ
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕ ಇನ್ನೂ ಅಳಿಯದೇ ಉಳಿದಿದ್ದು, ಕೃಷಿ ಕಾಯಕಗಳಿಗೆ ಮುಖ್ಯವಾದ ಪಶುಗಳ ಆಹಾರವಾಗಿ ಬೈಹುಲ್ಲು ಮತ್ತು ಹಟ್ಟಿಯ ಗೊಬ್ಬರಕ್ಕಾಗಿ ತರೆಗೆಲೆಗಳ ಸಂಗ್ರಹ ಪ್ರಮುಖ ಕೆಲಸವಾಗಿದೆ. ಮಳೆಗಾಲ ದಲ್ಲಿ ಎಡೆಬಿಡದೆ ಸುರಿಯುವ ಮಳೆಯ ಸಂದರ್ಭ ಅಡುಗೆ ಕಾರ್ಯಕ್ಕಾಗಿ ಸೌದೆ ಸಂಗ್ರಹವನ್ನು ಬೇಸಗೆಯಲ್ಲೆ ಮಾಡಲಾಗುತ್ತದೆ. ಇದಕ್ಕಾಗಿ ದುಬಾರಿ ಸಂಬಳ ವೆತ್ತಾದರೂ ಕಟ್ಟಿಗೆ ಸಂಗ್ರಹ ಕಾರ್ಯವನ್ನು ಇಂದಿಗೂ ಗ್ರಾಮೀಣ ಭಾಗದ ಜನತೆ ಮಾಡುತ್ತಿದ್ದಾರೆ.

ಕೂಲಿ ಕಾರ್ಮಿಕರ ಸಮಸ್ಯೆ
ಮಳೆಗಾಲಕ್ಕೆ ಗ್ರಾಮೀಣ ಪ್ರದೇಶ ದಲ್ಲಿರುವ ಮನೆಯ ಮಾಡು ದುರಸ್ತಿ ಯಿಂದ ಹಿಡಿದು ಮನೆಯ ಅಂಗಳ ರಿಪೇರಿಯವರೆಗೆ ಜನತೆ ಬಹಳಷ್ಟು ಕಾಮಗಾರಿಗಳನ್ನು ಬಿರುಸಿನಿಂದ ಮಾಡಿ ಮುಗಿಸುತ್ತಿದ್ದಾರೆ. ಮಳೆಗಾಲದ ಪೂರ್ವ ತಯಾರಿಯಾಗಿ ಕಟ್ಟಿಗೆ ತಯಾರಿ ಕೆಲಸವು ಅತ್ಯಂತ ಕಠಿಣದ ಕೆಲಸವಾಗಿದೆ. ಈ ಕೆಲಸ ಕಾರ್ಯಕ್ಕೆ ಕಾರ್ಮಿಕರ ಕೊರತೆ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಕಾಡುತ್ತಿದೆ. ದಿನಕ್ಕೆ 1,500 ರೂ. ದುಬಾರಿ ಸಂಬಳ ನೀಡಿದರೂ, ಈ ಕೆಲಸಕ್ಕೆ ಕಾರ್ಮಿಕರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿಯೇ ಜನತೆ ಗೋಬರ್‌ ಗ್ಯಾಸ್‌, ಸಿಲಿಂಡರ್‌ ಗ್ಯಾಸ್‌ಗೆ ಮೊರೆ ಹೋಗಿದ್ದಾರೆ.

Advertisement

ಆಹಾರ ಪದಾರ್ಥಗಳ ಸಂಗ್ರಹಣೆ
ಪಟ್ಟಣ ಪ್ರದೇಶದಲ್ಲಿ ಎಲ್ಲವೂ ಇದೀಗ ದುಬಾರಿ ಬೆಲೆಗೆ ಆಹಾರ ಪದಾರ್ಥಗಳು ಸಿಗುತ್ತಿದೆಯಾದರೂ, ಗ್ರಾಮೀಣ ಪ್ರದೇಶದಲ್ಲಿ ತಯಾರಿಸಿದಂತಹ ಆಹಾರ ಪದಾರ್ಥಗಳಷ್ಟು ಗುಣಮಟ್ಟ ಹೊಂದಿರುವುದಿಲ್ಲ. ಈ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದ ಪೂರ್ವ ತಯಾರಿಕಾ ಕೆಲಸ ಕಾರ್ಯಗಳು ಇನ್ನೂ ಜೀವಂತವಾಗಿದೆ. ಹಪ್ಪಳ ತಯಾರಿಸುವುದು, ಭತ್ತದ ಗದ್ದೆಗಳಲ್ಲಿ ತಾವೇ ಬೆಳೆಸಿದ ಸೌತೆ ಕಾಯಿಯನ್ನು ಮನೆಯೊಳಗೆ ಅಚ್ಚುಕಟ್ಟಾಗಿ ಕಟ್ಟುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಹಲಸಿನ ಬೀಜವನ್ನು ವಿಶಿಷ್ಟ ರೀತಿಯಲ್ಲಿ ಶೇಖರಿಸುವ ಪ್ರಕ್ರಿಯೆಗಳು ನಡೆಯುತ್ತದೆ. ಹಲಸಿನ ಕಾಯಿಯನ್ನು ಉಪ್ಪಿನಲ್ಲಿ ಹಾಕಿಟ್ಟು ಮಳೆಗಾಲಕ್ಕೆ ಶೇಖರಿಸಿಡುವುದು. ಹಲಸಿನ ಬೀಜವನ್ನು ಮಣ್ಣು ಸವರಿ ಮನೆಯ ಒಂದು ಮೂಲೆಯಲ್ಲಿ ಶೇಖರಿಸಿಡುತ್ತಾರೆ.

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next