Advertisement

ಏ.11ರಂದು ಸಿಎಂ ಭೇಟಿ: ಪೂರ್ವಭಾವಿ ಸಭೆ

04:20 PM Mar 11, 2022 | Team Udayavani |

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆ ಸೇರಿ ವಿವಿಧ ಯೋಜನೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ಏ.11 ಕ್ಕೆ ನಡೆಯಲಿದ್ದು, ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದರು.

Advertisement

ಗುರುವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಜಗಳೂರು ತಾಲೂಕಿಗೆ ಸಿಎಂ ಭೇಟಿ ನೀಡುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡುವ ಕಾಲ ಸನ್ನಿಹಿತವಾಗಿದ್ದು 1336 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿಗಳು ಭೂಮಿಪೂಜೆ ನೇರವೇರಿಸಲಿದ್ದು ಬಳಿಕ ವಿವಿಧ ಇಲಾಖೆಗಳ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದರು.

ಸಂಘ ಸಂಸ್ಥೆಗಳು, ರಾಜಕಾರಣಿಗಳು ಪ್ರಗತಿಪರ ಹೋರಾಟಗಾರರ 40 ವರ್ಷದ ಹೊರಾಟದ ಫಲವಾಗಿ ಈ ಯೋಜನೆ ತಾಲೂಕಿಗೆ ಬಂದಿದ್ದು ಇದ್ದಕ್ಕೆ ಯಡಿಯೂರಪ್ಪನವರ ಶ್ರಮ ಬಹಳಷ್ಟಿದೆ ಎಂದರು. ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿದ್ದು 60-40 ರ ಅನುಪಾತದಲ್ಲಿ ಅನುದಾನ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಲಿದೆ ಎಂದರು.

650 ಕೋಟಿ ರೂ ವೆಚ್ಚದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಕ್ಷೇತ್ರದ ಚಟ್ನಳ್ಳಿ ಗುಡ್ಡಕ್ಕೆ ನೀರು ಬಂದಿದ್ದು, ಸಿರಿಗೆರೆ ಶ್ರೀಗಳು ಸೂಚಿಸಿದ ದಿನಾಂಕದಂದು ತಾಲೂಕಿನ ತುಪ್ಪದಳ್ಳಿ ಕೆರೆಗೆ ನೀರು ಹರಿಯಲಿದೆ ಎಂದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಮಾತನಾಡಿ, ಈ ಕಾರ್ಯಕ್ರಮವನ್ನು ಜಿಲ್ಲಾಡಳಿತವೇ ಮುಂದೆ ನಿಂತು ಅದ್ಧೂರಿಯಾಗಿ ನೇರೆವೇರಿಸಲಿದೆ ಎಂದರು.

ಪ್ರತಿವರ್ಷ ಬರುವ ಯೋಜನೆಗಳು ಹಾಗೂ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಆಯಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನ ಮತ್ತು ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ನಿರಾವರಿ ನಿಗಮದ ಎಇಇ ಮೇಲೆ ಗರಂ ಆದ ಜಿಲ್ಲಾಧಿಕಾರಿಗಳು ಸಭೆಗೆ ಅಧಿ ಕಾರಿಗಳು ಬರುವುದು ಬಿಟ್ಟು ಇಂಜೀನಿಯರನ್ನು ಕಳುಹಿಸಿದ್ದಾರೆ. ನೀವು ಯಾಕೆ ಬಂದಿದ್ದಿರೀ ಎಂದು ನಿರವಾರಿ ನಿಗಮದ ಎಇಇ ಶ್ರೀಧರ ಅವರನ್ನು ಪ್ರಶ್ನಿಸಿದರು.

ವಾಲ್ಮೀಕಿ ಭವನ ನಿರ್ಮಾಣ ಮಾಡಿದ್ದು ಯಾರು? ಎಷ್ಟು ವರ್ಷ ಕಳೆದಿವೆ? ಪೈಪ್‌ ಗೆ ಈ ಹಗ್ಗವನ್ನು ಏಕೆ ಕಟ್ಟಿದ್ದಿರಿ ಎಂದು ಪ್ರಶ್ನಿಸಿದಾಗ ನಿರ್ಮಿತಿ ಕೇಂದ್ರದ ಇಂಜಿಯರ್‌ ನಮ್ಮ ಇಲಾಖೆಯಿಂದ ಮಾಡಿದ್ದೇವೆ ಎಂದಾಗ ಇದನ್ನು ದುರಸ್ಥಿಪಡಿಸಿ ಫೋಟೋ ತಂದು ತೋರಿಸಬೇಕು ಎಂದು ವಾರ್ನಿಂಗ್‌ ಮಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ, ಜಿ.ಪಂ ಸಿಇಒ , ಎಸ್‌.ಪಿ. ರಿಷ್ಯಂತ್‌, ಡಿಎಚ್‌ಒ ನಾಗರಾಜ್‌, ಎ.ಸಿ. ಮಮತ ಹೊಸಗೌಡರ್‌, ತಹಶೀಲ್ದಾರ್‌ ಜಿ.ಸಂತೋಷ್‌ ಕುಮಾರ್‌ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next