Advertisement

7 ಕ್ಕೆ ಮೌಲ್ಯಾಂಕನ ಪರೀಕ್ಷೆ

09:35 AM Jan 23, 2020 | mahesh |

ಬೆಂಗಳೂರು: 7ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಪರೀಕ್ಷೆ ಉಸ್ತುವಾರಿ ವಹಿಸಬೇಕಿರುವ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್‌ (ಕೆಎಸ್‌ಕ್ಯೂಎಎಸಿ)ಗೆ ಈವರೆಗೂ ಮಾಹಿತಿಯನ್ನು ಇಲಾಖೆ ನೀಡಿಲ್ಲ. ಈ ಸಂಬಂದ ಸರಕಾರಿ ಆದೇಶವೂ ಕೆಎಸ್‌ಕ್ಯೂಎಎಸಿಗೆ ತಲುಪಿಲ್ಲ. ಹೀಗಾಗಿ ಅಧಿಕಾರಿಗಳು ತಯಾರಿ ಮಾಡಿಲ್ಲ ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕೆಎಸ್‌ಕ್ಯೂಎಎಸಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Advertisement

ಮಾ.27ರಿಂದ ಎ.9ರ ವರೆಗೆ 2,879 ಪರೀಕ್ಷಾ ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಲಾಗುತ್ತಿದೆ. ಇದೇ ತಿಂಗಳಲ್ಲಿ 7ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಇವೆರಡೂ ಪರೀಕ್ಷೆ ಬೇರೆ ಬೇರೆಯಾದರೂ ಅಗತ್ಯ ಸಿದ್ಧತೆ ಅದೇ ಶಿಕ್ಷಕರು ಮಾಡಬೇಕಾಗುತ್ತದೆ. ಮೌಲ್ಯಾಂಕನ ಪರೀಕ್ಷೆಗೂ ರಾಜ್ಯ ಮಟ್ಟದಿಂದಲೇ ಪ್ರಶ್ನೆಪತ್ರಿಕೆ. ಅದನ್ನೂ ಗೌಪ್ಯತೆಯಿಂದ ಶಾಲೆಗಳಿಗೆ ತಲುಪಿಸಬೇಕು. ಇವೆಲ್ಲದರ ಜತೆಗೆ ಮೌಲ್ಯಾಂಕನ ಪರೀಕ್ಷೆಗೆ ಶಿಕ್ಷಕರು ಸ್ವತಃ ಸಜ್ಜಾಗಿ, ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು.

7ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಮಾರ್ಚ್‌ನಲ್ಲಿ ನಡೆಸಲಿದ್ದೇವೆ. ಸರಕಾರಿ ಆದೇಶ ಹೊರಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಆದೇಶದ ಅನಂತರ ಪರೀಕ್ಷೆಯ ರೂಪುರೇಷೆ ತಿಳಿಯಲಿದೆ.
-ಉಮಾಶಂಕರ್‌, ಪ್ರ.ಕಾರ್ಯದರ್ಶಿ, ಪ್ರಾ. ಮತ್ತು ಪ್ರೌಢಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next