Advertisement
ಈಗಾಗಲೇ ಇಲಿ ಮೇಲೆ ಈ ಔಷಧ ಪ್ರಯೋಗ ಮಾಡಲಾಗಿದ್ದು, ಶೇ. 90ರಷ್ಟು ಯಶಸ್ವಿಯಾಗಿದೆ. ಇದೀಗ ಅದನ್ನು ಮಾನವರ ಮೇಲೆ ಪ್ರಯೋಗ ಮಾಡಲು ಆಯುಷ್ ಇಲಾಖೆ ಮುಂದಾಗಿದೆ.
Related Articles
Advertisement
ಡೆಂಗ್ಯೂ ಜ್ವರ ದೇಶಾದ್ಯಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜನರಲ್ಲಿ ಭಯಹುಟ್ಟು ಹಾಕಿರುವ ಈ ಸಮಸ್ಯೆಗೆ ಔಷಧ ಕಂಡುಹಿಡಿಯುವ ಸಂಶೋಧನೆಗೆ ಆಯುಷ್ ಇಲಾಖೆ ಮುಂದಾಗಿತ್ತು. ಆದರೆ, ಈ ಔಷಧ ಮಾನವನ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಉಂಟಾಗದಂತೆ ನೋಡಿಕೊಳ್ಳಬೇಕಾಗಿದ್ದುದರಿಂದ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿತ್ತು.
ಡೆಂಗ್ಯೂ ಕಾಣಿಸಿಕೊಂಡ ವ್ಯಕ್ತಿಯಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆ ದಿಢೀರ್ ಕುಸಿಯುತ್ತದೆ. ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ ಹೆಚ್ಚಾದಂತೆ ಆಂತರಿಕ ರಕ್ತಸ್ರಾವ ಆರಂಭವಾಗಿ ರೋಗಿ ಸಾವನ್ನಪ್ಪುವ ಸಾಧ್ಯತೆ ಇದೆ. ಈ ಸಮಸ್ಯೆ ಬಗೆಹರಿಸಬೇಕಾದರೆ ಮೊದಲು ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿಮುಖವಾಗಿ ರಕ್ತಸ್ರಾವವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಆಧಾರದ ಮೇಲೆ ಸಂಶೋಧನೆ ನಡೆಸಿದಾಗ ಕೆಲವು ಫಲಪ್ರದ ಅಂಶಗಳು ಕಂಡುಬಂದವು. ಇದನ್ನು ಆಧರಿಸಿ ಆಯುಷ್ ಪಿಜೆ7 ಔಷಧ ಸಿದ್ಧಪಡಿಸಲಾಯಿತು. ಅದನ್ನು ಇಲಿಯ ಮೇಲೆ ಪ್ರಯೋಗ ಮಾಡಿದಾಗ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದು ರಕ್ತಸ್ರಾವ ಹತೋಟಿಗೆ ಬಂದಿತ್ತು. ಅದರಂತೆ ಆಯುಷ್ ಪಿಜೆ7 ಔಷಧವನ್ನು ಇನ್ನಷ್ಟು ಉನ್ನತೀಕರಿಸಿ ಮನುಷ್ಯರ ಮೇಲೆ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ ಎಂದು ಹೇಳುತ್ತಾರೆ.
ಮಧುಮೇಹಕ್ಕೆ ಔಷಧಿ: ಇದೇ ಸಂಶೋಧಕರ ತಂಡ ಟೈಪ್-2 ಮಧುಮೇಹ ನಿಯಂತ್ರಿಸುವ “ಆಯುಷ್ ಡಿ’ ಎಂಬ ಔಷಧ ಅಭಿವೃದ್ದಿಪಡಿಸಿದೆ. ಈ ಔಷಧವನ್ನೂ ಬೆಳಗಾವಿಯಲ್ಲಿ ಡಿ. 23ರಂದು ನಡೆಯುವ ಸಮಾರಂಭದಲ್ಲಿ ಪ್ರಯೋಗಕ್ಕೆ ಒಳಪಡಿಸಲು ಆಯುಷ್ ಇಲಾಖೆ ನಿರ್ಧರಿಸಿದೆ.
ಡೆಂಗ್ಯೂ ಕುರಿತಂತೆ ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್ ವಿಜ್ಞಾನಿಗಳ ತಂಡ ಕಂಡುಹಿಡಿದಿರುವ “ಆಯುಷ್ ಪಿಜೆ7′ ಔಷಧವನ್ನು ಇಲಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಔಷಧ ಜನತೆಗೆ ಉಪಯೋಗವಾಗಲಿದೆ.– ಡಾ.ಸುಲೋಚನಾ ಭಟ್,
ಆಯುಷ್ ಪಿಜೆ7 ಔಷಧ ಸಂಶೋಧನಾ ತಂಡದ ಸದಸ್ಯೆ – ದೇವೇಶ್ ಸೂರಗುಪ್ಪ