Advertisement
ನಗರಸಭೆ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿಯಾಗಿ ನಡೆದ ಸಾರ್ವಜನಿಕ ಮತ್ತು ಸಂಘ ಸಂಸ್ಥೆಗಳ ಹಾಗೂ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ವ್ಯಕ್ತವಾ ಗಿರುವ ಅಭಿಪ್ರಾಯವನ್ನು ಬಜೆಟ್‌ನಲ್ಲಿ ಸೇರಿಸುವ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ.
Related Articles
Advertisement
ಸದಸ್ಯ ರಿಯಾಜ್ ನೆಹರೂನಗರ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಸೇತುವೆ ಅಗಲ ಆಗಬೇಕೆಂದು ಸಲಹೆ ನೀಡಿ ದರು. ನಿವೃತ್ತ ಸಿಒ ಸುಂದರ ನಾಯ್ಕ್ ಮಾತನಾಡಿ, ಟ್ರಾಪಿಕ್ ಸಮಸ್ಯೆ ನಿವಾರಿಸಿ ಎಂದರು. ಬೊಳುವಾರಿನ ದಯಾನಂದ ಮಾತನಾಡಿ, ನಗರಸಭೆಯಲ್ಲಿ ಒಳಚರಂಡಿ ಯೋಜನೆ ಮಾಡುವುದು ಉತ್ತಮ ಎಂದರು. ರೋಟರಿ ಕ್ಲಬ್‌ನ ಉಮೇಶ್ ನಾಯಕ್ ಮಾತನಾಡಿ ಒಳ ರಸ್ತೆಗೂ ಫಉಟ್ ಆಪತ್ ಬರಲಿ ಎಂದರು.
ಟ್ರಾಪಿಕ್ ಸಮಸ್ಯೆ :
ವರ್ತಕರ ಸಂಘದ ಉಲ್ಲಾಸ್ ಪೈ ಮಾತ ನಾಡಿ, ಬಸ್‌ನಿಲ್ದಾಣದ ಬಳಿ ಫುಟ್‌ಪಾತ್ ಮಾಡಬೇಕು. ಟ್ರಾಫಿಕ್ ಸಮಸ್ಯೆ ಬಗೆ ಹರಿಸುವಂತೆ ಪ್ರಸ್ತಾಪಿಸಿದರು. ಯಾವು ದಾದರೂ ಜಾಗ ಸ್ವಾಧೀನ ಮಾಡಿ ವಾಹನ ಪಾರ್ಕಿಗ್‌ಗೆ ವ್ಯವಸ್ಥೆ ಮಾಡುವಂತೆ ನ್ಯಾಯ ವಾದಿ ನಾಗರಾಜ್ ಸಲಹೆ ನೀಡಿದರು.
ನಗರಸಭೆ ಪೌರಾಯಕ್ತ ಮಧು ಎಸ್. ಮನೋಹರ ಮಾತನಾಡಿ, ನಗರಸಭೆಯಲ್ಲಿ ಆಸ್ತಿ ತೆರಿಗೆ, ನೀರಿನ ಶುಲ್ಕ, ಜಾಹಿರಾತು ಶುಲ್ಕ, ಉದ್ದಿಮೆ ಪರವಾನಿಗೆ, ಬಾಡಿಗೆ, ಪಾರ್ಕಿಂಗ್ ಶುಲ್ಕದಲ್ಲ ಸೇರಿದಂತೆ ಬರುವ ಆದಾಯವನ್ನು ನೋಡಿಕೊಂಡು ಖರ್ಚುಗಳಲ್ಲ ರಸ್ತೆ, ಚರಂಡಿ ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ, ನೀರಿನ ನಿರ್ವಹಣೆ, ತ್ಯಾಜ್ಯ ನೀರು ಸಂಗ್ರಹ ಮಾಡುವ, ವಿದ್ಯುತ್ ಅಳವಡಿಕೆ ನಿರ್ವಹಣೆ ಮಾಡಲಾಗುತ್ತದೆ ಎಂದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಯೂಸೂಫ್, ಶಿವರಾಮ ಸಫಲ್ಯ, ಶಶಿಕಲಾ ಸಿ.ಎಸ್., ಪರಿಸರ ಸಂಪನ್ಮೂಲ ವ್ಯಕ್ತಿ ಡಾ| ರಾಜೇಶ್ ಬೆಜ್ಜಂಗಳ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅರವಿಂದ ಭಗವಾನ್, ನಗರಸಭೆ ಅಭಿಯಂತ ಶ್ರೀಧರ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ರವೀಂದ್ರ, ಎಸ್.ಆರ್. ದೇವಾಡಿಗ ಉಪಸ್ಥಿತರಿದ್ದರು.
ಸಲಹೆ ಸ್ವೀಕರಿಸಲಾಗುವುದು :
ಜೀವಂಧರ್‌ಜೈನ್ ಉತ್ತರಿಸಿ, ರೈಲ್ವೇ ಇಲಾಖೆಯೊಂದಿಗೆ ಸಂಸದರ ಜತೆ ಮಾತನಾಡಿ ರೈಲ್ವೇಯಿಂದ ನಿರಾಪೇಕ್ಷಣ ಪತ್ರ ಕೊಡಿಸುವ ಕುರಿತು ಚರ್ಚಿಸಲಾಗಿದೆ. ಆಸ್ತಿ ತೆರಿಗೆ, ನೀರಿನ ಬಿಲ್ ಅನ್ನು ಕೂಡಾ ಆನ್ ಲೈನ್ ಮೂಲಕ ಮಾಡುವ ವ್ಯವಸ್ಥೆಗೆ ಹಂತ ಹಂತವಾಗಿ ಹೋಗುತ್ತಿದ್ದೇವೆ. ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ನಿಗದಿತ ಸ್ಥಳದಲ್ಲಿ ಝೀಬ್ರಾಕ್ರಾಸ್ ಅಳವಡಿಸಲಾಗಿದೆ. ಇದರ ಜತೆಗೆ ಸ್ಥಳ ತನಿಖೆ ಬಾಕಿ ಇದೆ. ಪುತ್ತೂರು ಸಿಟಿ ಆಸ್ಪತ್ರೆಗೆ ಬರುವ ಕಾಂಕ್ರೀಟ್ ರಸ್ತೆ ವಿಸ್ತಾರ ಮಾಡುವ ಕುರಿತು ಪರಿಸರದ ಮನೆಯವರೊಂದಿಗೆೆ ಚರ್ಚಿಸಲಾಗಿದೆ. ಬಸ್ ಬೇ ಸಂಬಂಧಿಸಿ ನಗರ ಪ್ರದೇಶದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಮಾಡಲಾಗಿದೆ. ಸಾಮೆತ್ತಡ್ಕದಲ್ಲಿ ದೊಡ್ಡ ಪಾರ್ಕ್ ನಿರ್ಮಾಣ ಆಗಿದೆ. ಚಿಣ್ಣರ ಪಾರ್ಕ್, ನೆಲ್ಲಿಕಟ್ಟೆಯಲ್ಲಿ ಪಾರ್ಕ್ ಆಗಲಿದೆ. ಕೊಂಬೆಟ್ಟಿನಲ್ಲಿ ಅಟಲ್ ಪಾರ್ಕ್ ಇದೆ. ನೆಲಪ್ಪಾಲ್‌ನಲ್ಲಿ 40 ಸೆಂಟ್ಸ್ ಜಾಗದಲ್ಲಿ ಪಾರ್ಕ್ ಆಗಲಿದೆ. ಪಟ್ನೂರಿನಲ್ಲಿ ಔಷಧ ವನ ಆಗಲಿದೆ. ಸರಕಾರಿ ಜಾಗ ಖಾಲಿ ಇದೆಯೋ ಅಲ್ಲಿ ಸಣ್ಣ ಪಾರ್ಕ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ.ರಸ್ತೆಗಳ ಅಭಿವೃದ್ಧಿಗೆ ಎಲ್ಲ ವಾರ್ಡ್ ಗಳಿಗೆ 25 ಲಕ್ಷ ರೂ. ನೀಡಿದೆ. ಗ್ರಾಮಾಂತರಕ್ಕೂ ಗಮನ ಹರಿಸಿ, ಸಂಚಾರ ವ್ಯವಸ್ಥೆಯಲ್ಲಿ ಆಗುವ ಸಮಸ್ಯೆಯನ್ನು ನಿವಾರಿ ಸಲು ಸಂಪರ್ಕ ರಸ್ತೆಗೆ ಗಮನ ಹರಿಸಲಾಗುತ್ತದೆ. ನಿಮ್ಮ ಸಲಹೆ ಸ್ವೀಕರಿಸಲಾಗುತ್ತದೆ ಎಂದರು.