ಇಟಾನಗರ : 6 ಜಾತಿಗಳಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಸರ್ಕಾರದ ಶಿಫಾರಸ್ಸನ್ನು ವಿರೋಧಿಸಿ ಅರುಣಾಚಲ ಪ್ರದೇಶದಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಭಾನುವಾರವೂ ವ್ಯಾಪಕ ಹಿಂಸಾಚಾರ ನಡೆಸಲಾಗಿದ್ದು, ಉಪಮುಖ್ಯಮಂತ್ರಿ ಚೌನಾ ಮೇನ್ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ.
ಅರುಣಾಚಲ ಪ್ರದೇಶದ ಹೊರಗಿನ ಎಸ್‌ಟಿಗಳು, ನಾಮ್‌ಸಾಯಿ , ಚಾಂಗ್‌ಲಾಂಗ್ ಸೇರಿದಂತೆ 6 ಜನಾಂಗಗಳಿಗೆ ಪಿಆರ್‌ಸಿ ಗೆ ಸರಕಾರ ಶಿಫಾರಸ್ಸು ಮಾಡಿತ್ತು. ಇದನ್ನು ವಿರೋಧಿಸಿ ಸಾವಿರಾರು ಮಂದಿ ಬೀದಿಗೆ ಇಳಿದು ಹಿಂಸಚಾರಕ್ಕೆ ಇಳಿದಿದ್ದಾರೆ. ವ್ಯಾಪಕವಾಗಿ ಸಾರ್ವಜನಿಕ ಆಸ್ತಿ ಹಾನಿ ಮಾಡಲಾಗಿದೆ.
ಹಿಂಸಾಚಾರದಲ್ಲಿ ಪೊಲೀಸ್ ಗುಂಡು ತಗುಲಿ ಗಾಯಾಳಾಗಿದ್ದ ವ್ಯಕ್ತಿಯೊಬ್ಬ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಕಚೇರಿ ಹೊರಗೆ ನಿಲ್ಲಿಸಲಾಗಿದ್ದ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
Related Articles
ಪೊಲೀಸರು ಸೇರಿ ನೂರಕ್ಕೂ ಹೆಚ್ಚು ಮಂದಿ ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ.
ಶನಿವಾರ ಸೇನೆ ಪಥಸಂಚಲನ ನಡೆಸಿದ ಬಳಿಕವೂ ಹಿಂಸಾಚಾರ ನಿಯಂತ್ರಣಕ್ಕೆ ಬಂದಿಲ್ಲ.
ಹೊರಗಿನವರಿಗೆ ಪಿಆರ್‌ಸಿ ನೀಡಿದರೆ ಸ್ಥಳೀಯ ಜನರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಾಜ್ಯ ಸರ್ಕಾರ ಕಸಿದುಕೊಂಡಂತಾಗುತ್ತದೆ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.
ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರೂ ಅರುಣಾಚಲ ಸಿಎಂ ಪೆಮಾ ಖಂಡು ಅವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.