Advertisement

ಮಡಿವಾಳ ಸಮಾಜದಿಂದ ಶರತ್‌ಗೆ ಶ್ರದ್ಧಾಂಜಲಿ

02:35 PM Jul 14, 2017 | Team Udayavani |

ದಾವಣಗೆರೆ: ಬಂಟ್ವಾಳದ ಬಿ.ಸಿ. ರೋಡ್‌ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್‌ ಮಡಿವಾಳಗೆ ಗುರುವಾರ ಮಡಿಕಟ್ಟೆ 
(ಧೋಬಿಘಾಟ್‌) ಯುವಕರ ಸಂಘ ಹಾಗೂ ಮಡಿವಾಳ ಸಮುದಾಯದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಜಿಲ್ಲಾ ಪಂಚಾಯತಿ ಕಚೇರಿ ಎದುರಿರುವ ಮಡಿಕಟ್ಟೆಯಲ್ಲಿ ಜಮಾಯಿಸಿದ ಸಮುದಾಯ ಬಾಂಧವರು, ಶರತ್‌ ಮಡಿವಾಳರ ಕಗ್ಗೊಲೆ
ಕೃತ್ಯವನ್ನ ತೀವ್ರವಾಗಿ ಖಂಡಿಸಿ, ಅಮಾಯಕ ಶರತ್‌ ಮಡಿವಾಳರ ಕೊಲೆಗಡುಕರಿಗೆ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ
ಸರ್ಕಾರವನ್ನು ಒತ್ತಾಯಿಸಿದರು.

ನಂತರ ಮಾತನಾಡಿದ ನಗರಪಾಲಿಕೆ ಸದಸ್ಯ, ಮಡಿಕಟ್ಟೆ ಯುವಕರ ಸಂಘದ ಮುಖಂಡ ಆವರಗೆರೆ ಎಚ್‌.ಜಿ. ಉಮೇಶ್‌, ದೇಶದಲ್ಲಿ ವಿನಾಕಾರಣ ಆಮಾಯಕರ ಹತ್ಯೆ ನಡೆಯುತ್ತಿವೆ. ಒಂದು ಸಂಘಟನೆಯ ಕಾರ್ಯಕರ್ತನಾಗಿದ್ದ ಶರತ್‌ ಮಡಿವಾಳರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಅವರ ಲಾಂಡ್ರಿಯಲ್ಲೇ ಹತ್ಯೆ ಮಾಡಿದ್ದಾರೆ. ಇದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವ
ವಿಚಾರ. ರಾಜ್ಯ ಸರ್ಕಾರ ಕೊಲೆ ರಾಜಕೀಯ ಮಾಡುವುದನ್ನು ಬಿಟ್ಟು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿ ಸಿ ಸೂಕ್ತ ಕಾನೂನು ಕ್ರಮ
ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶರತ್‌ ಮಡಿವಾಳ ಹತ್ಯೆಯ ವಿಷಯವನ್ನು ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಿರುವುದು ಅಮಾನವೀಯ ವರ್ತನೆ. ಘಟನೆಯಲ್ಲಿ ಯಾವುದೇ ಪಕ್ಷ, ಸಂಘಟನೆಯ ವ್ಯಕ್ತಿಗಳು ಪಾಲ್ಗೊಂಡಿದ್ದರೂ ಸರ್ಕಾರ ಯಾವುದೇ ಒತ್ತಡಕ್ಕೆ ಒಳಗಾಗದೇ ತನಿಖೆ ನಡೆಸಿ, ತಪ್ಪಿತಸ್ಥರ ಬಂಧಿಸಿ, ಗಡೀಪಾರು
ಮಾಡಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಮಡಿವಾಳ ಸಮಾಜದ ಕಾರ್ಯಾಧ್ಯಕ್ಷ ಎಂ. ನಾಗೇಂದ್ರಪ್ಪ ಮಾತನಾಡಿ, ಶರತ್‌ ಕುಟುಂಬಕ್ಕೆ 25ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಮನವಿ ಮಾಡಿದರು. ನಗರಪಾಲಿಕೆ ಅ ಧಿಕಾರಿ ಕರಿಯಪ್ಪ,
ಮಂಜುನಾಥ್‌ ಅವರಗೊಳ್ಳ, ಮಡಿಕಟ್ಟೆ ಯುವಕರ ಸಂಘದ ಪದಾಧಿ ಕಾರಿಗಳಾದ ಎಂ. ಅಡಿವೆಪ್ಪ, ಎಂ.ಕೆ. ಬಸವರಾಜ್‌, ಎಸ್‌.
ನಿಂಗರಾಜ್‌, ಆರ್‌.ಎಂ. ರವಿ, ಡೈಮಂಡ್‌ ಮಾಲತೇಶ್‌, ಎಚ್‌. ಮಂಜುನಾಥ್‌, ಹರೀಶ್‌ ಹಾಗೂ ಎಂ.ವೈ. ಸತೀಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next