Advertisement

ಕೆಕೆಆರ್ ಪಾಲಾಗಿದ್ದ 48ರ ಹರೆಯದ ಸ್ಪಿನ್ನರ್ ಪ್ರವೀಣ್ ತಾಂಬೆ ಇನ್ನು ಐಪಿಎಲ್ ಆಡುವಂತಿಲ್ಲ

09:26 AM Feb 28, 2020 | keerthan |

ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗಿದ್ದ ಅತ್ಯಂತ ಹಿರಿಯ ಆಟಗಾರ ಪ್ರವೀಣ್ ತಾಂಬೆ ಐಪಿಎಲ್ ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. 48ರ ಹರೆಯದ ತಾಂಬೆ ಇನ್ನು ಐಪಿಎಲ್ ನಲ್ಲಿ ಆಡುವಂತಿಲ್ಲ.

Advertisement

ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಈ ಬಗ್ಗೆ ದೃಢೀಕರಿಸಿದ್ದಾರೆದಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಂಗ್ಲ ಮಾಧ್ಯಮ ವರದಿ ಮಾಡಿದೆ.

ಪ್ರವೀಣ್ ತಾಂಬೆಯವರು ಬಿಸಿಸಿಐನ ನಿಯಮಗಳನ್ನು ಮೀರಿ ಅಬುಧಾಬಿ ಟಿ10 ಲೀಗ್ ನ ಸಿಂಧೀಸ್ ತಂಡದ ಪರವಾಗಿ ಆಡಿದ್ದರು. ನಿಯಮದ ಪ್ರಕಾರ ಬಿಸಿಸಿಐನ ಅಡಿ ಬರುವ ಯಾವುದೇ ಆಟಗಾರ ವಿದೇಶಿ ಟೂರ್ನಿಗಳಲ್ಲಿ ಆಡುವಂತಿಲ್ಲ. ಆದರೆ ತಾಂಬೆ ಅಬುಧಾಬಿ ಟಿ10 ನಲ್ಲಿ ಭಾಗವಹಿಸಿದ್ದರು. ಹೀಗಾಗಿ ತಾಂಬೆ ಐಪಿಎಲ್ ನಲ್ಲಿ ಆಡುವುದನ್ನು ಬಹಿಷ್ಕರಿಸಲಾಗಿದೆ.

ಈ ಬಾರಿಯ ಐಪಿಎಲ್ ನಲ್ಲಿ ಪ್ರವೀಣ್ ತಾಂಬೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. 20 ಲಕ್ಷ ರೂ. ಗೆ ಕೆಕೆಆರ್ ಖರೀದಿಸಿತ್ತು. ಆದರೆ ತಾಂಬೆ ಅಲಭ್ಯವಾದ ಕಾರಣ ಕೆಕೆಆರ್ ಗೆ ಬದಲಿ ಆಟಗಾರನ ಖರೀದಿಗೆ ಅವಕಾಶ ಸಿಗುವ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next