Advertisement

ಪ್ರವೀಣ್ ಹತ್ಯೆ : ಕೊಲೆಗಡುಕರಿಗೆ ಉಗ್ರ ಶಿಕ್ಷೆ ನೀಡುತ್ತೇವೆ : ಸಿಎಂ ಬೊಮ್ಮಾಯಿ

05:39 PM Jul 27, 2022 | Team Udayavani |

ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳನ್ನು ಶೀಘ್ರವೇ  ಬಂಧಿಸಿ‌ ಉಗ್ರ ಶಿಕ್ಷೆಗೆ ಒಳಪಡಿಸುತ್ತೇವೆ. ಯಾರೂ ಆವೇಶಕ್ಕೆ ಒಳಗಾಗಬೇಕಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ  ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಜಿ‌ ಅವರ‌ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ..ಘಟನೆ ಹಿಂದೆ ಯಾರೇ‌ ಇದ್ದರೂ ಬಂಧಿಸುತ್ತೇವೆ . ಯಾರೂ ಆವೇಶಕ್ಕೆ ಒಳಗಾಗಬಾರದು, ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

ಮಂಗಳೂರು ಎಸ್ಪಿ ಅವರು ಕಾಸರಗೋಡು ಎಸ್ಪಿ ಜೊತೆ ಮಾತಾಡಿದ್ದಾರೆ.ರಾಜ್ಯದ ಡಿಜಿಪಿ ಕೇರಳ ಡಿಜಿಪಿ ಜೊತೆ ಮಾತನಾಡಿದ್ದಾರೆ.ಆರೋಪಿ ಬೆನ್ನತ್ತಿರುವ ತಂಡದ ಜೊತೆ ಡಿಜಿಪಿ ನಿರಂತರ ಸಂಪರ್ಕದಲ್ಲಿದ್ದಾರೆ.ಆದಷ್ಟು ಬೇಗ ಕೊಲೆಗಡುಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸುತ್ತೇವೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಇದರ ಹಿಂದೆ ಇರುವ ವ್ಯಕ್ತಿಗಳು ಹಾಗೂ ಸಂಘಟನೆಗಳು ಯಾರೇ ಇದ್ದರೂ ,ಅವರನ್ನು ಸದೆಬಡಿಯುವ ಕೆಲಸ ಮಾಡುತ್ತೇವೆ.ಸಮಾಜದಲ್ಲಿ ಹಿಂಸೆ ಮಾಡಿ ದುಷ್ಕೃತ್ಯ ಎಸಗುವವರನ್ನು ದಮನ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ.ಯಾರೂ ಆವೇಶಕ್ಕೆ ಒಳಗಾಗದೇ ಶಾಂತಿ ಸುವ್ಯವಸ್ಥೆ ಕಾಪಾಡಬೇಕು.ಯಾರು ಪ್ರಚೋದನಕಾರಿ ಹೇಳಿಕೆ ಕೊಡದೆ, ತನಿಖೆಗೆ ಎಲ್ಲರು ಸಹಕಾರ ಕೊಡಬೇಕು.ಎನ್ಐಎಗೆ ಕೊಡಲು ಕೆಲ ಷರತ್ತುಗಳು ಇವೆ.ಆ ರೀತಿ ಇದ್ದರೆ , ಪ್ರಾಥಮಿಕ ತನಿಖೆ ಆಧರಿಸಿ, ಮುಂದೆ ಎನ್ಐಎ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next