ಬೆಂಗಳೂರು : ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಜತೆ ಚರ್ಚೆ ನಡೆಸಲಾಗಿದ್ದು, ಇದುವರೆಗೆ ಹತ್ತು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಹೇಳಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಸಿಎಂ ಬೊಮ್ಮಾಯಿ, ಡಿಜಿಪಿ ಪ್ರವೀಣ್ ಸೂದ್ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಏನೆಲ್ಲ ಬೆಳವಣಿಗೆಯಾಗಿದೆ ಅದನ್ನ ಪ್ರವೀಣ್ ಸೂದ್ ವಿವರಿಸಿದ್ದಾರೆ.ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ.ಸದ್ಯ 10 ಜನರನ್ನ ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.
ನಮ್ಮ ಅಧಿಕಾರಿಗಳು ಕೇರಳಕ್ಕೆ ತೆರಳಿ ಸಹ ಹುಡುಕಾಟ ಮಾಡುತ್ತಿದ್ದಾರೆ.ಪ್ರಕರಣವನ್ನು ಎನ್ಐಎಗೆ ವಹಿಸುವ ವಿಚಾರ ಸದ್ಯಕ್ಕಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಅದನ್ನ ಗಮನಿಸುತ್ತೇವೆ. ಪೊಲೀಸರು ಕೊಡಬೇಕು ಅಂದರೆ ಕೊಡಲು ತಯಾರಿದ್ದೇವೆ, ಮುಂದೆ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರೋಪಿಗಳ ಬಂಧನಕ್ಕೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಈತರಹದ ಘಟನೆ ನಡೆದಾಗ ಯಾವ ಕೇಸ್ ಸಹ ಬಿಟ್ಟಿಲ್ಲ.ಹಿಂದಿನ ಸರ್ಕಾರದಲ್ಲಿ ಕೆಲವು ಕೇಸ್ ತೆನಿಖೆ ಆಯ್ತು, ಕೆಲವು ತೆನಿಖೆ ಮಾಡಲಿಲ್ಲ.ನಮ್ಮ ಸರ್ಕಾರದಲ್ಲಿ ಎಲ್ಲವೂ ತೆನಿಖೆ ನಡೆಸುತ್ತಿದ್ದೇವೆ. ಕರಾವಳಿಯಲ್ಲಿ ಕೇರಳದಿಂದ ಬರುವುದೆಲ್ಲ ನಡೆಯುತ್ತಿದೆ. ಕೇರಳ ಸರಕಾದ ಜತೆ ನಮ್ಮ ಡಿಜಿ ಮಾತನಾಡಿದ್ದಾರೆ. ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತೇವೆ. ಅಪಾರಧಿಗಳನ್ನ ಹಿಡಿದು ತರುವಲ್ಲಿ ನಮ್ಮ ಪೊಲೀಸರು ಸಫಲರಾಗುತ್ತಾರೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸಹಜ ಅಮಾಯಕರ ಮೇಲೆ ಹತ್ಯೆಯಾದಗ ನೋವಾಗುತ್ತದೆ. ಮನಸ್ಸು ಕಲಕುತ್ತದೆ .ಸಿಟ್ಟು ಬರುತ್ತದೆ,ಭಾವನೆಗಳು ಕೆದುಕುತ್ತದೆ.ಆರೋಪಿಗಳನ್ನ ಬಂಧಿಸಿದ ಮೇಲೆ ಆಕ್ರೋಶ ಕಡಿಮೆಯಾಗುತ್ತದೆ ಎಂದರು.