ಬೆಳ್ತಂಗಡಿ: ಅಜಿಲ ಸೀಮೆಯ ಆಡಳಿತಕ್ಕೆ ಒಳಪಟ್ಟ ತುಳುನಾಡಿನ ಪಶ್ಚಿಮ ಘಟ್ಟದ ತಪ್ಪಲಿನ ಫಲ್ಗುಣಿ ತಟದಲ್ಲಿ 850 ವರ್ಷಗಳ ಹಿಂದೆ ಸ್ಥಾಪಿಸಲಾದ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ. 24ರಿಂದ 28ರ ವರೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತು.
ಅಳದಂಗಡಿ ಅರಮನೆಯ ತಿಮ್ಮ ಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಸೀಮೆ ಯ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇ|ಮೂ| ಶ್ರೀಪಾದ ಪಾಂಗಣ್ಣಾಯರು ಮತ್ತು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕಾಜು ಮುಗೇರು ಸೀತಾರಾಮ ಹೆಬ್ಟಾರರು ಧಾರ್ಮಿಕ ವಿಧಿ ನೆರವೇರಿಸಿದರು.
ಡಿ. 24ರಂದು ವಾಸ್ತು ಪೂಜೆ, ಬಿಂಬಶುದ್ಧಿ, ಹಸುರು ಹೊರೆಕಾಣಿಕೆಯೊಂದಿಗೆ ಆರಂಭ ಗೊಂಡು ಡಿ. 25ರಂದು ಶ್ರೀ ಮಹಾ ಲಿಂಗೇಶ್ವರ, ಶ್ರೀ ಗಣಪತಿ ದೇವರ ಪ್ರತಿಷ್ಠೆ ನೆರವೇರಿತು. ಡಿ. 26ರಂದು ಶ್ರೀ ಉಳ್ಳಾಲ್ತಿ ದೇವಿಯ ಪ್ರತಿಷ್ಠೆ,, ಜೀವ ಕಲಶಾಭಿಷೇಕ, ಶ್ರೀ ಚಕ್ರ ಪೂಜೆ ನೆರವೇರಿತು. ಡಿ. 27ರಂದು ಕ್ಷೇತ್ರದ ಮೂಲಸ್ಥಳ ಭೂತಲಾ ಗುಡ್ಡೆ ಯಲ್ಲಿ ಸಾಮೂಹಿಕ ಪ್ರಾರ್ಥನೆ, ಸಾಲಿ ಗ್ರಾಮಕ್ಕೆ ರುದ್ರಾಭಿಷೇಕ ನಡೆದು ಡಿ. 28ರಂದು ಶ್ರೀ ಮಹಾಲಿಂಗೇಶ್ವರನಿಗೆ 25 ದ್ರವ್ಯ ಮಿಳಿತ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಸಂಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಹಾಪೂಜೆ, ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು. ಸಾಂಸ್ಕೃತಿಕ ಕಾರ್ಯ ಕ್ರಮ, ಭಜನೆ, ವಿವಿಧ ಮಠಾಧೀ ಶರಿಂ ದ ಧಾರ್ಮಿಕ ಪ್ರವಚನ ನೆರವೇರಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾ ಧ್ಯಕ್ಷ ಶಾಸಕ ಹರೀಶ್ ಪೂಂಜ, ಅಧ್ಯಕ್ಷ ಪ್ರಶಾಂತ್ ಎಂ. ಪಾರೆಂಕಿ, ಪ್ರಧಾನ ಕಾರ್ಯದರ್ಶಿ ಕೆ. ರವಿರಾಜ್ ಕುಲ್ಯರೊಟ್ಟು, ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್, ಅರ್ಚಕರಾದ ಕೆ. ಸೂರ್ಯನಾರಾಯಣ ಭಟ್ ಮೊದಲಾದವರು ಭಾಗವಹಿಸಿದ್ದರು.