Advertisement

ಪ್ರತಿಮಾ ದೇವಿ ಶಂಕರ್‌ ಸಿಂಗ್‌ ಅಂತ್ಯಕ್ರಿಯೆ

04:05 PM Apr 08, 2021 | Team Udayavani |

ಮೈಸೂರು: ಕನ್ನಡಚಿತ್ರ ರಂಗದ ಹಿರಿಯ ನಟಿ ಪ್ರತಿಮಾ ದೇವಿ ಶಂಕರ್‌ ಸಿಂಗ್‌(88) ಅವರ ಅಂತ್ಯಕ್ರಿಯೆ ಬುಧವಾರ ಚಾಮುಂಡಿಬೆಟ್ಟ ತಪ್ಪಲಿನ ವಿದ್ಯುತ್‌ ಚಿತಾಗಾರದಲ್ಲಿ ನಡೆಯಿತು.

Advertisement

ಇದಕ್ಕೂ ಮುನ್ನ ಸರಸ್ವತಿಪುರಂನ ಮೃತರ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅನೇಕರು ಅಂತಿಮ ದರ್ಶನ ಪಡೆದರು. ಬಳಿಕ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು.

ಮೃತರ ಪುತ್ರ ರಾಜೇಂದ್ರ ಸಿಂಗ್‌ ಬಾಬು, ಅಳಿಯ ಜೈಜಗದೀಶ್‌, ಮೊಮ್ಮಗ ಆದಿತ್ಯ ಸೇರಿದಂತೆ ಹಲವರು ಅಂತಿಮ ವಿಧಿ ವಿಧಾನ ನೆರವೇರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next