Advertisement

ಜ. 22: ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಡಿಕೆಶಿ, ಸಿದ್ದು

01:39 AM Jan 14, 2023 | Team Udayavani |

ಉಡುಪಿ:ಕಾಂಗ್ರೆಸ್‌ ಪಕ್ಷದ ವತಿಯಿಂದ ಮಿಷನ್‌ ಕಾಂಪೌಂಡ್‌ ಮೈದಾನದಲ್ಲಿ ಜ. 22ರಂದು ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಮೈಸೂರು ವಿಭಾಗದ ಕೆಪಿಸಿಸಿ ಉಸ್ತುವಾರಿ ಧ್ರುವನಾರಾಯಣ ಹಾಗೂ ರಾಜ್ಯ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಮೇಗಾ ಸಹಿತ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಶಶಿಧರ್‌ ಶೆಟ್ಟಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಭೂಮಸೂದೆ ಕಾಯ್ದೆಯ ಫ‌ಲಾನುಭವಿ ರೈತರು ಪಕ್ಷಭೇದವಿಲ್ಲದೆ ಈ ಕಾರ್ಯ ಕ್ರಮದಲ್ಲಿ ಭಾಗವಹಿಸ ಬಹುದು ಎಂದರು.

ಪಹಣಿಪತ್ರದ ಕಾಲಮಿತಿ ಹೆಚ್ಚಳಕ್ಕೆ ಆಗ್ರಹ
ಪಹಣಿಪತ್ರದ ಕಾಲಮಿತಿಯನ್ನು ಆದಾಯ ಹಾಗೂ ಜಾತಿಪ್ರಮಾಣ ಪತ್ರದಂತೆ ಕಾಲಮಿತಿ ವಿಸ್ತರಿಸುವುದು ಸೂಕ್ತವಾಗಿದ್ದು, ಕನಿಷ್ಠ ಪಕ್ಷ 3 ತಿಂಗಳಿಗೊಮ್ಮೆಯಾದರೂ ಕಾಲಮಿತಿ ಕಲ್ಪಿಸಬೇಕು. ಈ ಆರ್‌ಟಿಸಿಯ ಅವಧಿ ಕಾಲಮಿತಿ 15 ದಿನಕ್ಕಷ್ಟೇ ಸೀಮಿತವಾಗಿದೆ. ಇದನ್ನು ಹೆಚ್ಚಿಸಬೇಕು. ಡೀಮ್ಡ್ ಫಾರೆಸ್ಟ್‌ ಸಮಸ್ಯೆಗಳ ತ್ವರಿತ ವಿಲೇವಾರಿ, ತಾತ್ಕಾಲಿಕ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳುವುದು, ಸೂಕ್ತ ಸಮಯ

ದಲ್ಲಿ ರೈತರಿಗೆ ಸಬ್ಸಿಡಿ ಮತ್ತು ಬೆಂಬಲ ಬೆಲೆ ಒದಗಿಸುವ ಬಗ್ಗೆ ಸಹಿತ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಶೇಖರ್‌ ಕೋಟ್ಯಾನ್‌, ಸಂಚಾಲಕ ಭಾಸ್ಕರ ಶೆಟ್ಟಿ, ಪ್ರಮುಖರಾದ ಹರೀಶ್‌ ಶೆಟ್ಟಿ ಬ್ರಹ್ಮಾವರ, ಸುಂದರ ಶೆಟ್ಟಿಗಾರ್‌ ಹೆಬ್ರಿ, ಗ್ಲಾಬ್ರಿಯನ್‌ ಮಥಾಯಿಸ್‌ ಉಪಸ್ಥಿತರಿದ್ದರು.

Advertisement

ಯಾತ್ರೆ ಯಶಸ್ಸಿಗೆ ಸಮಾಲೋಚನೆ
ಮಂಗಳೂರು: ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ಜ. 22ರಂದು ನಡೆಯಲಿರುವ ಪ್ರಜಾಧ್ವನಿ ಯಾತ್ರೆಯ ಪೂರ್ವ ಸಮಾಲೋಚನ ಸಭೆಯು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಜರಗಿತು.

ಈ ವೇಳೆ ದಕ್ಷಿಣ ಕರ್ನಾಟಕ ಸಮನ್ವಯ ಸಮಿತಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಮಾತನಾಡಿ, ಈ ಯಾತ್ರೆಯ ಯಶಸ್ಸು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗುವಂತೆ ಬಿಂಬಿಸಬೇಕು. ಯಾತ್ರೆಗೆ ಸುಮಾರು 50 ಸಾವಿರದಷ್ಟು ಕಾರ್ಯಕರ್ತರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಆಕಾಂಕ್ಷಿಗಳು ಕಾಯೊìàನ್ಮುಖರಾಗಿ ಶ್ರಮಿಸಬೇಕು ಸೂಚಿಸಿದರು.

ಯಾತ್ರೆಯ ಕುರಿತು ನಾಯಕರಿಂದ ಅಭಿಪ್ರಾಯ ಕೇಳಲಾಯಿತು. ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌, ಮಾಜಿ ರಾಜ್ಯಸಭಾ ಸದಸ್ಯರಾದ ಬಿ.ಇಬ್ರಾಹಿಂ, ಶಾಸಕ ಯು.ಟಿ.ಖಾದರ್‌, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್‌, ಮಾಜಿ ಶಾಸಕರಾದ ಆರ್‌.ವಿ. ವೆಂಕಟೇಶ್‌, ಶಕುಂತಲಾ ಶೆಟ್ಟಿ, ಜೆ.ಆರ್‌.ಲೋಬೊ, ಐವನ್‌ ಡಿ’ಸೋಜಾ, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಅಶೋಕ್‌ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್‌ ರೈ, ಜಿ.ಎ. ಬಾವ, ರಕ್ಷಿತ್‌ ಶಿವರಾಂ, ಇನಾಯತ್‌ ಆಲಿ, ಧನಂಜಯ ಅಡ³ಂಗಾಯ, ಕೃಪಾ ಆಳ್ವಾ, ಮಮತಾ ಗಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಬ್ಲಾಕ್‌ ಉಸ್ತುವಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಡಿಸಿಸಿ ಉಪಾಧ್ಯಕ್ಷ ಸದಾಶಿವ್‌ ಉಳ್ಳಾಲ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next