ಬನ್ನೂರು: ಗ್ರಾಮೀಣ ಮಕ್ಕಳಿಗೆ ಆದ್ಯತೆ ನೀಡುವ ಮೂಲಕ ಗ್ರಾಮದ ಮಕ್ಕಳನ್ನು ಉತ್ತೇಜಿಸುವ ಹಂಬಲದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನ್ಪೋಟ್ಸ್ ಕ್ಲಬ್ ಅಧ್ಯಕ್ಷ ಬಿ.ಎಂ.ರಮೇಶ್ ಹೇಳಿದರು.
ಪಟ್ಟಣದ ನ್ಪೋಟ್ಸ್ ಕ್ಲಬ್ ಆವರಣದಲ್ಲಿ ನಡೆದ ಕ್ರೀಡಾದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಪೋಟ್ಸ್ ಕ್ಲಬ್ ಎಂದರೆ ಜನರ ಮನಸ್ಸಿನಲ್ಲಿ ವಿಭಿನ್ನವಾದ ಭಾವನೆ ಇದೆ. ಆದರೆ ಈ ಸಂಸ್ಥೆ ಆ ಭಾವನೆಗಳಿಗೆ ವಿರುದ್ಧವಾಗಿ ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ತನ್ನದೆ ಆದಂತ ಛಾಪನ್ನು ಮೂಡಿಸಿದೆ ಎಂದರು.
ಎಲ್ಲಾ ವರ್ಗದ ಜನರನ್ನು ಹೊಂದಿರುವ ಉತ್ತಮ ಸಂಸ್ಥೆ ನಮ್ಮದಾಗಿದ್ದು, ಸುಮಾರು 21 ವರ್ಷದ ಇತಿಹಾಸ ಹೊಂದಿದೆ. ಪ್ರತಿ ವರ್ಷ ಸಾರ್ವಜನಿಕ ವಲಯದಲ್ಲಿ ಕಣ್ಣಿಗೆ ಕಾಣದಂತೆ ಕೆಲಸ ನಿರ್ವಹಿಸುತ್ತಿದ್ದು, ಹಲವಾರು ಆರೋಗ್ಯ ತಪಾಸಣಾ ಶಿಬಿರ, ಯೋಗ ಶಿಬಿರ, ಬಡಮಕ್ಕಳಿಗೆ ಸಹಾಯ ಹಸ್ತ, ಮಕ್ಕಳನ್ನು ದತ್ತು ತೆಗೆದುಕೊಂಡು ಓದಿಸುವಂತಹ ಕೆಲಸ ನಿರಂತರವಾಗಿ ಮಾಡಿಕೊಮಡು ಬಂದಿದ್ದೇವೆ ಎಂದು ತಿಳಿಸಿದರು.
ಜಿಪಂ ಸದಸ್ಯ ಎಂ.ಸುದೀರ್ ಮಾತನಾಡಿ, ಉತ್ತಮ ಪದಾಧಿಕಾರಿಗಳಿಂದ ಉತ್ತಮ ಕೆಲಸ ಸಾಗುತ್ತಿದ್ದು, ಎಲ್ಲರ ಒಮ್ಮತದ ಅಭಿಪ್ರಾಯದಿಂದ ಸಮಾಜಕ್ಕೆ ಒಳಿತನ್ನು ಮಾಡುವ ಮೂಲಕ ತನ್ನದೆ ಆದಂತ ವರ್ಚಸ್ಸನ್ನು ಬನ್ನೂರು ನ್ಪೋಟ್ಸ್ ಕ್ಲಬ್ ಉಳಿಸಿಕೊಂಡಿದೆ. ಗ್ರಾಮೀಣ ಮಕ್ಕಳ ಉತ್ತೇಜನಕ್ಕೆ ಇಂತಹ ಕಾರ್ಯಕ್ರಮ ರೂಪಿಸಿ ಅವರಿಗೆ ಹೆಚ್ಚಿನ ಶಕ್ತಿ ತುಂಬುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿ.ಎನ್.ಇಂಚರ, ತರುಣ್, ರಿತೇಶ್ ಪ್ರೀತಂ, ಸಿಂಚನ, ಮಂಜುಶ್ರೀ, ಅನುಷ, ಸಹನಾ, ದರ್ಶಿನಿಯವರನ್ನು ಸನ್ಮಾನಿಸಲಾಯಿತು. ಡಾ.ಜಾnನ ಪ್ರಕಾಶ್, ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಜಿಪಂ ಸದಸ್ಯ ಎಂ.ಸುದೀರ್, ಪುರಸಭಾ ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಉಪನ್ಯಾಸಕ ಗೂಳೇಗೌಡ,
-ಡಾ.ಬಿ.ಕೆ.ಜಾnನಪ್ರಕಾಶ್, ಮರೀಗೌಡ, ಬಿ.ಎಸ್.ರವೀಂದ್ರ ಕುಮಾರ್, ಕೆ.ಎಸ್.ಸುರೇಶ್, ಆನಂತಮೂರ್ತಿ, ಬಿ.ಎಸ್.ಸತೀಶ್, ಪ್ರಭಾಕರ್, ನ್ಪೊಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಆರ್.ರಾಧಕೃಷ್ಣ, ನಿರ್ದೇಶಕರಾದ ಚಂದ್ರಶೇಖರ್, ವೈ.ಎನ್.ನಾಗರಾಜು, ವಡ್ಗಲ್ಲೇಗೌಡ, ಶ್ರೀನಿವಾಸ್, ಪ್ರಕಾಶ್, ಕುಮಾರ್, ಶಿವಕುಮಾರ್, ಸಮಾಜ ಸೇವಕ ಮಹೇಂದ್ರ ಸಿಂಗ್‌ಕಾಳಪ್ಪ,
-ಶಾಮಿಯಾನ ರವಿಕುಮಾರ್, ವೆಂಕಟೇಶ್, ನಯಾಜ್, ಮಂಚು, ಕೆಂಪೇಗೌಡ, ಟಿ.ಎನ್.ನಂಜು, ಪೊನ್ನುಸ್ವಾಮಿ, ಜಯಶೀಲ, ಎಸ್.ಮಂಜು, ಮಂಜುನಾಥ್, ಶ್ರೀಕಂಠ, ಚಂದ್ರಶೇಖರ್, ಕೃಷ್ಣೇಗೌಡ, ಮಣಿ, ಕೆಂಪದಾಸು, ಕಿರುಗಾವಲು ಪ್ರಕಾಶ್, ಪುಟ್ಟೇಗೌಡ, ತಿಮ್ಮೇಗೌಡ, ಕ್ಲಬ್ ಮಂಜು, ನಂದೀಶ್, ಕಾಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.