Advertisement

ಸಾಧನೆ ಶಿಖರವನ್ನೇರಲು ಪಣ ತೊಡಿ: ಭೆ„ರಪ್ಪನವರ 

05:03 PM Jul 27, 2018 | |

ಗಜೇಂದ್ರಗಡ: ಜೀವನದಲ್ಲಿ ಪ್ರತಿಯೊಬ್ಬರೂ ಕಠಿಣ ಅಭ್ಯಾಸ, ನಿರಂತರ ಸಾಧನೆ ಮಾಡುವುದರ ಜೊತೆಗೆ ವಿದ್ಯಾರ್ಥಿ ಸಮೂಹ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳದೇ ಸಾಧನೆಯ ಶಿಖರವನ್ನೇರಲು ಪಣತೊಡಿ ಎಂದು ಪ್ರಾಚಾರ್ಯ ಎಸ್‌.ಟಿ ಭೈರಪ್ಪನವರ ಹೇಳಿದರು. ಪಟ್ಟಣದ ದಿ| ಲಕ್ಷ್ಮೀ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕ್‌ ಶತಮಾನೋತ್ಸವ ಸವಿನೆನಪಿಗಾಗಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಮಾನವನ ಬದುಕಿನಲ್ಲಿ ಸಮಯ ಕೋಟಿ ಕೊಟ್ಟರೂ ಸಿಗದು. ಹೀಗಾಗಿ ವಿದ್ಯಾರ್ಥಿಗಳು ವೇಳೆಗೆ ಬಹಳ ಮಹತ್ವ ನೀಡಬೇಕು. ಅಂದಾಗ ಮಾತ್ರ ದೇಶ ಮೆಚ್ಚುವಂತಹ ಸಾಧನೆಗೈಲು ಸಾಧ್ಯ. ಜೀವನದಲ್ಲಿ ಎಲ್ಲರೂ ಯಶಸ್ಸು ಕಾಣಲು ಭಯ ಪಡುತ್ತಾರೆ. ಆದರೆ ಕೇವಲ ಹಣಗಳಿಸುವುದು, ವೈಭವದ ಜೀವನ ನಡೆಸುವುದರಿಂದ ಯಶಸ್ವಿಯಾಗುವುದಿಲ್ಲ. ಬದಲಾಗಿ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಿದಾಗ ಮಾತ್ರ ಯಶಸ್ಸು ಎಂಬ ಪದಕ್ಕೆ ಅರ್ಥ ಬರುತ್ತದೆ. ಜ್ಞಾನ ಮತ್ತು ಸ್ವ-ಸಹಾಯ ಪುಸ್ತಕಗಳು ಎಲ್ಲೆಡೆ ಸುಲಭವಾಗಿ ಸಿಗುತ್ತವೆ. ಆದರೆ ಒಬ್ಬ ವ್ಯಕ್ತಿಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಹಾಗೂ ಅವನ ಇರುವಿಕೆಯ ಅನುಭವವನ್ನು ಪುಸ್ತಕಗಳು ಕೊಡಲಾರವು. ಈ ನಿಟ್ಟಿನಲ್ಲಿ ಇಂತಹ ಪುರಸ್ಕಾರಗಳ ಸದ್ವಿನಿಯೋಗ ಪಡೆದುಕೊಳ್ಳಿ ಎಂದರು.

ಬ್ಯಾಂಕ ಚೇರಮನ್‌ ಎಸ್‌.ಎಸ್‌ ಪಟ್ಟೇದ ಅಧ್ಯಕ್ಷತೆ ವಹಿಸಿ, ಬ್ಯಾಂಕಿನ ಲಾಭದಲ್ಲಿ ಅಲ್ಪಭಾಗ ಮೊತ್ತವನ್ನು ತೆಗೆದು ಅದರ ಬಡ್ಡಿಯಲ್ಲಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ರೂಪದಲ್ಲಿ ನೀಡಬೇಕು ಎಂದು ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಕೈಗೊಂಡ ನಿರ್ಣಯದಂತೆ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತಿದೆ. ಪ್ರತಿಭೆಯಾರೊಬ್ಬರ ಸ್ವತ್ತಲ್ಲ. ಮಕ್ಕಳಲ್ಲಿ ಪ್ರತಿಭೆ ಇದ್ದೆ ಇರುತ್ತದೆ ಎಂಬುದು ಒಂದೊಂದು ರೀತಿಯಲ್ಲಿ ಅಡಕವಾಗಿರುತ್ತದೆ. ಅದನ್ನು ಹೊರಸೊಸುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮೇಲ್ಲರದ್ದಾಗಿದೆ. ಕನ್ನಡ ಭಾಷೆಯನ್ನು ಉತ್ತೇಜಿಸುವದಕ್ಕಾಗಿ ಪ್ರಸಕ್ತ ವರ್ಷದ 7ನೇ, 10ನೇ ತರಗತಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಬಿ.ವಿ ಕಂಬಳ್ಯಾಳ, ಪರಣ್ಣ ಕಡ್ಡಿ, ಮಂಜುನಾಥ ಮ್ಯಾಕಲ್‌, ಸುಜಾತಾ ಮೆಣಸಗಿ, ರಾಜಮತಿ ಹುಲಿ, ವೀರೇಶ ನಂದಿಹಾಳ, ಪವಾಡೆಪ್ಪ ಮ್ಯಾಗೇರಿ, ಸಿದ್ದಲಿಂಗಪ್ಪ ಕನಕೇರಿ, ಬ್ಯಾಂಕ್‌ ವ್ಯವಸ್ಥಾಪಕ ಆರ್‌.ಎಸ್‌. ಹೊಸಂಗಡಿ, ನಾಗರಾಜ ಹೊಸಂಗಡಿ, ಮಹಾಂತೇಶ ಇಂಡಿ, ಪ್ರದೀಪ ಮ್ಯಾಗೇರಿ, ವಿಜಯಕುಮಾರ ಹೊನವಾಡ, ಸಿದ್ದಣ್ಣ ರಂಜಣಗಿ, ಪ್ರಭು ಚಿಕ್ಕಮಠ, ವೀರಮ್ಮ ಜಡಿಮಠ, ಶಿವಲೀಲಾ ಸಂಗಟಿ, ಸಿ.ಎಚ್‌. ಹುಲ್ಲಣ್ಣವರ, ಜಗದೀಶ ಮಳಗಿ, ಎಸ್‌.ಕೆ ಇಂಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next